AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hero Glamour: ಭರ್ಜರಿ ಮೈಲೇಜ್ ನೀಡುವ ಹೊಸ ಹೀರೋ ಗ್ಲಾಮರ್ ಬೈಕ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳೊಂದಿಗೆ ಗ್ಲಾಮರ್ ಬೈಕ್ ಬಿಡುಗಡೆ ಮಾಡಿದೆ.

Hero Glamour: ಭರ್ಜರಿ ಮೈಲೇಜ್ ನೀಡುವ ಹೊಸ ಹೀರೋ ಗ್ಲಾಮರ್ ಬೈಕ್ ಬಿಡುಗಡೆ
ಹೊಸ ಹೀರೋ ಗ್ಲಾಮರ್ ಬೈಕ್ ಬಿಡುಗಡೆ
Praveen Sannamani
|

Updated on:Aug 25, 2023 | 9:40 PM

Share

ದೇಶದ ಅಗ್ರ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್(Hero MotoCorp) ತನ್ನ ಜನಪ್ರಿಯ ಗ್ಲಾಮರ್(Glamour) ಬೈಕ್ ಮಾದರಿಯನ್ನು ಬರೋಬ್ಬರಿ ಮೂರು ವರ್ಷಗಳ ನಂತರ ನವೀಕರಣಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಬಿಎಸ್6 ಎರಡನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳೊಂದಿಗೆ ಅಭಿವೃದ್ದಿಗೊಂಡಿದೆ. ಹೊಸ ಗ್ಲಾಮರ್ ಬೈಕ್ ಡ್ರಮ್ ಮತ್ತು ಡಿಸ್ಕ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಬಿಡುಗಡೆಯಾಗಿದ್ದು, ಡ್ರಮ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 82,348 ಬೆಲೆ ಹೊಂದಿದ್ದರೆ ಡಿಸ್ಕ್ ವೆರಿಯೆಂಟ್ ರೂ. 86,348 ಬೆಲೆ ಹೊಂದಿದೆ.

ಎಂಜಿನ್ ಕಾರ್ಯಕ್ಷಮತೆ ಮತ್ತು ಮೈಲೇಜ್

ಗ್ಲಾಮರ್ ಬೈಕ್ ಮಾದರಿಯನ್ನು 2020ರಲ್ಲಿ ಬಿಎಸ್6 ಜಾರಿ ನಂತರ ಹೀರೋ ಮೋಟೊಕಾರ್ಪ್ ಕಾರಣಾಂತರಗಳಿಂದ ಉನ್ನತೀಕರಿಸದೇ ಸ್ಥಗಿತಗೊಳಿಸಿತ್ತು. ಆದರೆ ಗ್ರಾಹಕರ ಬೇಡಿಕೆ ಆಧರಿಸಿ ಇದೀಗ ಹೊಸ ಮಾನದಂಡ ಪೂರೈಸಿರುವ 125 ಸಿಸಿ ಎಂಜಿನ್ ನೊಂದಿಗೆ ಬಿಡುಗಡೆ ಮಾಡಿದ್ದು, ಇದು ಅತಿಕಡಿಮೆ ಇಂಧನ ದಹಿಸುವಿಕೆಯೊಂದಿಗೆ ಹೆಚ್ಚಿನ ಇಂಧನ ದಕ್ಷತೆ ಹೊಂದಿದೆ.

ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಓಲಾ ಹೊಸ ಇವಿ ಸ್ಕೂಟರ್ ವಿಶೇಷತೆಗಳೇನು?

ಹೊಸ ಗ್ಲಾಮರ್ ಬೈಕ್ ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್‌ ಆಯ್ಕೆ ನೀಡಲಾಗಿದ್ದು, ಇದು 10.5 ಹಾರ್ಸ್ ಪವರ್ ಮತ್ತು 10.4 ಎನ್ಎಂ ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 60 ರಿಂದ 65 ಕಿ.ಮೀ ಮೈಲೇಜ್ ನೀಡಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ i3S ಐಡಲ್ ಸ್ಟಾಪ್/ ಸ್ಟಾರ್ಟ್ ಸೌಲಭ್ಯವು ಇಂಧನ ದಕ್ಷತೆ ಹೆಚ್ಚಳಕ್ಕೆ ಸಹಕಾರಿಯಾಗಿದೆ.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ OBD2 ಮಾನದಂಡದಿಂದಾಗಿ ಹೊಸ ವಾಹನಗಳು E20 ಇಂಧನ ಬೆಂಬಲಿಸಿದ್ದು, ಹೊಸ ವಾಹನಗಳಲ್ಲಿ ತುಂಬಿರುವ ಇಂಧನದಲ್ಲಿ ಪ್ರತಿ ಲೀಟರ್ ಗೆ ಶೇಕಡಾ 80 ರಷ್ಟು ಪೆಟ್ರೋಲ್ ಮತ್ತು ಶೇ. 20 ರಷ್ಟು ಎಥೆನಾಲ್ ಸಮ್ಮಿಶ್ರಣ ಹೊಂದಿರುತ್ತದೆ. ಇದರಿಂದಾಗಿ ಹೊಸ ವಾಹನಗಳ ಇಂಧನ ದಹಿಸುವಿಕೆ ಪ್ರಮಾಣ ಕಡಿಮೆಯಾಗಲಿದ್ದು, ಇದು ಮಾಲಿನ್ಯ ನಿಯಂತ್ರಣ ಮಾಡುವುದರ ಜೊತೆಗೆ ಹೆಚ್ಚಿನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಹಾಗೆಯೇ ಹೊಸ ಬೈಕ್ ಮಾದರಿಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಮುಂಭಾಗದಲ್ಲಿ ಟೆಲಿಸ್ಕೋಫಿಕ್ ಫೋರ್ಕ್ ಫ್ರಂಟ್ ಸಸ್ಷೆಂಷನ್ ಮತ್ತು ಹಿಂಬದಿಯಲ್ಲಿ ವಿವಿಧ ಹಂತದಲ್ಲಿ ಹೋಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾವರ್ಸ್ ನೀಡಲಾಗಿದೆ. ಈ ಮೂಲಕ ಹೊಸ ಬೈಕ್ 122.5 ಕೆ.ಜಿ ತೂಕ ಹೊಂದಿದ್ದು, ಸುರಕ್ಷತೆಗಾಗಿ ಡ್ರಮ್ ಮಾದರಿಯಲ್ಲಿ 130 ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಮಾದರಿಯಲ್ಲಿ 240 ಎಂಎಂ ಫ್ರಂಟ್ ಡಿಸ್ಕ್ ಪಡೆದುಕೊಂಡಿದೆ.

ಇದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿರುವ ಹೋಂಡಾ ಎಸ್‌ಪಿ160 ಬೈಕ್ ಬಿಡುಗಡೆ

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಗ್ಲಾಮರ್ ಬೈಕ್ ಮಾದರಿಯಲ್ಲಿ ಹೀರೋ ಮೋಟೊಕಾರ್ಪ್ ಈ ಹಿಂದಿನ ಮಾದರಿಯೆಂತೆ ವಿನ್ಯಾಸ ಭಾಷೆ ಮುಂದುವರಿಸಿದ್ದು, ತಾಂತ್ರಿಕ ವೈಶಿಷ್ಟ್ಯತೆಗಳಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿದೆ. ಹೊಸ ಬೈಕಿನಲ್ಲಿ ಉನ್ನತೀಕರಿಸಿದ ಎಂಜಿನ್ ನಂತರ ಆಕರ್ಷಕ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ಬೈಕ್ ಸವಾರರು ಇದೀಗ ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಫ್ಯೂಲ್ ಇಂಡಿಕೇಟರ್ ಮತ್ತು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಯುಎಸ್ ಬಿ ಜೋಡಣೆ ಹೊಂದಿದೆ.

ಇದರೊಂದಿಗೆ ಹೊಸ ಬೈಕ್ ಮಾದರಿಯು ಕ್ಯಾಂಡಿ ಬ್ಲೇಜಿಂಗ್ ರೆಡ್, ಟೆಕ್ನೋ ಬ್ಲೂ ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್ ಬ್ಲಾಕ್ ಎನ್ನುವ ಪ್ರಮುಖ ಮೂರು ಹೊಸ ಬಣ್ಣಗಳ ಆಯ್ಕೆ ಹೊಂದಿದ್ದು, ಇದು 125 ಸಿಸಿ ವಿಭಾಗದ ಪ್ರಮುಖ ಬೈಕ್ ಮಾದರಿಗಳಾದ ಬಜಾಜ್ ಪಲ್ಸರ್ 125, ಟಿವಿಎಸ್ ರೈಡರ್ 125 ಮತ್ತು ಹೋಂಡಾ ಶೈನ್ ಬೈಕ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Published On - 9:38 pm, Fri, 25 August 23