Retirement Planning: ನಿವೃತ್ತಿ ಯೋಜನೆ ರೂಪಿಸುವಾಗ ಈ 4 ತಪ್ಪುಗಳನ್ನು ಮಾಡದಿರಿ

ನಿವೃತ್ತಿ ಬದುಕಿಗೆ ನಿಧಿಯನ್ನು ಸೃಷ್ಟಿಸಲು ಆಲೋಚನೆ ಮಾಡುತ್ತಿದ್ದಲ್ಲಿ ಕಡ್ಡಾಯವಾಗಿ ಈ ಲೇಖನದಲ್ಲಿ ಪ್ರಸ್ತಾವ ಮಾಡಿರುವ ನಾಲ್ಕು ತಪ್ಪುಗಳನ್ನು ಮಾಡದಂತೆ ಎಚ್ಚರಿಕೆಯನ್ನು ವಹಿಸಿ.

Retirement Planning: ನಿವೃತ್ತಿ ಯೋಜನೆ ರೂಪಿಸುವಾಗ ಈ 4 ತಪ್ಪುಗಳನ್ನು ಮಾಡದಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 19, 2021 | 12:58 PM

ನಿವೃತ್ತಿ ಯೋಜನೆ ಎಂದರೆ ಹಣದ ನಿರ್ವಹಣೆ. ಅಂದರೆ ದುಡಿಮೆಯ ಅದ್ಭುತ ಕಾಲದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು. ಇದು ನಿವೃತ್ತಿಯ ಯೋಜನೆಯನ್ನು ಹಣಕಾಸು ಯೋಜನೆಯ ಒಂದು ಪ್ರಮುಖ ಅಂಶವನ್ನಾಗಿ ಮಾಡುತ್ತದೆ. ಆದರೂ ಉತ್ತಮ ಗಳಿಕೆ ಹೊರತಾಗಿಯೂ ಜನರು ನಿವೃತ್ತಿಯ ನಂತರದ ಸ್ಥಿರ ಆದಾಯವನ್ನು ಒದಗಿಸುವುದಕ್ಕೆ ಸಮರ್ಪಕವಾದ ನಿಧಿಯನ್ನು (ಫಂಡ್) ಸೃಷ್ಟಿಸುವಲ್ಲಿ ವಿಫಲರಾಗುತ್ತಾರೆ. ನಿವೃತ್ತಿಯ ನಂತರ ಪೂರ್ಣ ಮತ್ತು ನಿರಾತಂಕದ ಜೀವನ ನಡೆಸಲು, ಆರಾಮಾಗಿ ಬದುಕಲು ತುಂಬ ಬೇಗ ಯೋಜನೆಯನ್ನು ಪ್ರಾರಂಭಿಸುವುದು ಹಾಗೂ ನಿವೃತ್ತ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡದಿರುವುದು ಬಹಳ ಮುಖ್ಯವಾಗುತ್ತದೆ.

(1) ನಿವೃತ್ತಿ ಯೋಜನೆ ವಿಳಂಬ ನಿವೃತ್ತಿ ಯೋಜನೆಯನ್ನು ತಡವಾಗಿ ಆರಂಭಿಸುವುದರಿಂದ ಒಂದು ದೊಡ್ಡ ಮೊತ್ತದ ನಿವೃತ್ತಿ ನಿಧಿಯನ್ನು (ಫಂಡ್) ಸೃಷ್ಟಿಸುವ ಸಾಧ್ಯತೆ ಕಡಿಮೆ ಆಗುತ್ತದೆ. ನಿವೃತ್ತಿ ಯೋಜನೆಯನ್ನು ಮೊದಲೇ ಆರಂಭಿಸುವುದರಿಂದ ಹೂಡಿಕೆಯು ದೊಡ್ಡ ಮೊತ್ತದ ನಿಧಿಯಾಗಿ ಬೆಳೆಯಲು ಮತ್ತು ಸಂಗ್ರಹಿಸಲು ಹೆಚ್ಚಿನ ಸಮಯವನ್ನು ನೀಡುತ್ತದೆ. ಹೂಡಿಕೆ ಮಾಡಲು ಹೆಚ್ಚಿನ ಸಮಯ ಹೊಂದಿದ್ದರೆ ಸಣ್ಣ ಮೊತ್ತದ ಕೊಡುಗೆಯ ಹೊರತಾಗಿಯೂ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು. ಆದ್ದರಿಂದ ದುಡಿಮೆ ಪ್ರಾರಂಭಿಸಿದ ತಕ್ಷಣ ನಿವೃತ್ತಿಗಾಗಿ ಉಳಿತಾಯ ಮತ್ತು ಹೂಡಿಕೆ ಮಾಡಲು ಶುರು ಮಾಡಬೇಕು. ಉದಾಹರಣೆ ಸಹಾಯದಿಂದ ಇದನ್ನು ಅರ್ಥ ಮಾಡಿಕೊಳ್ಳಲು ಎರಡು ಸನ್ನಿವೇಶಗಳನ್ನು ತೆಗೆದುಕೊಳ್ಳೋಣ. ಸನ್ನಿವೇಶದಲ್ಲಿ 1- A ಎಂಬುವರು 40ನೇ ವಯಸ್ಸಿನಲ್ಲಿ ಉಳಿತಾಯ ಆರಂಭಿಸುತ್ತಾರೆ. ಪ್ರತಿ ತಿಂಗಳು 10,000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ಅಂದರೆ, ನಿವೃತ್ತಿಯವರೆಗೆ (60 ವರ್ಷಗಳು) ಒಟ್ಟು 24 ಲಕ್ಷ ರೂಪಾಯಿ ಆಗುತ್ತದೆ. ಮತ್ತು 1.52 ಕೋಟಿ ರೂಪಾಯಿ ನಿಧಿಯನ್ನು ವಾರ್ಷಿಕ 15ರ ರಿಟರ್ನ್ ದರದಲ್ಲಿ ಸೃಷ್ಟಿಸುತ್ತಾರೆ. ಈಗ ಸನ್ನಿವೇಶದಲ್ಲಿ 2: ಬಿ ತಮ್ಮ 25ನೇ ವಯಸ್ಸಿನಲ್ಲಿ ಉಳಿತಾಯ ಆರಂಭಿಸುತ್ತಾರೆ. ನಿವೃತ್ತಿಯವರೆಗೆ (60 ವರ್ಷಗಳು) ಪ್ರತಿ ತಿಂಗಳು ರೂ. 3,000 ಹೂಡಿಕೆ ಮಾಡುತ್ತಾರೆ. ಅಂದರೆ ಒಟ್ಟು ರೂ. 12.6 ಲಕ್ಷ ಆಗುತ್ತದೆ. ಮತ್ತು ರೂ .1.95 ಕೋಟಿ ರೂಪಾಯಿಯ ನಿಧಿಯನ್ನು ಶೇ 12ರ ವಾರ್ಷಿಕ ರಿಟರ್ನ್ಸ್​​ನಲ್ಲಿ ಸೃಷ್ಟಿ ಆಗುತ್ತದೆ.

ಸ್ಪಷ್ಟವಾಗಿ ಇಲ್ಲಿ ವ್ಯತ್ಯಾಸ ಗಮನಿಸಬಹುದು. ಸನ್ನಿವೇಶ 2ರಲ್ಲಿ ಎ ಮಾಡುವ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಹೂಡಿಕೆ ಮಾಡುವ ಬಿ, ದೀರ್ಘಾವಧಿಯವರೆಗೆ ಹೂಡಿಕೆ ಮಾಡುತ್ತಾರೆ. ಆದ್ದರಿಂದ ಕಡಿಮೆ ಆದಾಯ ದರವನ್ನು ಗಳಿಸಿದರೂ ಅವರು Bಗಿಂತ ದೊಡ್ಡ ನಿವೃತ್ತಿ ನಿಧಿಯನ್ನು ನಿರ್ಮಿಸುತ್ತಾರೆ. ಹೂಡಿಕೆ ಮಾಡಲು ಸರಿಯಾದ ಸಮಯಕ್ಕಾಗಿ ಕಾಯುವ ಜನರು, ಹೆಚ್ಚಾಗಿ ನಿವೃತ್ತಿ ಯೋಜನೆಯನ್ನು ವಿಳಂಬ ಮಾಡುತ್ತಾರೆ – ಹೆಚ್ಚಿನ ಸಂಬಳ, ಹೆಚ್ಚು ಕೂಡಿಡಬಹುದಾದ ಆದಾಯ, ಕಡಿಮೆ ಸಾಲಗಳು ಅಥವಾ ಜವಾಬ್ದಾರಿಗಳು ಇದಕ್ಕಾಗಿ ಕಾಯುತ್ತಾರೆ- ಆದರೆ ಆ ಸರಿಯಾದ ಸಮಯ ಎಂದಿಗೂ ಬರುವುದಿಲ್ಲ. ನಿವೃತ್ತಿಗಾಗಿ ಉಳಿತಾಯ ಮಾಡಲು ಈಗ ಉತ್ತಮ ಸಮಯ. ಹೆಚ್ಚುವರಿಯಾಗಿ, ಮುಂಚಿತವಾಗಿ ಪ್ರಾರಂಭಿಸುವುದರಿಂದ ಹೂಡಿಕೆಗಳನ್ನು ಪರಿಶೀಲಿಸಲು ಮತ್ತು ಪ್ರಸ್ತುತ ಪರಿಸ್ಥಿತಿ ಮತ್ತು ಹಣದುಬ್ಬರದ ದರಕ್ಕೆ ಅನುಗುಣವಾಗಿ ಮರುಹೊಂದಿಸಲು ಸಾಕಷ್ಟು ಸಮಯ ನೀಡುತ್ತದೆ.

(2) ಹಣದುಬ್ಬರದ ದರವನ್ನು ಲೆಕ್ಕ ಹಾಕಲ್ಲ ನಿವೃತ್ತಿಯ ನಿಧಿಯನ್ನು ಯೋಜಿಸುವಾಗ ಹಣದುಬ್ಬರ ದರ, ಹೂಡಿಕೆ ಶುಲ್ಕಗಳು ಮತ್ತು ತೆರಿಗೆಗಳನ್ನು ಸರಿ ಹೊಂದಿಸಿದ ನಂತರ ಹೂಡಿಕೆಯ ಮೇಲಿನ ನೈಜ ದರ ಲೆಕ್ಕ ಹಾಕಬೇಕು. ಹೆಚ್ಚಿನ ನಾಮಿನಲ್ ರಿಟರ್ನ್ ದರವು ದೀರ್ಘಾವಧಿಯಲ್ಲಿ ಹೆಚ್ಚಿನ ಸಂಪತ್ತಿನ ಸೃಷ್ಟಿಯನ್ನು ಸೂಚಿಸುತ್ತದೆ. ಆದರೆ ಹಣದುಬ್ಬರವು ಮುಖ್ಯವಾದ ಇತರ ಅಂಶಗಳು ನಿಜವಾದ ಆದಾಯವನ್ನು ತಗ್ಗಿಸಬಹುದು. ಹಣದುಬ್ಬರದ ಕಾರಣಕ್ಕೆ ಕಾಲಾನಂತರದಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಶೇಕಡಾವಾರು ಹೆಚ್ಚಳವಾಗುತ್ತದೆ.

ಭವಿಷ್ಯದ ವೆಚ್ಚಗಳನ್ನು ಅಂದಾಜು ಮಾಡುವಾಗ ಹಣದುಬ್ಬರದ ಅಂಶವು ಬಹಳ ಮುಖ್ಯ. ಈ ಲೆಕ್ಕಾಚಾರ ಸರಿಯಾಗಿದ್ದಲ್ಲಿ ನಿವೃತ್ತಿಯ ವರ್ಷಗಳಲ್ಲಿ ಕೂಡ ಈಗಿನ ಜೀವನಶೈಲಿಯನ್ನು ನಿರ್ವಹಿಸಲು ಸಹಾಯ ಮಾಡುವ ನಿಧಿಯನ್ನು ನಿರ್ಮಿಸಬಹುದು. ಆದ್ದರಿಂದ ಹಣದುಬ್ಬರ ದರವು ವೆಚ್ಚಗಳು ಮತ್ತು ತೆರಿಗೆಗಳನ್ನು ಸರಿಹೊಂದಿಸಿದ ನಂತರ ಹೂಡಿಕೆಯ ಮೇಲಿನ ಆದಾಯಕ್ಕಿಂತ ಹೆಚ್ಚಿದ್ದರೆ ಹೆಚ್ಚು ಉಳಿತಾಯ ಮಾಡಬೇಕೆಂದು ಸೂಚಿಸುತ್ತದೆ. ಇದು ಯಾವುದೇ ರೀತಿಯ ಹಣಕಾಸು ಯೋಜನೆಯಲ್ಲಿ ಹಣದುಬ್ಬರವನ್ನು ನಿರ್ಣಾಯಕ ಅಂಶವನ್ನಾಗಿ ಮಾಡುತ್ತದೆ.

(3) ಅಸಮರ್ಪಕ ಆರೋಗ್ಯ ವಿಮೆ ರಕ್ಷಣೆ ವಯಸ್ಸಾದಂತೆ ಆರೋಗ್ಯದ ಅಪಾಯಗಳು ಹೆಚ್ಚಾಗುತ್ತವೆ ಮತ್ತು ವೆಚ್ಚಗಳು ಹೆಚ್ಚಾಗುತ್ತವೆ. ವೈಯಕ್ತಿಕ ಆರೋಗ್ಯ ಯೋಜನೆಯನ್ನು ಹೊಂದಿಲ್ಲದಿದ್ದರೆ ಅಥವಾ ನಿಮ್ಮ ಭವಿಷ್ಯದ ವೈದ್ಯಕೀಯ ವೆಚ್ಚವನ್ನು ಭರಿಸಲು ಅಸಮರ್ಪಕವಾಗಿದ್ದರೆ ಒಂದು ಸಣ್ಣ ಅನಾರೋಗ್ಯವು ನಿವೃತ್ತಿ ಉಳಿತಾಯದಲ್ಲಿ ಗಮನಾರ್ಹವಾದ ಕಡಿತ ಮಾಡುತ್ತದೆ. ಆರೋಗ್ಯ ರಕ್ಷಣೆಯಲ್ಲಿ ಹಣದುಬ್ಬರ ಹೆಚ್ಚಾಗಿದೆ ಮತ್ತು ಆರೋಗ್ಯ ರಕ್ಷಣೆಯು ಚಾಲ್ತಿಯಲ್ಲಿರುವ ಆರೋಗ್ಯ ಹಣದುಬ್ಬರದ ದರಕ್ಕೆ ಹೊಂದಿಕೆಯಾಗುವಂತೆ ನೋಡಿಕೊಳ್ಳಬೇಕು. ಹೆಚ್ಚುವರಿಯಾಗಿ, ನಿವೃತ್ತಿ ಯೋಜನೆಗೆ ತೊಂದರೆಯಾಗದಂತೆ ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ಸಾಕಷ್ಟು ಹಣದ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ನಿಧಿ ಅಥವಾ ತುರ್ತು ನಿಧಿಯನ್ನು ನಿರ್ಮಿಸುವತ್ತ ಗಮನಹರಿಸಬೇಕು.

(4) ಹೂಡಿಕೆ ಉತ್ಪನ್ನದ (ಪ್ರಾಡಕ್ಟ್) ತಪ್ಪು ಆಯ್ಕೆ ಕೆಲವರು ನಿರಂತರವಾಗಿ ಮತ್ತು ಗಣನೀಯವಾಗಿ ಹೂಡಿಕೆ ಮಾಡುತ್ತಾರೆ. ಆದರೂ ಅವರು ತಮ್ಮ ನಿವೃತ್ತಿಗೆ ಸಮರ್ಪಕವಾದ ನಿಧಿಯನ್ನು ಸೃಷ್ಟಿಸಲು ವಿಫಲರಾಗುತ್ತಾರೆ. ಇದು ಭಾಗಶಃ ಅವರ ನಿವೃತ್ತಿ ಉದ್ದೇಶಗಳನ್ನು ಪೂರೈಸಲಾಗದ ತಪ್ಪು ಹಣಕಾಸು ಸಾಧನಗಳಲ್ಲಿ (ಇನ್​ಸ್ಟ್ರುಮೆಂಟ್​) ಹೂಡಿಕೆ ಮಾಡುವುದರಿಂದ ಹೀಗಾಗುತ್ತದೆ. ಹೂಡಿಕೆದಾರರ ವಯಸ್ಸು, ಅಪಾಯವನ್ನು ತೆಗೆದುಕೊಳ್ಳಬಹುದಾದ ಸಾಮರ್ಥ್ಯ, ಆದಾಯ ಮತ್ತು ಹೂಡಿಕೆಗೆ ಅನುಗುಣವಾಗಿ ನಿವೃತ್ತಿ ನಿಧಿಯನ್ನು ನಿರ್ಮಿಸಲು ಹೂಡಿಕೆ ಇನ್​ಸ್ಟ್ರುಮೆಂಟ್​ಗಳನ್ನು ಆಯ್ಕೆ ಮಾಡಬೇಕು.

ವಯಸ್ಸು ಕಡಿಮೆ ಇದ್ದಾಗ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವು ಅಧಿಕವಾಗಿರುತ್ತದೆ ಮತ್ತು ಒಂದು ವೇಳೆ ಅಂದುಕೊಂಡಂತೆ ಆಗದಿದ್ದಲ್ಲಿ ಚೇತರಿಸಿಕೊಳ್ಳಲು ಹೆಚ್ಚಿನ ಸಮಯವಿರುತ್ತದೆ. ಆದ್ದರಿಂದ ಈಕ್ವಿಟಿಗಳಂಥ ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುವ ಸಾಧನಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ವಯಸ್ಸು ಹೆಚ್ಚುತ್ತಾ ಬಂದಂತೆ ಕ್ರಮೇಣ ಕಡಿಮೆ ಅಪಾಯದ ಹೂಡಿಕೆ ಇನ್​ಸ್ಟ್ರುಮೆಂಟ್​ಗಳಿಗೆ ಬದಲಾಯಿಸಬಹುದು. ಅದು ಖಚಿತವಾದ ಆದಾಯವನ್ನು ನೀಡುತ್ತದೆ. ಉದಾಹರಣೆಗೆ, ಆರಂಭಿಕ ಹಂತದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಅಥವಾ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ವಯಸ್ಸು ನಿವೃತ್ತಿಗೆ ಹತ್ತಿರವಾಗಿದ್ದಾಗ ಕಡಿಮೆ ಅಪಾಯದ ಸಾಲ ಹೂಡಿಕೆಗೆ ಆದ್ಯತೆ ನೀಡಬಹುದು.

ಇದನ್ನೂ ಓದಿ: Sensex stocks: 61000 ಪಾಯಿಂಟ್ಸ್ ದಾಟಿದ ಸೆನ್ಸೆಕ್ಸ್; ಆರು ತಿಂಗಳಲ್ಲಿ ಹೂಡಿಕೆದಾರರ ಸಂಪತ್ತು 68 ಲಕ್ಷ ಕೋಟಿ ರೂ. ಏರಿಕೆ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್