Closing Bell: ಸಾರ್ವಕಾಲಿನ ಎತ್ತರದಲ್ಲಿ ದಿನಾಂತ್ಯದ ವಹಿವಾಟು ಮುಗಿಸಿದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ

| Updated By: Srinivas Mata

Updated on: Oct 18, 2021 | 4:08 PM

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ದಾಖಲೆ ಪ್ರಮಾಣದ ಎತ್ತರದಲ್ಲಿ ಅಕ್ಟೋಬರ್ 18, 2021ರಂದು ವಹಿವಾಟು ಚುಕ್ತಾ ಮಾಡಿದೆ. ನಿಫ್ಟಿಯಲ್ಲಿ ಹೆಚ್ಚಿನ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Closing Bell: ಸಾರ್ವಕಾಲಿನ ಎತ್ತರದಲ್ಲಿ ದಿನಾಂತ್ಯದ ವಹಿವಾಟು ಮುಗಿಸಿದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ
ಷೇರು ಮಾರುಕಟ್ಟೆ ಏರಿಕೆ (ಪ್ರಾತಿನಿಧಿಕ ಚಿತ್ರ)
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಅಕ್ಟೋಬರ್ 18ನೇ ತಾರೀಕಿನ ಸೋಮವಾರ ಏರಿಕೆಯನ್ನು ದಾಖಲಿಸಿವೆ. ಸೆನ್ಸೆಕ್ಸ್ 459.64 ಅಥವಾ ಶೇ 0.75ರಷ್ಟ ಹೆಚ್ಚಳವಾಗಿ 61,765.59 ಪಾಯಿಂಟ್ಸ್​ನೊಂದಿಗೆ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 138.50 ಪಾಯಿಂಟ್ಸ್ ಅಥವಾ ಶೇ 0.76ರಷ್ಟು ಹೆಚ್ಚಳವಾಗಿ 18,477 ಪಾಯಿಂಟ್ಸ್​​ನೊಂದಿಗೆ ವ್ಯವಹಾರವನ್ನು ಚುಕ್ತಾಗೊಳಿಸಿದೆ. ಇಂದಿನ ವಹಿವಾಟಿನಲ್ಲಿ 1677 ಕಂಪೆನಿಯ ಷೇರುಗಳು ಮೇಲೇರಿದರೆ, 1563 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದವು. ಇನ್ನು 127 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.

ಫಾರ್ಮಾಸ್ಯುಟಿಕಲ್ಸ್ ಹೊರತುಪಡಿಸಿದಂತೆ ಇತರ ಎಲ್ಲ ವಲಯಗಳು ಏರಿಕೆಯಲ್ಲೇ ದಿನಾಂತ್ಯದ ವ್ಯವಹಾರವನ್ನು ಮುಕ್ತಾಯಗೊಳಿಸಿದವು. ಲೋಹ, ವಿದ್ಯುತ್, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕಗಳು ಶೇ 2ರಿಂದ ಶೇ 4ರಷ್ಟು ಏರಿಕೆ ದಾಖಲಿಸಿದವು. ಬಿಎಸ್​ಇ ಮಿಡ್​ಕ್ಯಾಪ್​ ಮತ್ತು ಸ್ಮಾಲ್​ಕ್ಯಾಪ್​ ತಲಾ ಶೇ 1ರಷ್ಟು ಸೇರ್ಪಡೆಗೊಳಿಸಿದವು.

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಹಿಂಡಾಲ್ಕೋ ಶೇ 5.17
ಇನ್ಫೋಸಿಸ್​ ಶೇ 4.45
ಟೆಕ್​ ಮಹೀಂದ್ರಾ ಶೇ 3.41
ಜೆಎಸ್​ಡಬ್ಲ್ಯು ಸ್ಟೀಲ್ ಶೇ 3.31
ಟಾಟಾ ಸ್ಟೀಲ್ ಶೇ 2.62

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಎಚ್​ಸಿಎಲ್​ ಟೆಕ್ನಾಲಜೀಸ್ ಶೇ -2.38
ಮಹೀಂದ್ರಾ ಅಂಡ್ ಮಹೀಂದ್ರಾ ಶೇ -2.20‘
ಏಷ್ಯನ್ ಪೇಂಟ್ಸ್ ಶೇ -1.71
ಡಾ. ರೆಡ್ಡೀಸ್ ಲ್ಯಾಬ್ಸ್ ಶೇ -1.64
ಬ್ರಿಟಾನಿಯಾ ಶೇ -1.48

ಇದನ್ನೂ ಓದಿ: Do’s And Don’ts In Share Market: ಷೇರು ಮಾರ್ಕೆಟ್​ನಲ್ಲಿ ಮಾಡುವ ಹಾಗೂ ಮಾಡಬಾರದು ಕೆಲಸಗಳಿವು