AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಲ್ಲಿಯಲ್ಲಿ ಟ್ಯಾಕ್ಸಿ, ಆಟೊ ಚಾಲಕರಿಂದ 3 ದಿನ ಮುಷ್ಕರ; ಏನಿವೆ ಅವರ ಬೇಡಿಕೆಗಳು?

Delhi Auto, tax drivers strike on May 21-23: ದೆಹಲಿಯಲ್ಲಿ ಪ್ರಯಾಣದ ಮೀಟರ್ ದರ ಏರಿಸುವಂತೆ ಒತ್ತಾಯಿಸಿ ಟ್ಯಾಕ್ಸಿ, ಆಟೊ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇ 21ರಿಂದ 23ರವರೆಗೆ ದೆಹಲಿಯಲ್ಲಿ ಚಾಲಕರ ಮುಷ್ಕರ ನಡೆಯಲಿದೆ. ಈ ಮೂರು ದಿನಗಳ ಕಾಲ ದೆಹಲಿಯಲ್ಲಿ ಟ್ಯಾಕ್ಸಿ, ಆಟೊರಿಕ್ಷಾ ಮತ್ತಿತತರ ಕಮರ್ಷಿಯಲ್ ವಾಹನಗಳ ಸೇವೆ ಇರುವ ಸಾಧ್ಯತೆ ಇಲ್ಲ.

ದಿಲ್ಲಿಯಲ್ಲಿ ಟ್ಯಾಕ್ಸಿ, ಆಟೊ ಚಾಲಕರಿಂದ 3 ದಿನ ಮುಷ್ಕರ; ಏನಿವೆ ಅವರ ಬೇಡಿಕೆಗಳು?
ದೆಹಲಿಯಲ್ಲಿ ಟ್ಯಾಕ್ಸಿ ಚಾಲಕರಿಂದ ಮುಷ್ಕರImage Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 19, 2026 | 11:43 AM

Share

ನವದೆಹಲಿ, ಮೇ 19: ರಾಷ್ಟ್ರ ರಾಜಧಾನಿನಗರಿಯಲ್ಲಿನ ಕಮರ್ಷಿಯಲ್ ವಾಹನಗಳ ಚಾಲಕರ ಒಕ್ಕೂಟಗಳು (Commercial vehicle drivers unions ಮೂರು ದಿನಗಳ ಮುಷ್ಕರ (Strike) ನಡೆಸುವುದಾಗಿ ಘೋಷಿಸಿವೆ. ಮೇ 21, ಗುರುವಾರದಿಂದ ಮೇ 23, ಶನಿವಾರದವರೆಗೆ ಈ ಪ್ರತಿಭಟನೆ ನಡೆಯಲಿದೆ. ದೆಹಲಿಯಲ್ಲಿ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಟ್ಯಾಕ್ಸಿ ಮತ್ತು ಆಟೊರಿಕ್ಷಾ ದರಗಳನ್ನು (Taxi fares) ಹೆಚ್ಚಿಸಬೇಕೆಂದು ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ.

ಈ ಸುದ್ದಿಯ ಮುಖ್ಯಾಂಶಗಳು

  • ದೆಹಲಿಯಲ್ಲಿ ಸತತವಾಗಿ ಇಂಧನ ಏರಿಕೆ ಹಿನ್ನೆಲೆಯಲ್ಲಿ ಆಟೊರಿಕ್ಷಾ ಮತ್ತು ಟ್ಯಾಕ್ಸಿ ದರಗಳನ್ನು ಹೆಚ್ಚಿಸಬೇಕು ಎಂದು ಚಾಲಕರ ಒಕ್ಕೂಟಗಳ ಒತ್ತಾಯ.
  • ಪ್ರಯಾಣ ದರ ಹೆಚ್ಚಿಸುವಂತೆ ಆಗ್ರಹಿಸಿ ದೆಹಲಿಯ ಚಾಲಕರ ಒಕ್ಕೂಟಗಳು ಮೇ 21-23ರವರೆಗೆ ಮುಷ್ಕರ ನಡೆಸಲಿವೆ.
  • ಚಾಲಕರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮುಷ್ಕರ ಸ್ವರೂಪ ತೀವ್ರಗೊಳ್ಳಲಿದೆ ಎಂದು ಒಕ್ಕೂಟವು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ದೆಹಲಿಯಲ್ಲಿ ಸಿಎನ್​ಜಿ, ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಮರ್ಷಿಯಲ್ ವಾಹನಗಳ ಪ್ರಯಾಣ ದರ ಪರಿಷ್ಕರಣೆ ಮಾಡಬೇಕು ಮತ್ತು ಬೆಲೆ ಏರಿಕೆಯಿಂದ ಬಾಧಿತರಾದ ಚಾಲಕರಿಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಈ ಸಂಘಟನೆಗಳ ಪ್ರಮುಖ ಒತ್ತಾಯವಾಗಿದೆ. ಈ ಸಂಬಂಧ ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆಯು (All India Motor Transport Congress) ನಿನ್ನೆ ಸೋಮವಾರ (ಮೇ 18) ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರಿಗೆ ಪತ್ರ ಬರೆದು ಒತ್ತಾಯಪಡಿಸಿತ್ತು.

‘ಇಂಧನ ಬೆಲೆಗಳು ಸತತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಚಾಲಕರು ತಮ್ಮ ಜೀವನ ನಿರ್ವಹಿಸಲು ಪರದಾಡುವಂತಾಗಿದೆ. ಆದ್ದರಿಂದ ದೆಹಲಿಯ ಇತರ ಸಂಘಟನೆಗಳೊಂದಿಗೆ ಸಹಕಾರದಲ್ಲಿ ಚಾಲಕ ಶಕ್ತಿ ಒಕ್ಕೂಟವು ಚಕ್ಕಾ ಜಾಮ್​ಗೆ (ಮುಷ್ಕರ) ಕರೆ ನೀಡಿದೆ. ಮೇ 21, 22 ಮತ್ತು 23ರಂದು ವಾಹನ ಚಲಾಯಿಸದಿರಿ ಎಂದು ಮನವಿ ಮಾಡಲಾಗಿದೆ’ ಎಂದು ಚಾಲಕ್ ಶಕ್ತಿ ಯೂನಿಯನ್ನ ಉಪಾಧ್ಯಕ್ಷ ಅನುಜ್ ಕುಮಾರ್ ರಾಥೋಡ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ಒಂದು ವೇಳೆ, ದೆಹಲಿ ಸರ್ಕಾರವು ಮುಂದಿನ ಒಂದೆರಡು ವಾರದೊಳಗೆ ಟ್ಯಾಕ್ಸಿ ಪ್ರಯಾಣದರವನ್ನು ಪರಿಷ್ಕರಿಸಲು ವಿಫಲವಾದಲ್ಲಿ ಈ ಪ್ರತಿಭಟನೆ ಉಗ್ರ ರೂಪ ಪಡೆಯುತ್ತದೆ. ದೊಡ್ಡ ಮಟ್ಟದಲ್ಲಿ ಮುಷ್ಕರ ನಡೆಸಲಾಗುತ್ತದೆ. ಇದಕ್ಕೆ ದೆಹಲಿ ಸರ್ಕಾರವೇ ಹೊಣೆಯಾಗುತ್ತದೆ ಎಂದೂ ಚಾಲಕರ ಒಕ್ಕೂಟವು ಎಚ್ಚರಿಕೆ ನೀಡಿದೆ.

ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಇತ್ತೀಚೆಗೆ ರಾಷ್ಟ್ರಾದ್ಯಂತ 3 ರೂ ಏರಿಕೆ ಆಗಿವೆ. ಇದಕ್ಕೆ ಹೆಚ್ಚುವರಿಯಾಗಿ ದೆಹಲಿಯಲ್ಲಿ ಸಿಎನ್​ಜಿ ಮತ್ತು ಪೆಟ್ರೋಲ್, ಡೀಸಲ್ ದರಗಳನ್ನು ಹೆಚ್ಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Tue, 19 May 26

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More