AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂನಲ್ಲಿ ಇನ್ವೆಸ್ಟರ್ಸ್ ಸಭೆ; ಹೂಡಿಕೆಗಳ ಮಹಾಪೂರ; ದಶಕಗಳಿಂದ ಅವಗಣನೆಯಲ್ಲಿದ್ದ ಈಶಾನ್ಯ ಪ್ರದೇಶಕ್ಕೆ ಈಗ ಹೆಚ್ಚಿದ ಬೇಡಿಕೆ

Advantage Assam 2.0 Infrastructure and Ivestment summit 2025: ಅಡ್ವಾಂಟೇಜ್ ಅಸ್ಸಾಮ್ 2.0 ಹೂಡಿಕೆ ಸಮಾವೇಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಲಕ್ಷ ಕೋಟಿ ರೂಗೂ ಅಧಿಕ ಹೂಡಿಕೆಗಳು ಹರಿದುಬರುವ ನಿರೀಕ್ಷೆ ಇದೆ. 2018ರಲ್ಲಿ ಅಸ್ಸಾಮ್ ಆರ್ಥಿಕತೆ 2.75 ಲಕ್ಷ ಕೋಟಿ ರೂನಷ್ಟಿತ್ತು. ಈಗ ಅದು 6 ಲಕ್ಷ ಕೋಟಿ ರೂ ಗಾತ್ರದ್ದಾಗಿದೆ. 2030ರಲ್ಲಿ ಅದು 13 ಲಕ್ಷ ಕೋಟಿ ರೂ ಗಾತ್ರಕ್ಕೆ ಬೆಳೆಯುವ ನಿರೀಕ್ಷೆ ಇದೆ. ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅವರ ಸಂಸ್ಥೆಗಳಿಂದ ಈ ರಾಜ್ಯಕ್ಕೆ ಒಂದು ಲಕ್ಷ ಕೋಟಿ ರೂ ಹೂಡಿಕೆ ಬರುವ ಸಾಧ್ಯತೆ ಇದೆ.

ಅಸ್ಸಾಂನಲ್ಲಿ ಇನ್ವೆಸ್ಟರ್ಸ್ ಸಭೆ; ಹೂಡಿಕೆಗಳ ಮಹಾಪೂರ; ದಶಕಗಳಿಂದ ಅವಗಣನೆಯಲ್ಲಿದ್ದ ಈಶಾನ್ಯ ಪ್ರದೇಶಕ್ಕೆ ಈಗ ಹೆಚ್ಚಿದ ಬೇಡಿಕೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2025 | 12:59 PM

Share

ಗುವಾಹಟಿ, ಫೆಬ್ರುವರಿ 26: ಈಶಾನ್ಯ ಭಾರತದ ಕೇಂದ್ರ ಬಿಂದುವಾಗಿರುವ ಅಸ್ಸಾಮ್ ರಾಜ್ಯಕ್ಕೆ ಹೂಡಿಕೆಗಳ ಮಹಾಪೂರವೇ ಹರಿದುಬರುತ್ತಿದೆ. ನಿನ್ನೆ ಆರಂಭವಾದ ಅಡ್ವಾಂಟೇಜ್ ಅಸ್ಸಾಮ್ 2.0 ಮೂಲಸೌಕರ್ಯ ಮತ್ತು ಹೂಡಿಕೆ ಸಮಾವೇಶ 2025 ಕಾರ್ಯಕ್ರಮದಲ್ಲಿ ಭರ್ಜರಿ ಸ್ಪಂದನೆ ಸಿಕ್ಕಿದೆ. ಪ್ರಮುಖ ಉದ್ದಿಮೆಗಳು ಅಸ್ಸಾಮ್​ನಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಲಕ್ಷಾಂತರ ಕೋಟಿ ರೂ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಮುಂಚೂಣಿಯಲ್ಲಿದ್ದು ಈಶಾನ್ಯ ರಾಜ್ಯದಲ್ಲಿ ಉದ್ದಿಮೆ ಬೆಳೆಸಲು ಆಸಕ್ತಿ ತೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್, ಜಿಂದಾಲ್ ಗ್ರೂಪ್​ನ ಸಜ್ಜನ್ ಜಿಂದಾಲ್, ಪ್ರಶಾಂತ್ ರೂಯಾ, ಅನಿಲ್ ಅಗರ್ವಾಲ್, ಅನಿಲ್ ಚಲಮಲಸೆಟ್ಟಿ ಮೊದಲಾದ ಹಿರಿಯ ಉದ್ಯಮಿಗಳು ಉಪಸ್ಥಿತರಿದ್ದರು. ಕೇಂದ್ರ ಸರ್ಕಾರದ ಕೆಲ ಸಚಿವರೂ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ಆರು ವರ್ಷದಲ್ಲಿ ಡಬಲ್ ಆದ ಅಸ್ಸಾಮ್ ಆರ್ಥಿಕತೆ

ಕಳೆದ ಆರು ವರ್ಷದಲ್ಲಿ ಅಸ್ಸಾಮ್ ಆರ್ಥಿಕತೆ ಎರಡು ಪಟ್ಟು ಬೆಳೆದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಗುರುತಿಸಿದ್ದಾರೆ. ‘2018ರಲ್ಲಿ ಅಸ್ಸಾಮ್​ನಲ್ಲಿ ಮೊದಲ ಆವೃತ್ತಿಯ ಶೃಂಗಸಭೆ ನಡೆದಿತ್ತು. ಆಗ ಆ ರಾಜ್ಯದ ಆರ್ಥಿಕತೆ ಸುಮಾರು 2.75 ಲಕ್ಷ ಕೋಟಿ ರೂ ಇತ್ತು. ಈಗ ಅದು 6 ಲಕ್ಷ ಕೋಟಿ ರೂಗೆ ಏರಿದೆ. ಆರು ವರ್ಷದಲ್ಲಿ ಆರ್ಥಿಕತೆ ಡಬಲ್ ಆಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಡಬಲ್ ಎಫೆಕ್ಟ್’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಲು ಇಬಿ-5 ವೀಸಾ ಬದಲು ಹೊಸ ಗೋಲ್ಡ್ ಕಾರ್ಡ್: ಬೆಲೆ 5 ಮಿಲಿಯನ್ ಡಾಲರ್

2030ಕ್ಕೆ 143 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ

ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಅಸ್ಸಾಮ್ ರಾಜ್ಯದ ಆರ್ಥಿಕತೆ 2030ರೊಳಗೆ 143 ಬಿಲಿಯನ್ ಡಾಲರ್ ಗಾತ್ರ ಮುಟ್ಟುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ‘ಈ ವರ್ಷ ಅಸ್ಸಾಮಿನ ಜಿಡಿಪಿ ದರ ಶೇ. 15.2ರಷ್ಟಿರುತ್ತದೆ. 2030ಕ್ಕೆ ಆರ್ಥಿಕತೆ 143 ಬಿಲಿಯನ್ ಡಾಲರ್​ಗೆ ಏರುತ್ತದೆ. ಅಸ್ಸಾಮಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅತ್ಯುತ್ತಮ ವಾತಾವರಣ ನಿರ್ಮಿಸುವ ಭರವಸೆ ನೀಡುತ್ತೇನೆ. ಇಲ್ಲಿ ಬಂದು ಹೂಡಿಕೆ ಮಾಡಿ’ ಎಂದು ಅಸ್ಸಾಮ್ ಮುಖ್ಯಮಂತ್ರಿಗಳು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳಿಗೆ ಕರೆ ನೀಡಿದ್ದಾರೆ. 143 ಬಿಲಿಯನ್ ಡಾಲರ್ ಎಂದರೆ ಸುಮಾರು 13 ಲಕ್ಷ ಕೋಟಿ ರೂ ಗಾತ್ರದ ಆರ್ಥಿಕತೆಯಾಗಲಿದೆ ಅಸ್ಸಾಮ್.

ಅಂಬಾನಿಯಿಂದ 50,000 ಕೋಟಿ ರೂ ಹೂಡಿಕೆ

ಮುಂದಿನ ಐದು ವರ್ಷದಲ್ಲಿ ಅಸ್ಸಾಮ್​ನಲ್ಲಿ 50,000 ಕೋಟಿ ರೂ ಹೂಡಿಕೆ ಮಾಡಲು ಬದ್ಧವಾಗಿರುವುದಾಗಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಕಳೆದ ಐದು ವರ್ಷದಲ್ಲಿ ರಿಲಾಯನ್ಸ್ ಗ್ರೂಪ್ ಈ ರಾಜ್ಯದಲ್ಲಿ 12,000 ಕೋಟಿ ರೂ ಹೂಡಿಕೆ ಮಾಡಿತ್ತು. ಈ ಬಾರಿ ಹೂಡಿಕೆ ನಾಲ್ಕು ಪಟ್ಟು ಹೆಚ್ಚಾಗುತ್ತಿದೆ.

ಎಐ ಸಿದ್ಧ ಡಾಟಾ ಸೆಂಟರ್, ಪರಮಾಣು ಶಕ್ತಿ, ಜೈವಿಕ ಅನಿಲ, ಮೆಗಾ ಫೂಡ್ ಪಾರ್ಕ್, ಸೆವೆನ್ ಸ್ಟಾರ್ ಓಬೇರಾಯ್ ಹೋಟೆಲ್, ರಿಲಾಯನ್ಸ್ ರೀಟೇಲ್ ಸ್ಟೋರ್​ಗಳ ವಿಸ್ತರಣೆ ಇತ್ಯಾದಿ ಯೋಜನೆಗಳಿಗೆ ಹೂಡಿಕೆ ಮಾಡಲು ಅಂಬಾನಿ ಬದ್ಧವಾಗಿದ್ದಾರೆ.

ಇದನ್ನೂ ಓದಿ: ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕಕ್ಕೆ ಪೆನ್ನಿ ಸಂಕಟ

ಅದಾನಿಯಿಂದಲೂ 50,000 ಕೋಟಿ ರೂ ಹೂಡಿಕೆ

ಅಸ್ಸಾಮ್ ಹೂಡಿಕೆ ಸಮಾವೇಶದಲ್ಲಿ ಕ್ಷಿಪ್ರವಾಗಿ ಹೂಡಿಕೆ ಬದ್ಧತೆ ತೋರಿದ್ದ ಗೌತಮ್ ಅದಾನಿ. ಏರ್ಪೋರ್ಟ್, ಏರೋ ಸಿಟಿ, ಅನಿಲ ವಿತರಣೆ ಜಾಲ, ಸಿಮೆಂಟ್ ಘಟಕ, ರೋಡ್ ವೇ ಇತ್ಯಾದಿ ಯೋಜನೆಗಳಿಗೆ ಮುಂದಿನ ಐದು ವರ್ಷದಲ್ಲಿ 50,000 ಕೋಟಿ ರೂ ಹೂಡಿಕೆ ಮಾಡುವುದಾಗಿ ಗೌತಮ್ ಅದಾನಿ ಘೋಷಿಸಿದ್ದಾರೆ.

ಟೆಲಿಕಾಂ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ 4,000 ಕೋಟಿ ರೂ

ಅಸ್ಸಾಮ್ ರಾಜ್ಯದಲ್ಲಿ ಟೆಲಿಕಾಂ ಇನ್​ಫ್ರಾಸ್ಟ್ರಕ್ಚರ್ ಅನ್ನು ಬಲಪಡಿಸಲು ಸರ್ಕಾರ 4,000 ಕೋಟಿ ರೂ ಹೂಡಿಕೆ ಮಾಡಲಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ. ಭಾರತ್ ನೆಟ್ ಯೋಜನೆ ಅಡಿ ಈಶಾನ್ಯ ರಾಜ್ಯಗಳ ಪ್ರತಿಯೊಂದು ಗ್ರಾಮಕ್ಕೂ ಬಿಎಸ್ಸೆನ್ನೆಲ್ನ 4ಜಿ ಮತ್ತು 5ಜಿ ನೆಟ್ವರ್ಕ್ ತಲುಪಿಸುವ ಗುರಿ ಈಡೇರಿಸಲಾಗುವುದು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು