AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಫೀಚರ್ಸ್ ಗಳೊಂದಿಗೆ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ನವೀಕರಿಸಿದ ಕ್ಲಾಸಿಕ್ 350 ಬೈಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಭರ್ಜರಿ ಫೀಚರ್ಸ್ ಗಳೊಂದಿಗೆ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬಿಡುಗಡೆ
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
TV9 Web
| Edited By: |

Updated on: Sep 01, 2024 | 10:46 PM

Share

ದೇಶದ ಜನಪ್ರಿಯ ಮಾರ್ಡನ್ ಕ್ಲಾಸಿಕ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ರಾಯಲ್ ಎನ್‌ಫೀಲ್ಡ್  (Royal Enfield) ತನ್ನ ನವೀಕರಿಸಿದ ಕ್ಲಾಸಿಕ್ 350 (Classic 350)  ಬೈಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಹಲವಾರು ಪ್ರೀಮಿಯಂ ಫೀಚರ್ಸ್ ನೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1,95,500 ಆರಂಭಿಕ ಬೆಲೆ ಹೊಂದಿದೆ.

ನವೀಕರಿಸಿದ ಕ್ಲಾಸಿಕ್ 350 ಬೈಕ್ ಮಾದರಿಯು ಪ್ರಮುಖ ಐದು ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಆರಂಭಿಕ ಮಾದರಿಯು ರೂ. 1,95,500 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2.30 ಲಕ್ಷ ಬೆಲೆ ಹೊಂದಿದೆ. ಹೊಸ ಬೈಕ್ ಈ ಬಾರಿ ಹೆರಿಟೇಜ್, ಹೆರಿಟೇಜ್ ಪ್ರೀಮಿಯಂ, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎನ್ನುವ ಹೊಸ ವೆರಿಯೆಂಟ್ ಗಳನ್ನು ಪಡೆದುಕೊಂಡಿದ್ದು, ಹಳೆಯ ಮಾದರಿಗಿಂತ ಹೊಸ ಆವೃತ್ತಿಯು ರೂ. 5 ಸಾವಿರದಿಂದ 8 ಸಾವಿರದಷ್ಟು ದುಬಾರಿಯಾಗಿದೆ.

ಸಖತ್ ಫೀಚರ್ಸ್ ಜೋಡಣೆ

ರಾಯಲ್ ಎನ್‌ಫೀಲ್ಡ್ ಕಂಪನಿಯ ಬಹುಬೇಡಿಕೆಯ ಬೈಕ್ ಮಾದರಿಯಾಗಿರುವ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಈ ಬಾರಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಎಲ್ಲಾ ವೆರಿಯೆಂಟ್ ಗಳಿಗೂ ಅನ್ವಯಿಸುವಂತೆ ಎಲ್ಇಡಿ ಪೈಲೆಟ್ ಹೆಡ್ ಲೈಟ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಎಲ್ಇಡಿ ಇಂಡಿಕೇಟರ್ ಸೌಲಭ್ಯವನ್ನು ನೀಡಲಾಗಿದೆ.

ಹೊಸ ಬೈಕ್ ಮಾದರಿಯಲ್ಲಿ ಮೊದಲ ಬಾರಿಗೆ ಎಲ್ಲಾ ವೆರಿಯೆಂಟ್ ಗಳಲ್ಲೂ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಜೊತೆಗೆ ಹೊಂದಾಣಿಕೆ ಮಾಡಬಹುದಾದ ಲಿವರ್ಸ್ ಸೇರಿದಂತೆ ಸಿಂಗಲ್ ಚಾನೆಲ್ ಎಬಿಎಸ್ ನೀಡಲಾಗಿದ್ದು, ಈ ಹಿಂದಿನ ಮಾದರಿಯಲ್ಲಿ ಡ್ರಮ್ ಬ್ರೇಕ್ ಆವೃತ್ತಿಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಜೆ-ಪ್ಲ್ಯಾಟ್ ಫಾರ್ಮ್ ನಿರ್ಮಾಣವಾಗಿರುವ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಈ ಹಿಂದಿನಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 20 ಹಾರ್ಸ್ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಬೈಕ್ ಮಾದರಿಯಲ್ಲಿ ವಿನ್ಯಾಸ ಮತ್ತು ಕೆಲವು ತಾಂತ್ರಿಕ ವೈಶಿಷ್ಟ್ಯತೆಗಳು ಹಳೆಯ ಮಾದರಿಯಲ್ಲಿರುವಂತೆಯೇ ಮುಂದುವರೆಸಲಾಗಿದ್ದು, ಇದು ಟ್ರಯಂಫ್ ಸ್ಪೀಡ್ 400, ಹಾರ್ಲೆ ಡೇವಿಡ್ಸನ್ ಎಕ್ಸ್440, ಜಾವಾ 350 ಮತ್ತು ಸಿಬಿ350 ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.