ಶ್ರೀಮಂತ ದೇಶಗಳ ಅತೀ ಬಡವರ ಬಳಿ ಇದೆ ಭಾರತದ ಅತೀ ಶ್ರೀಮಂತರಿಗಿಂತ ಹೆಚ್ಚು ಸಂಪತ್ತು: ವಿಶ್ವಬ್ಯಾಂಕ್ ವರದಿ

ವರ್ಲ್ಡ್ ಬ್ಯಾಂಕ್ ಪಾವರ್ಟಿ ಅಂಡ್ ಇನೀಕ್ವಾಲಿಟಿ ಪ್ಲಾಟ್​ಫಾರ್ಮ್ ವರದಿಯು ವಿಶ್ವದ ಆರ್ಥಿಕ ಅಸಮಾನತೆಯ ಕೆಲ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. ಕೆಲ ಶ್ರೀಮಂತ ದೇಶಗಳಲ್ಲಿ ಕೆಳಗಿನ ಶೇ. 10ರಷ್ಟು ಜನರು ಭಾರತದಲ್ಲಿ ಮೇಲಿನ ಶೇ. 10 ಮಂದಿಗಿಂತ ಹೆಚ್ಚು ಆದಾಯವಂತರೆನಿಸಿದ್ದಾರೆ. ಪ್ರತಿಯೊಂದು ದೇಶದಲ್ಲೂ ಬಡವರು ಮತ್ತು ಶ್ರೀಮಂತರ ಮಧ್ಯೆ ಇರುವ ಆರ್ಥಿಕ ಅಸಮಾನತೆಯ ಅಂಶಗಳನ್ನು ಈ ವರದಿಯಲ್ಲಿ ತೋರಿಸಲಾಗಿದೆ.

ಶ್ರೀಮಂತ ದೇಶಗಳ ಅತೀ ಬಡವರ ಬಳಿ ಇದೆ ಭಾರತದ ಅತೀ ಶ್ರೀಮಂತರಿಗಿಂತ ಹೆಚ್ಚು ಸಂಪತ್ತು: ವಿಶ್ವಬ್ಯಾಂಕ್ ವರದಿ
ವರ್ಲ್ಡ್ ಬ್ಯಾಂಕ್
Image Credit source: Mateusz Slodkowski/SOPA Images/LightRocket via Getty Images

Updated on: Oct 12, 2026 | 11:58 AM

ನವದೆಹಲಿ, ಅಕ್ಟೋಬರ್ 12: ಒಂದು ರಾಜ್ಯದೊಳಗೆ ಬೇರೆ ಬೇರೆ ಪ್ರದೇಶಗಳ ಮಧ್ಯೆ ಆರ್ಥಿಕ ಸಮಾನತೆ ಕಾಣಬಹುದು. ಒಂದು ದೇಶದಲ್ಲಿ ವಿವಿಧ ರಾಜ್ಯಗಳ ಮಧ್ಯೆ ಆರ್ಥಿಕ ಸಮಾನತೆ ಕಾಣಬಹುದು. ದೇಶ ದೇಶಗಳ ಮಧ್ಯೆಯೂ ಅತೀವ ಆರ್ಥಿಕ ಸಮಾನತೆ ಕಾಣಸಿಗುತ್ತದೆ. ವಿಶ್ವಬ್ಯಾಂಕ್​ನ ವರದಿಯೊಂದು ಜಾಗತಿಕ ಆರ್ಥಿಕ ಅಸಮಾನತೆಯ ಕುತೂಹಲಕಾರಿ ಅಂಶವೊಂದನ್ನು ಎತ್ತಿ ತೋರಿಸಿದೆ. ವರ್ಲ್ಡ್ ಬ್ಯಾಂಕ್ ಪಾವರ್ಟಿ ಅಂಡ್ ಇನೀಕ್ವಾಲಿಟಿ ಪ್ಲಾಟ್​ಫಾರ್ಮ್ 2026 ವರದಿ ಪ್ರಕಾರ ವಿಶ್ವದ ಕೆಲ ಅತಿ ಶ್ರೀಮಂತ ದೇಶಗಳಲ್ಲಿರುವ ಶೇ. 10 ಅತೀ ಬಡವರು ಗಳಿಸುತ್ತಿರುವ ಆದಾಯವು ಭಾರತದ ಶೇ. 10 ಅತಿ ಶ್ರೀಮಂತರಿಗಿಂತ ಹೆಚ್ಚು ಎನ್ನಲಾಗಿದೆ.

ಭಾರತದಲ್ಲಿ ಅತೀ ಶ್ರೀಮಂತ ಶೇ. 10ರಷ್ಟು ವ್ಯಕ್ತಿಗಳು ಸರಾಸರಿಯಾಗಿ 10 ಡಾಲರ್​ನಷ್ಟು ದೈನಂದಿನ ಆದಾಯ ಹೊಂದಿದ್ದಾರೆ. ಅದೇ ನೀವು ಅಮೆರಿಕದಲ್ಲಿ ಅತೀ ಕಡಿಮೆ ಆದಾಯ ಹೊಂದಿರುವ ಶೇ. 10ರಷ್ಟು ಮಂದಿ ಸರಾಸರಿಯಾಗಿ 25 ಡಾಲರ್ ದೈನಂದಿನ ಆದಾಯ ಹೊಂದಿದ್ದಾರೆ. ಕೆನಡಾದಲ್ಲಿ ಇದು 31 ಡಾಲರ್ ಇದ್ದರೆ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ 28 ಡಾಲರ್ ಇದೆ.

ಇದನ್ನೂ ಓದಿ: ಜಿಯೋದ ಎಐ ಕನ್ನಡಕ..! ಯುಪಿಐ ಪಾವತಿ, ಲೈವ್ ಟ್ರಾನ್ಸ್​ಲೇಶನ್, ಲೈವ್ ಕಾಮೆಂಟರಿ ಮಾಡಬಲ್ಲುದು ಈ ಸ್ಮಾರ್ಟ್ ಗ್ಲಾಸ್

ಅಂದರೆ, ಶ್ರೀಮಂತ ದೇಶಗಳಲ್ಲಿ ತಳಮಟ್ಟದಲ್ಲಿರುವವರು ಭಾರತದಲ್ಲಿರುವ ಮೇಲ್ಪದರದವರಿಗಿಂತ ಹೆಚ್ಚಿನ ಶ್ರೀಮಂತಿಕೆ ಹೊಂದಿದ್ದಾರೆ. ಭಾರತದಲ್ಲಿ ತಳಮಟ್ಟದ ಶೇ. 10 ಮಂದಿ ಜನರ ಸರಾಸರಿ ದೈನಂದಿನ ಆದಾಯ 3 ಡಾಲರ್ ಮಾತ್ರ.

ಇನ್ನು, ಅಮೆರಿಕದಲ್ಲಿ ಶೇ. 10 ಅತಿ ಶ್ರೀಮಂತ ವ್ಯಕ್ತಿಗಳ ಸರಾಸರಿ ದೈನಂದಿನ ಆದಾಯ ಬರೋಬ್ಬರಿ 173 ಡಾಲರ್ ಇದೆ. ಜರ್ಮನಿಯಲ್ಲಿ ಇದು 128 ಡಾಲರ್, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಇದು 129 ಡಾಲರ್ ಇದೆ. ಭಾರತದಲ್ಲಿ ಇದು 10 ಡಾಲರ್ ಮಾತ್ರವೇ.

ಭಾರತದಲ್ಲಿ ತಿಂಗಳಿಗೆ 80,000 ರೂಗಿಂತ ಹೆಚ್ಚು ಆದಾಯ ಗಳಿಸುತ್ತಿರುವ ವ್ಯಕ್ತಿಯನ್ನು ಟಾಪ್-10 ಪಟ್ಟಿಗೆ ವರ್ಗೀಕರಿಸಲಾಗುತ್ತದೆ.

ಇದನ್ನೂ ಓದಿ: ಎಐ ಮಾಡಲ್​ಗಳು ದಾರಿತಪ್ಪಿ ಹೋಗುವುದನ್ನು ತಡೆಯಲು ಎಮರ್ಜೆನ್ಸಿ ಬ್ರೇಕ್ ಬೇಕು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಅಮೆರಿಕದಲ್ಲಿ ಹೆಚ್ಚು ಆರ್ಥಿಕ ಅಸಮಾನತೆ

ಅಮೆರಿಕದಲ್ಲಿ ಮೇಲಿನ 10 ಪರ್ಸೆಂಟ್ ಜನರು ಮತ್ತು ತಳಗಿನ 10 ಪರ್ಸೆಂಟ್ ಜನರ ಮಧ್ಯೆ ಅತೀ ಅಂತರ ಇದೆ. 25 ಮತ್ತು 173 ಡಾಲರ್ ಆದಾಯ ಹೊಂದಿದ್ದಾರೆ. ಬಹುತೇಕ 7 ಪಟ್ಟು ಹೆಚ್ಚು ಅಂತರ ಇದೆ. ಅಂದರೆ, ಕೆಳಗಿನವರಿಗಿಂತ ಮೇಲಿನವರು 7 ಪಟ್ಟು ಹೆಚ್ಚು ಆದಾಯ ಹೊಂದಿದ್ದಾರೆ.

ಬ್ರೆಜಿಲ್​ನಲ್ಲಿ ಈ ಅಂತರ ಬಹುತೇಕ 10 ಪಟ್ಟು ಇದೆ. ಭಾರತದಲ್ಲಿ ಇದು 3.33 ಮಾತ್ರವೇ. ಚೀನಾದಲ್ಲಿ ಈ ಅಂತರ 5.16 ರಷ್ಟು ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us