Budget 2022 Explainer: ಕೇಂದ್ರ ಬಜೆಟ್​ನಲ್ಲಿ ಘೋಷಣೆಯಾದ 5 ನದಿ ಜೋಡಣಾ ಯೋಜನೆಗಳಿವು, ಇದರಲ್ಲಿ 3 ಕರ್ನಾಟಕಕ್ಕೆ ಸಂಬಂಧಿಸಿದ್ದು

River Linking Projects: ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ ಜೋಡಣೆ ಯೋಜನೆಗಳಿಗೆ ಕೇಂದ್ರ ಸರ್ಕಾರವು ಸಂಬಂಧಿಸಿದ ರಾಜ್ಯಗಳ ಅಭಿಪ್ರಾಯ ಕೋರಿದೆ.

Budget 2022 Explainer: ಕೇಂದ್ರ ಬಜೆಟ್​ನಲ್ಲಿ ಘೋಷಣೆಯಾದ 5 ನದಿ ಜೋಡಣಾ ಯೋಜನೆಗಳಿವು, ಇದರಲ್ಲಿ 3 ಕರ್ನಾಟಕಕ್ಕೆ ಸಂಬಂಧಿಸಿದ್ದು
ಕೃಷ್ಣ ನದಿ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 01, 2022 | 8:28 PM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರದ (ಫೆ.1) ಬಜೆಟ್ (Budget) ಭಾಷಣದಲ್ಲಿ ಐದು ನದಿ ಜೋಡಣಾ ಯೋಜನೆಗಳನ್ನು (River Linking Projects) ಘೋಷಿಸಿದರು. ಈಗಾಗಲೇ ವಿಸ್ತೃತ ಯೋಜನಾ ವರದಿಯು (Detailed Project Reports – DPR) ಸಲ್ಲಿಕೆಯಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಫಲಾನುಭವಿ ರಾಜ್ಯಗಳು ಸಹಮತ ಸೂಚಿಸಿದ ನಂತರ ಕೇಂದ್ರ ಸರ್ಕಾರವು ಅಗತ್ಯ ನೆರವು ಒದಗಿಸಲಿದೆ ಎಂದರು. ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ, ದಾಮನ್​ಗಂಗಾ-ಪಿಂಜಲ್ ಮತ್ತು ಪಾರ್-ತಾಪಿ-ನರ್ಮದಾ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿದೆ. 2020ರಲ್ಲಿ ಕೇಂದ್ರ ಜಲಾನಯನ ಇಲಾಖೆ ಸಚಿವಾಲಯವು ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳ ಜೋಡಣೆಗೆ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿತ್ತು. ಗೋದಾವರಿ ನದಿಯಿಂದ 247 ಟಿಎಂಸಿ ನೀರನ್ನು ಕೃಷ್ಣ, ಕಾವೇರಿ ಮತ್ತು ಪೆನ್ನಾರ್ ನದಿಗಳ ಜೋಡಣೆ ಮೂಲಕ ದೇಶದ ದಕ್ಷಿಣ ಭಾಗಕ್ಕೆ ಹರಿಸುವುದು ನದಿ ಜೋಡಣಾ ಯೋಜನೆಯ ಉದ್ದೇಶವಾಗಿದೆ.

ಭಾರತದ ನಾಲ್ಕನೇ ದೊಡ್ಡ ನದಿಯಾಗಿರುವ ಕೃಷ್ಣ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿಯುತ್ತದೆ. ಕರ್ನಾಟಕದ ಕೊಡಗಿನಲ್ಲಿ ಹುಟ್ಟುವ ಕಾವೇರಿ ನದಿಯು ತಮಿಳುನಾಡಿನತ್ತ ಹರಿಯುತ್ತದೆ. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ (ನಂದಿಬೆಟ್ಟ) ಉಗಮ ಸ್ಥಾನ ಹೊಂದಿರುವ ಪೆನ್ನಾ ನದಿಯು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿಯುತ್ತದೆ. ಭಾರತದ 3ನೇ ಅತಿದೊಡ್ಡ ನದಿಯಾದ ಗೋದಾವರಿಯು ಮಹಾರಾಷ್ಟ್ರದ ನಾಸಿಕ್​ನಲ್ಲಿ ಹುಟ್ಟಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಛತ್ತೀಸಗಡ ಮತ್ತು ಒಡಿಶಾ ರಾಜ್ಯಗಳಲ್ಲಿ ಹರಿಯುತ್ತದೆ.

ದಾಮನ್​ಗಂಗಾ-ಪಿಂಜಲ್ ನದಿ ಜೋಡಣೆ ಯೋಜನೆಯು ದಾಮನ್​ಗಂಗಾ ಜಲಾನಯನ ಪ್ರದೇಶದ ನೀರನ್ನು ಮುಂಬೈ ನಗರಕ್ಕೆ ಒದಗಿಸುವ ಉದ್ದೇಶ ಹೊಂದಿದೆ. ಪಶ್ಚಿಮ ಘಟ್ಟ ಪಾರ್-ತಾಪಿ-ನರ್ಮದಾ ಜೋಡಣೆ ಯೋಜನೆಯು ಪಶ್ಚಿಮ ಘಟ್ಟದ ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್​ನಲ್ಲಿರುವ ಏಳು ಜಲಾಶಯಗಳಿಂದ ನೀರನ್ನು ನದಿಗಳಿಗೆ ಹರಿಸಿ, ಗುಜರಾತ್​ನ ಕಛ್ ಮತ್ತು ಸೌರಾಷ್ಟ್ರ ಪ್ರದೇಶಗಳಿಗೆ ನೀರು ಒದಗಿಸುವ ಉದ್ದೇಶ ಹೊಂದಿದೆ.

ಉತ್ತರ ಪ್ರದೇಶದ ಕೆನ್-ಬೆಟ್ವಾ ನದಿ ಜೋಡಣೆಗೆ ಅನುಮೋದನೆ ವಿಧಾನಸಭೆ ಚುನಾವಣೆ ಹೊಸಿಲಲ್ಲಿರುವ ಉತ್ತರ ಪ್ರದೇಶದ ಬುಂದೇಲ್​ಖಂಡ ವಲಯಕ್ಕೆ ನೀರಾವರಿ ಒದಗಿಸುವ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರವು ಸಮ್ಮತಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ ಭಾಷಣದಲ್ಲಿ ಹೇಳಿದರು. ಉತ್ತರ ಪ್ರದೇಶ-ಮಧ್ಯಪ್ರದೇಶ ಗಡಿಯಲ್ಲಿ ಜಾರಿಯಾಗಲಿರುವ ಈ ಯೋಜನೆಯಿಂದ ಸುಮಾರು 9 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.

ಒಟ್ಟು ₹ 44,605 ಕೋಟಿ ವೆಚ್ಚದಲ್ಲಿ ಜಾರಿಯಾಗಲಿರುವ ಈ ಯೋಜನೆಯ ಜಾರಿಗೆ ಪ್ರಸಕ್ತ ಸಾಲಿನಲ್ಲಿ 1,400 ಕೋಟಿ ಮೀಸಲಿಡಲಾಗಿದೆ. 103 ಮೆಗಾವಾಟ್ ಜಲವಿದ್ಯುತ್, 27 ಮೆಗಾವಾಟ್ ಸೌರಶಕ್ತಿಯ ಉತ್ಪಾದನೆಯೊಂದಿಗೆ 62 ಲಕ್ಷ ಜನರಿಗೆ ಕುಡಿಯುವ ಒದಗಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.

ಇದನ್ನೂ ಓದಿ: Budget 2022: ಪಿಎಂ ಕಿಸಾನ್​ ಸಮ್ಮಾನ್​ ಸ್ಕೀಮ್​ಗೆ ಬಜೆಟ್​​ನಲ್ಲಿ 68 ಸಾವಿರ ಕೋಟಿ ರೂಪಾಯಿ ಮೀಸಲು ಇದನ್ನೂ ಓದಿ: ಬಜೆಟ್ 2022-23ರ ಪ್ರಮುಖ ಮುಖ್ಯಾಂಶಗಳು; ಇಲ್ಲಿದೆ ಮಾಹಿತಿ

Published On - 8:28 pm, Tue, 1 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್