AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti Suzuki: ದೋಷಯುಕ್ತ ಏರ್​ಬ್ಯಾಗ್; 17,362 ಕಾರುಗಳನ್ನು ವಾಪಸ್ ಪಡೆಯಲಿದೆ ಮಾರುತಿ ಸುಜುಕಿ

ಹಿಂಪಡೆಯಲಾಗುವ ಕಾರುಗಳ ಏರ್​ಬ್ಯಾಗ್​ಗಳನ್ನು ಪರಿಶೀಲಿಸಲಾಗುವುದು. ಸಮಸ್ಯೆ ಕಂಡುಬಂದಲ್ಲಿ ಉಚಿತವಾಗಿ ಬೇರೆ ಏರ್​ಬ್ಯಾಗ್​​ ಅಳವಡಿಸಿಕೊಡಲಾಗುವುದು ಎಂದು ಕಂಪನಿ ಹೇಳಿದೆ.

Maruti Suzuki: ದೋಷಯುಕ್ತ ಏರ್​ಬ್ಯಾಗ್; 17,362 ಕಾರುಗಳನ್ನು ವಾಪಸ್ ಪಡೆಯಲಿದೆ ಮಾರುತಿ ಸುಜುಕಿ
ಮಾರುತಿ ಸುಜುಕಿ ಇಂಡಿಯಾ
TV9 Web
| Updated By: Ganapathi Sharma|

Updated on:Jan 18, 2023 | 12:53 PM

Share

ನವದೆಹಲಿ: ದೋಷಯುಕ್ತ ಏರ್​​ಬ್ಯಾಗ್​ ಸಮಸ್ಯೆಯ ಕಾರಣ 17,362 ಕಾರುಗಳನ್ನು ಹಿಂಪಡೆಯುತ್ತಿರುವುದಾಗಿ ಮಾರುತಿ ಸುಜುಕಿ ಇಂಡಿಯಾ (Maruti Suzuki India) ತಿಳಿಸಿದೆ. ವಾಪಸ್ ಪಡೆಯಲಾಗುವ ಕಾರುಗಳಲ್ಲಿ ಆಲ್ಟೊ ಕೆ10, ಬ್ರೆಜ್ಜಾ ಹಾಗೂ ಬಾಲೆನೊ ಮಾಡೆಲ್​​ ಕಾರುಗಳೂ ಇವೆ. ಕಾರುಗಳ ಏರ್​ಬ್ಯಾಗ್ ದೋಷ ಪರಿಶೀಲಿಸಲು ಮತ್ತು ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಎಸ್​-ಪ್ರೆಸ್ಸೊ, ಇಕೊ, ಗ್ರ್ಯಾಂಡ್ ವಿಟಾರ ಮಾಡೆಲ್​​ ಕಾರುಗಳನ್ನೂ ಹಿಂಪಡೆಯಲಾಗುತ್ತಿದೆ. 2022ರ ಡಿಸೆಂಬರ್​ 8ರಿಂದ 2023ರ ಜನವರಿ 12ರ ಅವಧಿಯಲ್ಲಿ ತಯಾರಾಗಿರುವ ಕಾರುಗಳನ್ನು ವಾಪಸ್ ಪಡೆಯಲಾಗುವುದು ಎಂದು ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ಹಿಂಪಡೆಯಲಾಗುವ ಕಾರುಗಳ ಏರ್​ಬ್ಯಾಗ್​ಗಳನ್ನು ಪರಿಶೀಲಿಸಲಾಗುವುದು. ಸಮಸ್ಯೆ ಕಂಡುಬಂದಲ್ಲಿ ಉಚಿತವಾಗಿ ಬೇರೆ ಏರ್​ಬ್ಯಾಗ್​​ ಅಳವಡಿಸಿಕೊಡಲಾಗುವುದು ಎಂದು ಕಂಪನಿ ಹೇಳಿದೆ. ಮೇಲೆ ಉಲ್ಲೇಖಿಸಿದ ಅವಧಿಯಲ್ಲಿ ತಯಾರಾದ ನಿರ್ದಿಷ್ಟ ಮಾದರಿಯ ಕೆಲವು ಕಾರುಗಳಲ್ಲಿ ಏರ್​ಬ್ಯಾಗ್​ಗಳಲ್ಲಿ ದೋಷವಿರಬಹುದು ಎಂದು ಶಂಕಿಸಲಾಗಿದೆ. ಇದು ವಾಹನ ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳು ಮತ್ತು ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳನ್ನು ನಿಯೋಜಿಸದಿರುವಿಕೆಗೆ ಕಾರಣವಾಗಬಹುದು. ಹೀಗಾಗಿ ಈ ಕುರಿತು ತಪಾಸಣೆ ನಡೆಸುವ ಅಗತ್ಯವಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: Auto Expo 2023: ಮಹೀಂದ್ರಾ ಥಾರ್ ಪ್ರತಿಸ್ಪರ್ಧಿ ಮಾರುತಿ ಸುಜುಕಿ ಜಿಮ್ನಿ ಅನಾವರಣ!

ಸಾಕಷ್ಟು ಎಚ್ಚರಿಕೆ ಕೈಗೊಳ್ಳಲಾಗಿದೆ. ಏರ್​ಬ್ಯಾಗ್ ಲೋಪದ ಬಗ್ಗೆ ಶಂಕೆಯುಳ್ಳ ವಾಹನಗಳನ್ನು ಪಡೆದಿರುವ ಗ್ರಾಹಕರು ಅದನ್ನು ಪರಿಶೀಲಿಸಿ, ಬದಲಾಯಿಸುವವರೆಗೆ ವಾಹನವನ್ನು ಓಡಿಸದಂತೆ ಅಥವಾ ವಾಹನವನ್ನು ಬಳಸದಂತೆ ಸೂಚಿಸಲಾಗಿದೆ ಎಂದು ಕಂಪನಿ ಹೇಳಿದೆ. ಲೋಪ ಇರಬಹುದು ಎಂದು ಶಂಕಿಸಲಾದ ಕಾರುಗಳ ಮಾಲೀಕರನ್ನು ಕಂಪನಿಯು ತಕ್ಷಣವೇ ಸಂಪರ್ಕಿಸುತ್ತಿದೆ. ಸಂಬಂಧಪಟ್ಟ ಶೋರೂಮ್​ಗಳು ಈ ಬಗ್ಗೆ ಕ್ರಮ ಕೈಗೊಂಡಿವೆ ಎಂದು ಕಂಪನಿ ಹೇಳಿದೆ.

ಇನ್ನಷ್ಟು ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Wed, 18 January 23

ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ