AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋದ ಎಐ ಕನ್ನಡಕ..! ಯುಪಿಐ ಪಾವತಿ, ಲೈವ್ ಟ್ರಾನ್ಸ್​ಲೇಶನ್, ಲೈವ್ ಕಾಮೆಂಟರಿ ಮಾಡಬಲ್ಲುದು ಈ ಸ್ಮಾರ್ಟ್ ಗ್ಲಾಸ್

ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC 2026) ಮೇಳದಲ್ಲಿ ರಿಲಯನ್ಸ್‌ ಜಿಯೋ ತನ್ನ ಹೊಸ 'ಜಿಯೋ ಎಐ ಗ್ಲಾಸ್' ಸ್ಮಾರ್ಟ್ ಕನ್ನಡಕವನ್ನು ಪ್ರದರ್ಶಿಸಿದೆ. ಕೇವಲ ಧ್ವನಿ ಆಜ್ಞೆ ಮತ್ತು ಕ್ಯೂಆರ್ ಕೋಡ್ ನೋಡಿ ಯುಪಿಐ ಪಾವತಿ ಮಾಡುವ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಗೊತ್ತಾಗಿಲ್ಲ.

ಜಿಯೋದ ಎಐ ಕನ್ನಡಕ..! ಯುಪಿಐ ಪಾವತಿ, ಲೈವ್ ಟ್ರಾನ್ಸ್​ಲೇಶನ್, ಲೈವ್ ಕಾಮೆಂಟರಿ ಮಾಡಬಲ್ಲುದು ಈ ಸ್ಮಾರ್ಟ್ ಗ್ಲಾಸ್
ರಿಲಯನ್ಸ್ ಎಐ ಗ್ಲಾಸ್​ನ ಸಾಂದರ್ಭಿಕ ಚಿತ್ರImage Credit source: Narumon Bowonkitwanchai/Moment/Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 11, 2026 | 7:02 PM

Share

ನವದೆಹಲಿ, ಅಕ್ಟೋಬರ್ 11: ಸ್ಟಾರ್​ಲಿಂಕ್ ಆರೋಪಗಳ ಸಾಲಿನ ನಡುವೆ ರಿಲಯನ್ಸ್ ಜಿಯೋ (Reliance Jio) ತನ್ನ ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುವುದು ಮುಂದುವರಿದಿದೆ. ರಿಲಯನ್ಸ್ ಜಿಯೋದ ಸ್ಮಾರ್ಟ್ ಗ್ಲಾಸ್​ಗಳು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ದಾಂಗುಡಿ ಇಟ್ಟು ಕ್ರಾಂತಿ ಸೃಷ್ಟಿಸಲು ಅಣಿಗೊಂಡಿವೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ 2026 (IMC 2026) ಮೇಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ‘ಜಿಯೋ ಎಐ ಗ್ಲಾಸಸ್’ (Jio AI Glasses / JioFrames) ಸ್ಮಾರ್ಟ್ ಕನ್ನಡಕವನ್ನು ಅಧಿಕೃತವಾಗಿ ಪ್ರದರ್ಶಿಸಿದೆ. ವೇರಬಲ್ ಟೆಕ್ನಾಲಜಿ (Wearable) ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುವ ನಿಟ್ಟಿನಲ್ಲಿ ಇದನ್ನು ಪರಿಚಯಿಸಲಾಗಿದೆ.

ಈ ಜಿಯೊ ಎಐ ಗ್ಲಾಸಸ್ ಉತ್ಪನ್ನವು ಬಹಳ ಉಪಯುಕ್ತವೆನಿಸಬಹುದಾದ ಮೂರು ಕೆಲಸಗಳಿಗೆ ನೆರವಾಗುತ್ತವೆ. ಕನ್ನಡಕದ ಸಹಾಯದಿಂದ ಯುಪಿಐ ಪಾವತಿ ಮಾಡಬಹುದು. ಎದುರಿಗಿರುವ ಬೇರೆ ಭಾಷಿಕರ ಮಾತುಗಳನ್ನು ಲೈವ್ ಆಗಿ ನಿಮ್ಮ ಭಾಷೆಗೆ ಅನುವಾದಿಸಿ ಹೇಳಬಲ್ಲುದು. ಮೂರೆನಯದು, ಲೈವ್ ಕ್ರಿಕೆಟ್ ಕಾಮೆಂಟರಿ ಕೇಳಬಹುದು.

ಫೋನ್ ಹೊರತೆಗೆಯದೆ ಯುಪಿಐ ಸ್ಕ್ಯಾನ್ ಮಾಡಿ ಪೇ ಮಾಡಿ

ಈ ಸ್ಮಾರ್ಟ್ ಗ್ಲಾಸ್‌ನ ಆಕರ್ಷಕ ವೈಶಿಷ್ಟ್ಯವೆಂದರೆ ಯುಪಿಐ (UPI) ಪಾವತಿ. ಬಳಕೆದಾರರು ಯಾವುದೇ ಅಂಗಡಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಕಿಸೆಯಿಂದ ಹೊರತೆಗೆಯದೆ, ಜಿಯೋ ಕನ್ನಡಕ ಧರಿಸಿ ಕೇವಲ ಕ್ಯೂಆರ್ (QR) ಕೋಡ್ ಕಡೆ ನೋಡಿ ಧ್ವನಿ ಆಜ್ಞೆ (Voice Command) ನೀಡುವ ಮೂಲಕ ನೇರವಾಗಿ ಯುಪಿಐ ಪಾವತಿ ಮಾಡಬಹುದು. ಯುಪಿಐ ಸರ್ಕಲ್ ನಿಯಮಗಳ ಪ್ರಕಾರ ಇದರ ಮೂಲಕ ಪ್ರತಿ ವಹಿವಾಟಿಗೆ ಗರಿಷ್ಠ ₹5,000 ಹಾಗೂ ತಿಂಗಳಿಗೆ ₹15,000 ವರೆಗೆ ಪಾವತಿ ಮಿತಿ ಇರಲಿದೆ.

ಇದನ್ನೂ ಓದಿ: ಎಐ ಮಾಡಲ್​ಗಳು ದಾರಿತಪ್ಪಿ ಹೋಗುವುದನ್ನು ತಡೆಯಲು ಎಮರ್ಜೆನ್ಸಿ ಬ್ರೇಕ್ ಬೇಕು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಜಿಯೋ ಎಐ ಗ್ಲಾಸಸ್ ಎರಡು ವಿಭಿನ್ನ ಫ್ರೇಮ್​ಗಳಲ್ಲಿ ಲಭ್ಯ ಇರುತ್ತವೆ. ಆಡಿಯೋ ಫ್ರೇಮ್​ಗಳು ಮತ್ತು ಸ್ಮಾರ್ಟ್ ಕ್ಯಾಮೆರಾ ಫ್ರೇಮ್​ಗಳ ಆಯ್ಕೆ ಸಿಗುತ್ತದೆ.

ಆಡಿಯೋ ಫ್ರೇಮ್‌ಗಳು (Audio Frames) ನೋಡಲು ಸಾಮಾನ್ಯ ಸ್ಟೇನ್‌ಲೆಸ್-ಸ್ಟೀಲ್ ಚಾಶ್ಮಾದಂತೆ ಇದ್ದು, ಇದರಲ್ಲಿ ಬಿಲ್ಟ್-ಇನ್ ಸ್ಪೀಕರ್ ಮತ್ತು ಮೈಕ್ರೋಫೋನ್ ಇರಲಿದೆ. ಇದರ ಮೂಲಕ ಹ್ಯಾಂಡ್ಸ್‌ಫ್ರೀ ಕರೆಗಳು ಹಾಗೂ ಮ್ಯೂಸಿಕ್ ಆಸ್ವಾದಿಸಬಹುದು.

ಸ್ಮಾರ್ಟ್ ಕ್ಯಾಮೆರಾ ಫ್ರೇಮ್‌ಗಳು (Smart Camera Frames) ಎಚ್‌ಡಿ (HD) ಕ್ಯಾಮೆರಾ ಮತ್ತು ಸುಧಾರಿತ ‘ವಿಶ್ಯುಯಲ್ ಇಂಟೆಲಿಜೆನ್ಸ್’ (Visual Intelligence) ತಂತ್ರಜ್ಞಾನವನ್ನು ಹೊಂದಿದ್ದು, ಸುತ್ತಮುತ್ತಲಿನ ದೃಶ್ಯಗಳನ್ನು ಗ್ರಹಿಸಿ ನೈಜ ಸಮಯದಲ್ಲಿ ಮಾಹಿತಿ ನೀಡುತ್ತದೆ.

‘ಹಲೋ ಜಿಯೋ’ ಎಐ ವಾಯ್ಸ್ ಅಸಿಸ್ಟೆಂಟ್

ಸ್ಮಾರ್ಟ್ ಕನ್ನಡಕದ ಬಳಕೆದಾರರು “Hello Jio” ಎಂದು ಹೇಳುವ ಮೂಲಕ ಈ ಎಐ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಬಹುದು. ಯಾವುದೇ ಸ್ಕ್ರೀನ್ ಸ್ಪರ್ಶಿಸದೆ ಕೇವಲ ಮಾತನಾಡುವ ಮೂಲಕ ಪ್ರಶ್ನೆಗಳನ್ನು ಕೇಳುವುದು, ನೋಟ್ಸ್ ಮಾಡಿಕೊಳ್ಳುವುದು ಮತ್ತು ಆರೋಗ್ಯ ಟ್ರ್ಯಾಕಿಂಗ್ ಮಾಡಬಹುದು.

ಬಹುಭಾಷಾ ಲೈವ್ ಟ್ರಾನ್ಸ್‌ಲೇಷನ್ ಮಾಡಬಲ್ಲ ಜಿಯೋ ಎಐ ಗ್ಲಾಸಸ್

ಭಾರತದ ಭಾಷಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದ್ದು, ವಿವಿಧ ಭಾಷೆಗಳನ್ನು ಮಾತನಾಡುವ ವ್ಯಕ್ತಿಗಳು ಪರಸ್ಪರ ಸುಲಭವಾಗಿ ಮಾತನಾಡಲು ಸಹಾಯ ಮಾಡುವ ‘ರಿಯಲ್-ಟೈಮ್ ಲೈವ್ ಟ್ರಾನ್ಸ್‌ಲೇಷನ್’ (Live Translation) ಸೌಲಭ್ಯವನ್ನು ಇದು ಒಳಗೊಂಡಿದೆ.

ಇದನ್ನೂ ಓದಿ: ಜಿಯೋ ಗೇಮ್​ನಲ್ಲಿ ಜಿಯೊಗೆ ಆಟ ತೋರಿಸಲು ಸಜ್ಜಾಗಿದೆಯಾ ಸ್ಪೇಸ್​ಎಕ್ಸ್? ಕಡಿಮೆ ಬೆಲೆಗೆ ಸ್ಟಾರ್​ಲಿಂಕ್ ಸೇವೆಯ ಸುಳಿವು ಕೊಟ್ಟ ಇಲಾನ್ ಮಸ್ಕ್

ಬೇರೆ ಯಾವ ಕಂಪನಿಗಳು ಹೊಂದಿವೆ ಸ್ಮಾರ್ಟ್ ಗ್ಲಾಸ್ ಉತ್ಪನ್ನಗಳನ್ನು?

ಸ್ಮಾರ್ಟ್ ಗ್ಲಾಸ್​ಗಳನ್ನು ಹಲವು ಕಂಪನಿಗಳು ಆಫರ್ ಮಾಡುತ್ತಿವೆ. ಮೆಟಾದ ರೇ ಬಾನ್ ಸ್ಮಾರ್ಟ್ ಗ್ಲಾಸ್​ಗಳು ಹೆಚ್ಚು ಹೆಸರುವಾಸಿಯಾಗಿದೆ. ಮೆಮೋಮೈಂಡ್ ಒನ್, ಅಮೇಜಾನ್ ಇಕೋ ಫ್ರೇಮ್ಸ್, ರೋಕಿತ್ ಎಐ ಗ್ಲಾಸಸ್, ಪೆಬಲ್ ಸೀಕ್ ಸ್ಮಾರ್ಟ್ ಎಐ ಗ್ಲಾಸಸ್, ಓಕ್ಲೀ ಇತ್ಯಾದಿ ಸ್ಮಾರ್ಟ್ ಗ್ಲಾಸ್​ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಜಿಯೋ ಸಂಸ್ಥೆ ತನ್ನ ಎಐ ಸ್ಮಾರ್ಟ್ ಕನ್ನಡಕ ಉತ್ಪನ್ನಗಳನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ, ಎಷ್ಟು ಬೆಲೆಗೆ ನೀಡುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ