18 ವರ್ಷದೊಳಗಿನ ವಯಸ್ಸಿನ ಹೆಣ್ಮಕ್ಕಳಿಗೆ ಅಸಾಂಪ್ರದಾಯಿಕ ಕೆಲಸಗಳಿಗೆ ತರಬೇತಿ: ಸರ್ಕಾರದಿಂದ ಸದ್ಯದಲ್ಲೇ ಹೊಸ ಸ್ಕೀಮ್

Training for girls in non-traditional jobs: ಮಹಿಳೆಯರಿಗೆ ಅಸಾಂಪ್ರದಾಯಿಕವೆನಿಸಿರುವ ಉದ್ಯೋಗಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸರ್ಕಾರ ಹೊಸ ಸ್ಕೀಮ್ ಆರಂಭಿಸುತ್ತಿದೆ. 14ರಿಂದ 18 ವರ್ಷ ವಯಸ್ಸಿನ ಹೆಣ್ಮಕ್ಕಳಿಗೆ ಇಂಥ ಕೆಲಸಗಳಿಗೆ ತರಬೇತಿ ಕೊಡುವ ಯೋಜನೆ ಇದಾಗಿದೆ. ಇನ್ನೆರಡು ಅಥವಾ ಮೂರು ವಾರಗಳಲ್ಲಿ 27 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭವಾಗಲಿದೆ. ಬಳಿಕ 218 ಜಿಲ್ಲೆಗಳಿಗೆ ವಿಸ್ತರಣೆ ಆಗಲಿದೆ ಎನ್ನುವ ಮಾಹಿತಿ ಇದೆ.

18 ವರ್ಷದೊಳಗಿನ ವಯಸ್ಸಿನ ಹೆಣ್ಮಕ್ಕಳಿಗೆ ಅಸಾಂಪ್ರದಾಯಿಕ ಕೆಲಸಗಳಿಗೆ ತರಬೇತಿ: ಸರ್ಕಾರದಿಂದ ಸದ್ಯದಲ್ಲೇ ಹೊಸ ಸ್ಕೀಮ್
ಹೆಣ್ಮಕ್ಕಳು
Follow us
|

Updated on: Aug 29, 2024 | 10:46 AM

ನವದೆಹಲಿ, ಆಗಸ್ಟ್ 29: ಪುರುಷರಿಗೆ ಹೆಚ್ಚು ಸೀಮಿತವಾಗಿರುವ ಉದ್ಯೋಗಗಳಿಗೆ ಹೆಣ್ಮಕ್ಕಳನ್ನು ಅಣಿಗೊಳಿಸಲು ಸರ್ಕಾರ ಹೊಸ ಸ್ಕೀಮ್ ಆರಂಭಿಸಲು ಆಲೋಚಿಸುತ್ತಿದೆ ಎನ್ನುವಂತಹ ವರದಿ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಹಿಳೆಯರಿಗೆ ಅಸಾಂಪ್ರದಾಯಿಕವಾಗಿರುವ ಕೆಲಸಗಳಿಗೆ ಹೆಣ್ಮಕ್ಕಳಿಗೆ ಈ ಸ್ಕೀಮ್ ಮೂಲಕ ತರಬೇತಿ ಕೊಡಲಾಗುತ್ತದೆ. 14ರಿಂದ 18 ವರ್ಷ ವಯಸ್ಸಿನ ಹುಡುಗಿಯರಿಗೆ ಈ ತರಬೇತಿ ಸಿಗಲಿದೆ. ವರದಿ ಪ್ರಕಾರ ಮುಂದಿನ ಎರಡು ಅಥವಾ ಮೂರು ವಾರದೊಳಗೆ ಯೋಜನೆ ಪ್ರಯೋಗಾರ್ಥವಾಗಿ ಆರಂಭವಾಗಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅನಿಲ್ ಮಲಿಕ್ ಹೇಳಿದ್ದಾರೆ.

ಅಸಾಂಪ್ರದಾಯಿಕ ಕೆಲಸಗಳೆಂದರೆ ಏನು?

ನಾನ್-ಟ್ರೆಡಿಶನಲ್ ಜಾಬ್ ಅಥವಾ ಅಸಾಂಪ್ರದಾಯಿಕ ಕೆಲಸ ಎನ್ನುವುದು ಒಂದು ಲಿಂಗ ವರ್ಗಕ್ಕೆ ಹೆಚ್ಚು ಸೀಮಿತವಾಗಿರುತ್ತದೆ. ಒಂದು ಕೆಲಸದಲ್ಲಿ ಒಂದು ಲಿಂಗ ವರ್ಗದ ಸಂಖ್ಯೆ ಶೇ. 25ಕ್ಕಿಂತ ಕಡಿಮೆ ಇದ್ದರೆ ಅದು ಆ ಲಿಂಗ ವರ್ಗಕ್ಕೆ ಅಸಾಂಪ್ರದಾಯಿಕ ಎನಿಸುತ್ತದೆ. ಉದಾಹರಣೆಗೆ, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ಸಿವಿಲ್ ಎಂಜಿನಿಯರ್, ಮೇಸ್ತ್ರಿ, ಗಾರೆ ಕೆಲಸಗಾರ, ಮರಗೆಲಸ ಇತ್ಯಾದಿ ಬಹುತೇಕ ಕೆಲಸಗಳಲ್ಲಿ ಪುರುಷರೇ ಹೆಚ್ಚು. ಮಹಿಳೆಯರ ಪ್ರಮಾಣ ಶೇ. 25ಕ್ಕಿಂತ ಕಡಿಮೆಯೇ. ಹೀಗಾಗಿ ಇವು ಮಹಿಳೆಯರಿಗೆ ಅಸಾಂಪ್ರದಾಯಿಕ ಕೆಲಸವಾಗಿರುತ್ತದೆ.

ಇದನ್ನೂ ಓದಿ: ಹತ್ತು ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳ ಸ್ಥಾಪನೆಗೆ ಸಂಪುಟ ಅನುಮೋದನೆ

ಹಾಗೆಯೇ, ಬುಟ್ಟಿ ಹೆಣೆಯುವುದು, ಡಯೆಟಿಶಿಯನ್, ಗೈನೆಕಾಲಜಿಸ್ಟ್, ಪ್ರೀಸ್ಕೂಲ್ ಟೀಚರ್ ಇತ್ಯಾದಿ ಕೆಲಸಗಳು ಪುರುಷರಿಗೆ ಅಸಾಂಪ್ರದಾಯಿಕ ಎನಿಸುತ್ತವೆ.

ಮಹಿಳೆಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಹೊಂದುವಂತಾಗಲು ಕೇಂದ್ರ ಸರ್ಕಾರ ಕಸರತ್ತು ನಡೆಸುತ್ತಿದೆ. ಅಂತೆಯೇ, ಇನ್ನೆರಡು ಮೂರು ವಾರದಲ್ಲಿ ಹೊರತರಲಿರುವ ಈ ಸ್ಕೀಮ್ ಅನ್ನು ಪ್ರಾಯೋಗಿಕ ಹಂತದಲ್ಲಿ ದೇಶಾದ್ಯಂತ 27 ಜಿಲ್ಲೆಗಳಲ್ಲಿ ಆರಂಭಿಸಬಹುದು. ಅದು ಯಶಸ್ವಿಯಾದಲ್ಲಿ 218 ಜಿಲ್ಲೆಗಳಿಗೆ ಈ ಸ್ಕೀಮ್ ವಿಸ್ತರಿಸುವುದು ಸರ್ಕಾರದ ಉದ್ದೇಶ.

27 ಜಿಲ್ಲೆಗಳಲ್ಲಿನ 14ರಿಂದ 18 ವರ್ಷ ವಯೋಮಾನದ ಹದಿಹರೆಯದ ಬಾಲಕಿಯರಿಗೆ ಅಸಾಂಪ್ರದಾಯಿಕ ಕೆಲಸಗಳಿಗೆ ತರಬೇತಿ ಕೊಡಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ದಿಮೆದಾರಿಕೆ ಸಚಿವಾಲಯದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿಹಾಕಿರುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜನ್ ಧನ್ ಯೋಜನೆಗೆ 10 ವರ್ಷ; ಎಕ್ಸ್​ನಲ್ಲಿ ಪ್ರಧಾನಿ ಶ್ಲಾಘನೆ; ಪಿಎಂಜೆಡಿವೈ ಸಾಧನೆ, ಪ್ರಯೋಜನಗಳೇನು?

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನಾ ಸಂಸ್ಥೆಯ ಮೂಲಕ ಜನ್ ಶಿಕ್ಷಣ್ ಸಂಸ್ಥಾನ್ ಮೊದಲಾದವರಿಗೆ ತರಬೇತುದಾರರನ್ನು ಅಣಿಗೊಳಿಸಲಾಗುತ್ತದೆ ಎನ್ನುವ ಮಾಹಿತಿ ಬಂದಿದೆ. ಒಟ್ಟಾರೆ, ಮಹಿಳೆಯರನ್ನು ಉದ್ಯೋಗ ವಲಯಕ್ಕೆ ಕರೆತರಲು ಪ್ರೇರೇಪಿಸುವ ದೊಡ್ಡ ಗುರಿಯಲ್ಲಿ ಇದು ಒಂದು ಹೆಜ್ಜೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ