Agriculture : ಊರಿನ ತರಕಾರಿಯ ಹುಡುಕಾಟ : ಹಳ್ಳಿಯಲ್ಲೇ ಮಾರುಕಟ್ಟೆ ಸೃಷ್ಟಿಯಾದರೆ ಬೆಳೆದವರಿಗೆ ಲಾಭ

Agriculture : ವಿವಿಧ ರಾಸಾಯನಿಕಗಳಲ್ಲಿ ಬಲವಂತವಾಗಿ ಅದ್ದಿದ ಹಣ್ಣುಗಳ ಅಕರಾಳ ಮುಖಗಳು ಬಿತ್ತರವಾದುವು. ಈಚೆಗಂತೂ ಉಪಾಹಾರದ ಪ್ಲೇಟಿನಲ್ಲಿ ಬ್ರೆಡ್ ಕುಣಿಯುತ್ತಿದೆ! ಇವೆಲ್ಲ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುವ ಅರಿವಿನಿಂದ ನಿರ್ವಿಷ ಆಹಾರಗಳ ಹುಡುಕಾಟಕ್ಕೆ ವೇಗ ಬಂದಿದೆ.”

Agriculture : ಊರಿನ ತರಕಾರಿಯ ಹುಡುಕಾಟ : ಹಳ್ಳಿಯಲ್ಲೇ ಮಾರುಕಟ್ಟೆ ಸೃಷ್ಟಿಯಾದರೆ ಬೆಳೆದವರಿಗೆ ಲಾಭ
ವರ್ಮುಡಿ ಶಿವಪ್ರಸಾದ್ ಅವರು ಬೆಳೆದ ತರಕಾರಿ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 23, 2022 | 8:06 AM

‘ಊರಿನ ತರಕಾರಿ ಬಂದಿದೆಯಾ?’ ಬಹುತೇಕ ತರಕಾರಿ ಅಂಗಡಿಗಳಲ್ಲಿ ಗ್ರಾಹಕರು ಕೇಳುವ ಮೊದಲ ಪ್ರಶ್ನೆ. ಊರಿನದ್ದಾದರೆ ದರದಲ್ಲಿ ಚೌಕಾಶಿ ಮಾಡದೆ ಬೇಕಾದ್ದಕ್ಕಿಂತ ಒಂದರ್ಧ ಕಿಲೋ ಹೆಚ್ಚೇ ಒಯ್ಯುತ್ತಾರೆ. ಉಣ್ಣುವವನಿಗೆ ಗೊತ್ತಿದೆ, ಇಂದು ಎಲ್ಲಾ ತರಕಾರಿಗಳು ರಾಸಾಯನಿಕಗಳಲ್ಲಿ ಮಿಂದೆದ್ದು ಅಡುಗೆ ಮನೆ ಸೇರುತ್ತವೆ. ಸ್ಥಳೀಯವಾಗಿ ಬೆಳೆಯುವ ತರಕಾರಿಗಳಲ್ಲಿ ರಾಸಾಯನಿಕಗಳನ್ನು ಬಳಸುವುದಿಲ್ಲ ಎನ್ನುವುದು ನಂಬುಗೆ. ಆದರೆ ವಾಸ್ತವ ಮಾತ್ರ ಭಿನ್ನ. ಮಾರುಕಟ್ಟೆಗಾಗಿ ವಿವಿಧ ಸಿಂಪಡಣೆಗಳಿಂದ ತೋಯಿಸಿದ ಹೊಲದ ಒಂದು ಪಾಶ್ರ್ವದಲ್ಲಿ ತಮಗೆ ಬೇಕಾದಷ್ಟು ವಿಷ ರಹಿತವಾಗಿ ಪ್ರತ್ಯೇಕವಾಗಿ ಬೆಳೆಯುವ ಜಾಣರೂ ಇದ್ದಾರೆ! ಇನ್ನೊಂದು ಮೈಂಡ್‍ಸೆಟ್ ನೋಡಿ. ‘ದುಡ್ಡು ಬಿಸಾಕಿದರೆ ಆಯಿತು. ಏನನ್ನೂ ತರಬಹುದು,’ ಎನ್ನುವ ಅಹಮಿಕೆಯ ಮಾತುಗಳನ್ನು ನಿತ್ಯ ಕೇಳುತ್ತಿರುತ್ತೇವೆ. ಸರಿ, ದುಡ್ಡು ಕೊಟ್ಟರೆ ಏನನ್ನೂ ತರಬಹುದು, ಆದರೆ ಆರೋಗ್ಯವನ್ನೋ? ಸಂದು ಹೋದ ಆಯುಷ್ಯವನ್ನು? ಅಕ್ಕಿ ಅಂದರೆ ಬಿಳಿಯಕ್ಕಿ, ಟೊಮೆಟೋ ನುಣುಪಾಗಿರಬೇಕು, ಬದನೆಯನ್ನು ಹುಳ ಕೊರೆದಿರಬಾರದು-ದೊಡ್ಡ ಗಾತ್ರದ್ದಾಗಿರಬೇಕು, ಕ್ಯಾಬೇಜ್ ಪಳಪಳ ಹೊಳೆಯಬೇಕು.. ಹೀಗೆಲ್ಲಾ ಹಲವು ನಿರೀಕ್ಷೆಗಳು.

ಹಿಂದೊಮ್ಮೆ ಬೆಂಗಳೂರಿನ ಕೃಷಿ ಮೇಳದ ಅಕ್ಕಿ ಮಳಿಗೆಯಲ್ಲಿ ಒಬ್ಬರ ಮಾತಿಗೆ ಕಿವಿಯಾಗಿದ್ದೆ. “ನನ್ನ ಮೊಮ್ಮಗಳಿಗೆ ಹಸಿವೆ ಇಲ್ಲ. ಯಾವ ಆಹಾರವನ್ನೂ ತಿನ್ನೋದಿಲ್ಲ. ವೈದ್ಯರಲ್ಲಿ ಹಲವು ಬಾರಿ ಭೇಟಿಯಾಗಿದ್ದೇನೆ. ಮಾತ್ರೆ, ಟಾನಿಕ್‍ಗಳನ್ನು ಕುಡಿಸಿದರೂ ಸರಿಹೋಗಲಿಲ್ಲ. ಕೊನೆಗೆ ಅನುಭವಿ ವೈದ್ಯರೊಬ್ಬರು ‘ಪಾಲಿಶ್ ಮಾಡದೇ ಇರುವ ಅಕ್ಕಿಯ ಗಂಜಿಯನ್ನು ಸೇವಿಸಲಿ. ಇದರಿಂದ ಸಮಸ್ಯೆ ಸರಿಹೋದೀತು.’. ಈ ಮಳಿಗೆಯಲ್ಲಿ ಪಾಲಿಶ್ ಮಾಡದೇ ಇರುವ ಅಕ್ಕಿ ಇದೆಯಾ.” ಈ ಬೇಡಿಕೆಯನ್ನು ಮುಂದಿಡುತ್ತಿದ್ದಂತೆ ಅವರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗಿದುದನ್ನು ನೋಡಿದ್ದೆ. ಮಕ್ಕಳಿಗೆ ಎಳವೆಯಲ್ಲಿ ಜಂಕ್‍ಫುಡ್ ನೀಡಿದ್ದರ ಪರಿಣಾಮ.

ರಾಸಾಯನಿಕ ಗೊಬ್ಬರಗಳನ್ನು ಹಾಕದೆ, ಕೀಟನಾಶಕವನ್ನು (ವಿಷ) ಸಿಂಪಡಿಸದೆ ತರಕಾರಿ ಬೆಳೆಯಲು ಸಾಧ್ಯವೇ ಇಲ್ಲ, ಹೀಗೊಂದು ಸಮರ್ಥನೆ. ಇಂತಹವರ ಮಧ್ಯೆ ಸದ್ದಿಲ್ಲದೆ ಕೃಷಿಯಲ್ಲಿ ರಾಸಾಯನಿಕ ಒಳಸುರಿಗಳನ್ನು ಬಳಸದೆ ನಗುನಗುತ್ತಾ ಕೃಷಿ ಮಾಡುವವರ ಸಂಖ್ಯೆ ದೊಡ್ಡದಿದೆ. ಅವರೆಂದೂ ಸುದ್ದಿಗೆ, ಸದ್ದಿಗೆ ಸಿಗುವುದಿಲ್ಲ! ಬೆಳ್ತಂಗಡಿಯ ಅಮೈ ದೇವರಾವ್, ಪೆರ್ಲದ ವರ್ಮುಡಿ ಶಿವಪ್ರಸಾದ್, ಪುತ್ತೂರು ಮರಿಕೆಯ ಎ.ಪಿ.ಸದಾಶಿವ, ಮುಳಿಯ ವೆಂಕಟಕೃಷ್ಣ ಶರ್ಮ.. ಹೀಗೆ ಹಲವು ಮಂದಿ ಕೃಷಿಕರು ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಗೆ ವಿದಾಯ ಹೇಳಿ ಅದೆಷ್ಟೋ ವರುಷವಾಯಿತು.

“ನಾವು ಅಂಗಡಿಯಿಂದ ತರಕಾರಿ ತರುವುದೇ ಇಲ್ಲ. ನಮ್ಮ ಊಟಕ್ಕೆ ನಾವೇ ಬೆಳೆದ ತರಕಾರಿ. ಕೃಷಿಕನಾದವನು ಅಂಗಡಿಯಿಂದ ತರಕಾರಿ ತರುವುದೆಂದರೆ ನಮಗೆ ನಾವೇ ಅವಮಾನ ಮಾಡಿಕೊಂಡ ಹಾಗೆ,” ಹೀಗೆಂದವರು ಅಮೈ ದೇವರಾವ್. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಕಿಲ್ಲೂರಿನವರು. ಭತ್ತದ ತಳಿ ಸಂರಕ್ಷಕರು. ಇವರಿಗೆ ತರಕಾರಿ ಕೃಷಿಗೆ ರಜೆಯಿಲ್ಲ. ಇದಕ್ಕಾಗಿ ಪ್ರತ್ಯೇಕ ಶ್ರಮ ವ್ಯಯಿಸುವುದಿಲ್ಲ. ಅಡಿಕೆ, ಭತ್ತದ ಕೃಷಿಯ ಮಧ್ಯೆ ಸ್ವಲ್ಪ ಹೆಚ್ಚು ಗಮನ ಕೊಡುತ್ತಾರೆ. ತರಕಾರಿ ಕೃಷಿಯಲ್ಲಿ ಇವರದ್ದೇ ಆದ ಕ್ರಮ, ವಿಧಾನ.

ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ವರ್ಮುಡಿ ಶಿವಪ್ರಸಾದ್ ಅವರ ಅನುಭವ ನೋಡಿ – ಮನೆಗೆಂದು ಸೀಮಿತವಾಗಿ ತರಕಾರಿ ಬೆಳೆಸುವ ಬದಲು ಮಾರುಕಟ್ಟೆಯ ಲಕ್ಷ್ಯವೂ ಇದ್ದರೆ ನಿರ್ವಹಣೆ ಸುಲಭ. ತರಕಾರಿಯಲ್ಲಿ ಸ್ವಾವಲಂಬಿಯೂ ಆಗಬಹುದು ಎನ್ನುತ್ತಾರೆ. ಮೂರು ದಶಕದ ಹಿಂದೆ ಇವರ ತೀರ್ಥರೂಪರಿಗೆ ಮಧುಮೇಹ ಬಾಧಿಸಿತು. ವೈದ್ಯರು ‘ಹೆಚ್ಚು ತರಕಾರಿ ತಿನ್ನಿ’ ಎಂದು ಸಲಹೆ ಮಾಡಿದ್ದರು. ಕೊಂಡು ತರುವುದಕ್ಕಿಂತ ತಾವೇ ಬೆಳೆಯುವ ಛಲ.. ಇವರಿಗೆ ವರುಷಪೂರ್ತಿ ತಾಜಾ, ನಿರ್ವಿಷ ಮನೆ ತರಕಾರಿ. “ಮನೆ ತರಕಾರಿ ತಿಂದು ಒಗ್ಗಿಹೋಗಿದೆ. ಹಾಗಾಗಿ ರಾಸಾಯನಿಕ ತರಕಾರಿಯ ಒಂದು ಹೋಳು ಬಾಯಿಗಿಟ್ಟರೂ ಗೊತ್ತಾಗಿಬಿಡುತ್ತದೆ” ಎಂದು ನಗುತ್ತಾರೆ.

ಈಗವರು ಮಾರುಕಟ್ಟೆ ದೃಷ್ಟಿಯಿಂದ ತರಕಾರಿಗಳನ್ನು ಸಾವಯವ ವಿಧಾನದಲ್ಲಿ ಬೆಳೆಯುತ್ತಾರೆ. ಮಂಗಳೂರಿನ ಸಾವಯವ ಬಳಗದ ಸಾರಥ್ಯದ ತರಕಾರಿ ಸಂತೆಯಲ್ಲಿ ಮಾರಾಟ. ಹುಡುಕಿ ಬರುವ ಗ್ರಾಹಕರು. “ಈಗಾಗಲೇ ಆರೋಗ್ಯ ಸಂಬಂಧಿ ವಿಚಾರಗಳು ಹಲವರ ನಿದ್ದೆಗೆಡಿಸಿವೆ. ತರಕಾರಿ ಅಲ್ಲದೆ, ರಾಸಾಯನಿಕ ರಹಿತವಾಗಿ ಬೆಳೆದ ಉತ್ಪನ್ನಗಳಿಗೆ ಬೇಡಿಕೆಯಿದೆ.” ಎನ್ನುತ್ತಾರೆ. ಇಂತಹ ಹುಡುಕಾಟಗಳು ನಗರದಲ್ಲಿ ನಿರಂತರ. ವಿವಿಧ ರಾಸಾಯನಿಕಗಳು ಆಹಾರಗಳಲ್ಲಿ ಮಿಳಿತಗೊಂಡ ವರದಿಗಳು ರಾಚುತ್ತಲೇ ಇವೆ. ಇದರಿಂದಾಗಿ ‘ನಿರ್ವಿಷ ಆಹಾರ’ದ ಅರಿವು ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. “ಹಿಂದೊಮ್ಮೆ ಮ್ಯಾಗಿ ಸುದ್ದಿ ಮಾಡಿತು. ಮೈದಾದ ಒಳಸುರಿಗಳನ್ನು ಮಾಧ್ಯಮವು ಬಿಚ್ಚಿಟ್ಟಿತು.

ವಿವಿಧ ರಾಸಾಯನಿಕಗಳಲ್ಲಿ ಬಲವಂತವಾಗಿ ಅದ್ದಿದ ಹಣ್ಣುಗಳ ಅಕರಾಳ ಮುಖಗಳು ಬಿತ್ತರವಾದುವು. ಈಚೆಗಂತೂ ಉಪಾಹಾರದ ಪ್ಲೇಟಿನಲ್ಲಿ ಬ್ರೆಡ್ ಕುಣಿಯುತ್ತಿದೆ! ಇವೆಲ್ಲ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುವ ಅರಿವಿನಿಂದ ನಿರ್ವಿಷ ಆಹಾರಗಳ ಹುಡುಕಾಟಕ್ಕೆ ವೇಗ ಬಂದಿದೆ.” ಮಂಗಳೂರು ಸಾವಯವ ಬಳಗದ ಅಡ್ಡೂರು ಕೃಷ್ಣ ರಾವ್ ಇವರು ಆಹಾರ ಲೋಕದ ಅಕರಾಳ-ವಿಕರಾಳ ಮುಖಗಳನ್ನು ಪರಿಚಯಿಸುತ್ತಾರೆ.

ನಾವು ಬೆಳೆದ ತರಕಾರಿಯನ್ನು ನಾವೇ ತಿನ್ನಬೇಕು ಎನ್ನುವ ಮನಃಸ್ಥಿತಿಗೆ ಒಗ್ಗಿದ, ಅದರಲ್ಲೂ ಸಾವಯವದಲ್ಲೇ ಬೆಳೆದದ್ದಾಗಿರಬೇಕು ಎನ್ನುವ ಅಪ್ಪಟ ವಿಷರಹಿತ ಆಹಾರದ ಮೈಂಡ್‍ಸೆಟ್ ಹೊಂದಿದ ಮನಸ್ಸುಗಳು ಕನ್ನಾಡಿನಾದ್ಯಂತ ಹಬ್ಬುತ್ತಿದೆ. ಹಾಗಾಗಿ ನೋಡಿ, ತರಕಾರಿ ಅಂಗಡಿಯಲ್ಲಿ ‘ಊರಿನ ತರಕಾರಿ ಇದೆಯಾ’ ಎಂದು ವಿಚಾರಿಸುವ ಗ್ರಾಹಕರು ನಗರದಲ್ಲಿ ಮಾತಿಗೆ ಸಿಗುತ್ತಾರೆ. ಊರಿನ ತರಕಾರಿಯ ಹುಡುಕಾಟ ನಿತ್ಯ ನಡೆಯುತ್ತಿದೆ.

ಕೋವಿಡ್ ಕಾಲಘಟ್ಟದ ಬಳಿಕ ಹಳ್ಳಿಗಳಲ್ಲಿ ತರಕಾರಿ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ‘ನಾವು ಬೆಳೆದುದನ್ನು ನಾವೇ ತಿನ್ನುವುದು ಹೆಮ್ಮೆ’ಯೆನ್ನುವ ಸ್ವಾಭಿಮಾನ ಗರಿಗೆದರತ್ತಿದೆ. ಹಳ್ಳಿಯ ತರಕಾರಿ ಪೇಟೆಗೆ ಹೋಗುವಂತೆ, ಹಳ್ಳಿಯಲ್ಲೇ ಮಾರುಕಟ್ಟೆ ಸೃಷ್ಟಿಯಾದರೆ ಬೆಳೆದವರಿಗೆ ಲಾಭ. ಆದರೆ ಹಾಗಾಗುತ್ತಿಲ್ಲ! ತರಕಾರಿ ಬೆಳೆಯುವವನ ನೆರೆಮನೆಯಾತ ಪೇಟೆಯಿಂದ ತರಕಾರಿ ತರುವ ದುಃಸ್ಥಿತಿ! ಬೆಳೆದವನಿಂದಲೇ ಖರೀದಿಸುವ ಮನಸ್ಥಿತಿ ಉಂಟಾದರೆ ಬಳಕೆದಾರನಿಗೆ ಆರೋಗ್ಯ ಲಾಭ. ಬೆಳೆದವನಿಗೆ ಆರ್ಥಿಕ ಲಾಭ.

ನಾ. ಕಾರಂತ ಪೆರಾಜೆ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM