AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಮಾಡಲ್​ಗಳು ದಾರಿತಪ್ಪಿ ಹೋಗುವುದನ್ನು ತಡೆಯಲು ಎಮರ್ಜೆನ್ಸಿ ಬ್ರೇಕ್ ಬೇಕು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಉನ್ನತ ಮಟ್ಟದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾದರಿಗಳನ್ನು ಬಳಸುವಾಗ ಕಂಪನಿಗಳು ಕೇವಲ ತಯಾರಕರ ಭರವಸೆಗಳನ್ನೇ ನಂಬದೆ, ಸಂಭಾವ್ಯ ಭದ್ರತಾ ಅಪಾಯಗಳನ್ನು ತಡೆಯಲು 'ತುರ್ತು ಬ್ರೇಕ್' (Emergency Brake) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಕರೆನೀಡಿದ್ದಾರೆ. ಒಬ್ಬ ಅಧಿಕೃತ ವ್ಯಕ್ತಿಯು ಎಐ ಮಾಡಲ್​ನ ಕೆಲಸವನ್ನು ಮಧ್ಯದಲ್ಲೇ ನಿಲ್ಲಿಸುವ ಅಧಿಕಾರ ಮತ್ತು ಅವಕಾಶ ಹೊಂದಿರಬೇಕು ಎಂಬುದ ನಾಡೆಲ್ಲಾ ಅವರ ಅನಿಸಿಕೆ.

ಎಐ ಮಾಡಲ್​ಗಳು ದಾರಿತಪ್ಪಿ ಹೋಗುವುದನ್ನು ತಡೆಯಲು ಎಮರ್ಜೆನ್ಸಿ ಬ್ರೇಕ್ ಬೇಕು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ
ಸತ್ಯ ನಾಡೆಲ್ಲಾImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 11, 2026 | 5:47 PM

Share

ನವದೆಹಲಿ, ಅಕ್ಟೋಬರ್ 11: ಅತಿಯಾದ ಎಐನಿಂದ ಅಪಾಯವಾ ಎನ್ನುವ ಚರ್ಚೆ ಮುಂದುವರಿದಿದೆ. ಮೈಕ್ರೋಸಾಫ್ಟ್ ಕಾರ್ಪೊರೇಷನ್ (Microsoft Corp) ಸಿಇಒ ಸತ್ಯ ನಾಡೆಲ್ಲಾ (Satya Nadella) ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಭದ್ರತೆ ಮತ್ತು ನಿಯಂತ್ರಣದ ಕುರಿತು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಅತ್ಯಾಧುನಿಕ ಎಐ ಮಾಡಲ್​ಗಳನ್ನು ನಿಯೋಜಿಸುವ ಸಂಸ್ಥೆಗಳು ಅವುಗಳನ್ನು ನಿರ್ಮಿಸಿದವರ ಭರವಸೆಯ ಮೇಲೆ ನಂಬಿಕೆ ಇಟ್ಟರೆ ಆಗದು, ಅದನ್ನು ನಿಯಂತ್ರಿಸುವ ವ್ಯವಸ್ಥೆ ಇರಬೇಕು ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥರು ಹೇಳೀದ್ದಾರೆ.

ಆಂಥ್ರೋಪಿಕ್ ಮತ್ತು ಓಪನ್​ಎಐನ ಕೆಲ ಇತ್ತೀಚಿನ ಎಐ ಮಾಡಲ್​ಗಳು ಒಂದು ಚೌಕಟ್ಟು ಬಿಟ್ಟು ತಾನಾಗೇ ಹೊರಹೋಗಿ ಕೆಲಸ ಮಾಡುತ್ತಿರುವ ಉದಾಹರಣೆಗಳು ಪತ್ತೆಯಾಗಿದ್ದು, ಟೆಕ್ ಜಗತ್ತು ಮತ್ತು ಜನಸಾಮಾನ್ಯರು ಬೆರಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಈ ಮಾತುಗಳನ್ನಾಡಿದ್ದಾರೆ. ಎಐ ಮಾಡಲ್​ಗಳಿಗೆ ಒಂದು ಬ್ರೇಕ್ ಸಿಸ್ಟಂ ಇರಬೇಕು ಎನ್ನುವ ವಾದ ಮುಂದಿಟ್ಟಿದ್ದಾರೆ.

ಸತ್ಯ ನಾಡೆಲ್ಲಾ ಅವರ ಎಕ್ಸ್ ಪೋಸ್ಟ್

‘ಒಂದು ಎಐ ಮಾಡಲ್ ಅನ್ನು ಬಳಸುವಾಗ ಅದು ಕಾಂಪ್ರಮೈಸ್ ಆಗಿದೆ ಎಂದು ಭಾವಿಸಿ, ಶುರುವಿನಿಂದಲೇ ಅದರ ನಿಯಂತ್ರಣ ಮಾಡಬೇಕು. ಒಂದು ರೀತಿಯಲ್ಲಿ ಎಮರ್ಜೆನ್ಸಿ ಬ್ರೇಕ್​ನಂತೆ ಎಂದು ತಿಳಿಯಿರಿ. ಒಬ್ಬ ಅಧಿಕೃತ ವ್ಯಕ್ತಿಯು ಎಐ ಮಾಡಲ್ ಅನ್ನು ಒಂದು ಕೆಲಸದ ಮಧ್ಯದಲ್ಲೇ ತಡೆಯುವ ಅಥವಾ ನಿಲ್ಲಿಸುವ ಅವಕಾಶ ಹೊಂದಿರಬೇಕು’ ಎಂದು ಸತ್ಯ ನಾಡೆಲ್ಲಾ ಅವರು ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:

ದಾರಿ ತಪ್ಪಿದ ಅಥವಾ ಸೀಮೋಲಂಘನೆ ಮಾಡುವ ಅಪಾಯಕಾರಿ ಎಐ ಮಾಡಲ್​ಗಳು ಪತ್ತೆಯಾದಾಗ ಅದನ್ನು ನಿಲ್ಲಿಸುವ ಒಂದು ಎಐ ಕಿಲ್ ಸ್ವಿಚ್ ವ್ಯವಸ್ಥೆ ಇರಬೇಕು ಎನ್ನುವುದು ಹಲವು ಪರಿಣಿತರ ವಾದವಾಗಿದೆ. ಸತ್ಯ ನಾಡೆಲ್ಲಾ ಅವರ ಅನಿಸಿಕೆಯು ಈ ಅಭಿಪ್ರಾಯದ ಪುನರುಚ್ಚರಣೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ