AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಡಿಎಸ್ ಕ್ರೆಡಿಟ್ ಕ್ಲೈಮ್ ಆಗುತ್ತಿಲ್ಲವಾ? ರಿಟರ್ನ್ಸ್ ಫೈಲ್ ಮಾಡಲು ಮಾರ್ಚ್ 31 ಕೊನೆಯ ದಿನ; ಏನಿದು ಟಿಡಿಎಸ್ ಸಂಗತಿ…?

Revised TDS returns: 2008ರಿಂದ 2019ರವರೆಗಿನ ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೇಮ್ ಮಾಡಲು ಸಮಸ್ಯೆ ಆಗಿದ್ದಲ್ಲಿ, ನಿಮ್ಮ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇದೆ. ನಿಮ್ಮ ಆದಾಯದಿಂದ ಯಾರಾದರೂ ಟಿಡಿಎಸ್ ಮುರಿದುಕೊಂಡಿದ್ದರೆ, ಅವರು ಆದಾಯ ತೆರಿಗೆಗೆ ನಿಮ್ಮ ಟಿಡಿಎಸ್ ರಿಟರ್ನ್ ಫೈಲ್ ಮಾಡಬೇಕು. ಇದು ಸರಿಯಾಗಿ ಆಗದೇ ಹೋದರೆ 26ಎಎಸ್ ಮತ್ತು ಎಐಎಸ್​ನಲ್ಲಿ ಸರಿಯಾಗಿ ದಾಖಲಾಗುವುದಿಲ್ಲ. ಇದರಿಂದ ಟಿಡಿಎಸ್ ಕ್ರೆಡಿಟ್ ಕ್ಲೇಮ್ ಮಾಡಲು ಆಗುವುದಿಲ್ಲ.

ಟಿಡಿಎಸ್ ಕ್ರೆಡಿಟ್ ಕ್ಲೈಮ್ ಆಗುತ್ತಿಲ್ಲವಾ? ರಿಟರ್ನ್ಸ್ ಫೈಲ್ ಮಾಡಲು ಮಾರ್ಚ್ 31 ಕೊನೆಯ ದಿನ; ಏನಿದು ಟಿಡಿಎಸ್ ಸಂಗತಿ...?
ಟಿಡಿಎಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2025 | 12:24 PM

ನಿಮ್ಮ ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೈಮ್ ಮಾಡುವ ವಿಚಾರದಲ್ಲಿ ಸಮಸ್ಯೆ ಆಗುತ್ತಿದ್ದರೆ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇದೆ. ನಿಮ್ಮ ಪರಿಷ್ಕೃತ ಟಿಡಿಎಸ್ ಅನ್ನು ಸಲ್ಲಿಸುವಂತೆ ನಿಮ್ಮಿಂದ ಟಿಡಿಎಸ್ ಕಡಿತ ಮಾಡಿದ ಕಂಪನಿ ಅಥವಾ ಬ್ಯಾಂಕ್ ಅಥವಾ ಮತ್ಯಾವುದಾದರೂ ಸಂಸ್ಥೆಗೆ ನೀವು ಮನವಿ ಮಾಡಬೇಕಾಗುತ್ತದೆ. ಆರು ವರ್ಷದ ಬಳಿಕ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುವುದಿಲ್ಲ.

ಏನಿದು ಟಿಡಿಎಸ್?

ಟಿಡಿಎಸ್ ಎಂದರೆ ಮೂಲದಲ್ಲೇ ಕಡಿತಗೊಳಿಸಲಾಗುವ ತೆರಿಗೆ. ನಿಮ್ಮ ಎಫ್​ಡಿ ಹಣ ಮೆಚ್ಯೂರ್ ಆದಾಗ ಬ್ಯಾಂಕ್​ನವರು ನಿರ್ದಿಷ್ಟ ಟಿಡಿಎಸ್ ಅನ್ನು ಮುರಿದುಕೊಳ್ಳುತ್ತಾರೆ. ಈ ಟಿಡಿಎಸ್ ಹಣದ ಲೆಕ್ಕ ಆದಾಯ ತೆರಿಗೆಗೆ ಹೋಗುತ್ತದೆ. ಹಲವರಿಗೆ ಸಂಬಳ ನೀಡುವಾಗಲೇ ಟಿಡಿಎಸ್ ಮುರಿದುಕೊಂಡಿರಲಾಗುತ್ತದೆ. ಹೀಗೆ ನಿಮ್ಮಿಂದ ಯಾವುದೇ ಟಿಡಿಎಸ್ ಮುರಿದುಕೊಂಡಿದ್ದರೆ ಅದು ನಿಮ್ಮ ಫಾರ್ಮ್ 26ಎಎಸ್ ಅಥವಾ ಎಐಎಸ್​ನಲ್ಲಿ (ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್) ನಮೂದಾಗುತ್ತದೆ.

ಇದನ್ನೂ ಓದಿ: RBI MPC Meet: ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಮೊದಲ ಆರ್​ಬಿಐ ಎಂಪಿಸಿ ಸಭೆ; ನಾಳೆ ಬಡ್ಡಿದರ ಕಡಿತ ನಿಶ್ಚಿತವಾ?

ಹೀಗೆ ನಮೂದಾಗಬೇಕಾದರೆ ಟಿಡಿಎಸ್ ಡಿಡಕ್ಟರ್​ಗಳು ಟಿಡಿಎಸ್ ರಿಟರ್ನ್ ಫೈಲ್ ಮಾಡಿರಬೇಕು. ಅದೂ ನಿಮ್ಮ ಪ್ಯಾನ್ ನಂಬರ್ ಇತ್ಯಾದಿ ಎಲ್ಲಾ ಸರಿಯಾದ ಮಾಹಿತಿಯೊಂದಿಗೆ ರಿಟರ್ನ್ ಸಲ್ಲಿಸಿರಬೇಕು. ಸರಿಯಾಗಿ ಸಲ್ಲಿಸದಿದ್ದರೆ ಫಾರ್ಮ್ 26ಎಎಸ್ ಮತ್ತು ಎಐಎಸ್​ನಲ್ಲಿ ನಿಮ್ಮ ಟಿಡಿಎಸ್ ದಾಖಲೆಗಳು ನಮೂದಾಗಿರುವುದಿಲ್ಲ. ನೀವು ಈ ಟಿಡಿಎಸ್ ಅನ್ನು ಕ್ಲೇಮ್ ಮಾಡಲು ಸಾಧ್ಯವಾಗುವುದಿಲ್ಲ.

ಕಳೆದ ವರ್ಷದ ಬಜೆಟ್​ನಲ್ಲಿ (2024ರ ಜುಲೈನದ್ದು) ಸರ್ಕಾರವು ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಕಾಲಮಿತಿ ಹಾಕಿದೆ. ಪರಿಷ್ಕೃತ ಟಿಡಿಎಸ್ ರಿಟರ್ನ್ ಅನ್ನು ಆರು ವರ್ಷದ ಬಳಿಕ ಸಲ್ಲಿಸಲು ಆಗುವುದಿಲ್ಲ. ಟಿಡಿಎಸ್ ಡಿಡಕ್ಟರ್​ಗಳು ಸರಿಯಾಗಿ ಟಿಡಿಎಸ್ ರಿಟರ್ನ್ ಫೈಲ್ ಮಾಡಿರದಿದ್ದರೆ ಅದನ್ನು ಸರಿಪಡಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇರುತ್ತದೆ. ಈ ರೀತಿ ಟಿಡಿಎಸ್ ಡಿಡಕ್ಟರ್​ಗಳು ಮಾಡಿದ ತಪ್ಪಿನಿಂದ 2007-08ರಿಂದ 2018-19ರ ಹಣಕಾಸು ವರ್ಷಕ್ಕೆ ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೇಮ್ ಮಾಡಲು ಸಾಧ್ಯವಾಗದೇ ಇರುವವರು ಈ ಕಾಲಾವಕಾಶ ಬಳಸಿಕೊಳ್ಳಬಹುದು. ತಮ್ಮ ಟಿಡಿಎಸ್ ಡಿಡಕ್ಟರ್ ಬಳಿ ಹೋಗಿ ಪರಿಷ್ಕೃತ ಟಿಡಿಎಸ್ ರಿಟರ್ನ್ ಸಲ್ಲಿಸಬೇಕೆಂದು ಮನವಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: ನಿಮ್ಮ ಬಿಟ್​ಕಾಯಿನ್ ಖರೀದಿ, ಮಾರಾಟ ಸೇರಿ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಮೇಲೆ ಸರ್ಕಾರದ ಕಣ್ಣು

ಒಂದು ವೇಳೆ ಬ್ಯಾಂಕ್ ಅಥವಾ ನಿರ್ದಿಷ್ಟ ಟಿಡಿಎಸ್ ಡಿಡಕ್ಟರ್​ಗಳು ನಿಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಆದಾಯ ತೆರಿಗೆ ಇಲಾಖೆ ಬಳಿ ನಿಮ್ಮ ದೂರು ದಾಖಲಿಸಬಹುದು. ಇಲಾಖೆಯೇ ಈ ಸಂಸ್ಥೆಗಳಿಗೆ ನೋಟೀಸ್ ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ