D-Mart: ಡಿ-ಮಾರ್ಟ್ ಮಾತೃಸಂಸ್ಥೆ ಅವೆನ್ಯೂ ಸೂಪರ್‌ಮಾರ್ಟ್ಸ್ ನಿವ್ವಳ ಲಾಭ ಆರು ಪಟ್ಟು ಜಿಗಿತ
ರಾಧಾಕಿಶನ್ ದಮಾನಿ ಕುಟುಂಬ ಪ್ರವರ್ತಕರಾಗಿರುವ ಡಿ-ಮಾರ್ಟ್ ರೀಟೇಲ್ ಸರಪಳಿಯ ಮಾತೃಸಂಸ್ಥೆಯ ಹಣಕಾಸು ವರ್ಷ 2022-23ನೇ ಮೊದಲನೇ ತ್ರೈಮಾಸಿಕಕ್ಕೆ ಏಕೀಕೃತ ಲಾಭ ಆರು ಪಟ್ಟು ಜಿಗಿತ ಕಂಡಿದೆ.
ರೀಟೇಲ್ ಸರಪಳಿ ಡಿ-ಮಾರ್ಟ್ (D-Mart) ಅನ್ನು ಹೊಂದಿರುವ ಮತ್ತು ನಿರ್ವಹಿಸುವ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್ನಿಂದ ಜೂನ್ 30, 2022ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕೆ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಆರು ಪಟ್ಟು ಜಿಗಿತವನ್ನು, ಅಂದರೆ 642.89 ಕೋಟಿ ರೂಪಾಯಿಯನ್ನು ಶನಿವಾರ ವರದಿ ಮಾಡಿದೆ. “ಉತ್ತಮ ಚೇತರಿಕೆ”ಯು ಇದಕ್ಕೆ ಸಹಾಯ ಮಾಡಿದೆ. ಒಟ್ಟಾರೆ ಮಾರಾಟವು ಮತ್ತು ಹೋಲಿಕೆ ದೃಷ್ಟಿಯಿಂದ ನೋಡಿದಾಗ ವರ್ಷದಿಂದ ವರ್ಷಕ್ಕೆ ಕಡಿಮೆ ಆಗಿದೆ. ಅವೆನ್ಯೂ ಸೂಪರ್‌ಮಾರ್ಟ್ಸ್ ಕಂಪೆನಿಯು ಒಂದು ವರ್ಷದ ಹಿಂದೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ರೂ. 95.36 ಕೋಟಿ ನಿವ್ವಳ ಲಾಭ ಗಳಿಸಿತ್ತು ಎಂದು ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ. ಇನ್ನು ಆದಾಯದ ಕಡೆ ನೋಡುವುದಾದರೆ, ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ರೂ. 5,183.12 ಕೋಟಿ ಬಂದಿತ್ತು. ಅದಕ್ಕೆ ಹೋಲಿಸಿದರೆ ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಅದರ ಆದಾಯವು ಶೇ 93.66ರಷ್ಟು ಹೆಚ್ಚಾಗಿ ರೂ. 10,038.07 ಕೋಟಿಗೆ ತಲುಪಿದೆ.
ರಾಧಾಕಿಶನ್ ದಮಾನಿ ಕುಟುಂಬ-ಪ್ರಮೋಟೆಡ್ ಸೂಪರ್‌ಮಾರ್ಕೆಟ್ ಸರಪಳಿಯ ಪ್ರಕಾರ, ಅದರ Q1FY23 ಫಲಿತಾಂಶಗಳನ್ನು ಕಳೆದ ಹಣಕಾಸು ವರ್ಷದ ಅನುಗುಣವಾದ ತ್ರೈಮಾಸಿಕದೊಂದಿಗೆ ಹೋಲಿಸಲು ಆಗುವುದಿಲ್ಲ. ಏಕೆಂದರೆ ಇದು ಕೊವಿಡ್ -19ರ ಎರಡನೇ ಅಲೆಯಿಂದ ಪ್ರಭಾವಿತವಾಗಿದೆ. ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಅವೆನ್ಯೂ ಸೂಪರ್‌ಮಾರ್ಟ್ಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ನೆವಿಲ್ಲೆ ನರೊನ್ಹಾ ಹೇಳಿದಂತೆ, “ಒಟ್ಟಾರೆ ಮಾರಾಟದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಆದರೆ ಆ ಸಮಯದಲ್ಲಿ ಕೊವಿಡ್ -19ರ ಎರಡನೇ ಅಲೆಯಿಂದಾಗಿ ಈ ತ್ರೈಮಾಸಿಕದ ಕಾರ್ಯಕ್ಷಮತೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಲಾಗುವುದಿಲ್ಲ.” ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಒಟ್ಟು ವೆಚ್ಚಗಳು ರೂ. 9,191.79 ಕೋಟಿಗಳಾಗಿದ್ದು, Q1/FY 2022-23ರಲ್ಲಿ ಶೇ 81.03ರಷ್ಟು ಹೆಚ್ಚಾಗಿದ್ದು, ಇದು ಹಿಂದಿನ ತ್ರೈಮಾಸಿಕದಲ್ಲಿ ರೂ. 5,077.22 ಕೋಟಿ ಇತ್ತು.
ಏಪ್ರಿಲ್-ಜೂನ್‌ನಲ್ಲಿ ಡಿಮಾರ್ಟ್‌ನ ಬೆಳವಣಿಗೆ ಕುರಿತು ಮಾತನಾಡುವಾಗ, ನರೊನ್ಹಾ, “ಕಳೆದ ಮೂರು ಹಣಕಾಸು ವರ್ಷಗಳಲ್ಲಿ ನಾವು ಸಂಚಿತವಾಗಿ 110 ಮಳಿಗೆಗಳನ್ನು ತೆರೆದಿದ್ದೇವೆ. ಇದು ಕಳೆದ ಎರಡು ವರ್ಷಗಳಲ್ಲಿ ಸಾಮಾನ್ಯ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವನ್ನು ಪಡೆಯಲಿಲ್ಲ. ದೊಡ್ಡದಾದ, ಉತ್ತಮವಾಗಿ ವಿನ್ಯಾಸಗೊಳಿಸಲಾದ ಮತ್ತು ದೊಡ್ಡ ಪ್ರಮಾಣದ ಆದಾಯವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಮಳಿಗೆಗಳಾಗಿವೆ. ಈ ತ್ರೈಮಾಸಿಕದಲ್ಲಿ ಈ ಮಳಿಗೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ.” ಡಿ-ಮಾರ್ಟ್ 2022-23ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 10 ಮಳಿಗೆಗಳನ್ನು ಸೇರಿಸಿದೆ. ಇದು ಕೊವಿಡ್ -19 ಸಾಂಕ್ರಾಮಿಕ ರೋಗದಿಂದ ಶೂನ್ಯ ಅಡಚಣೆಯ ಮೊದಲ ಪೂರ್ಣ ತ್ರೈಮಾಸಿಕವಾಗಿದೆ.
“Q3ನಂತೆಯೇ Q1 ಉತ್ತಮ ಆದಾಯದ ಜೊತೆಗೆ ಶಾಲಾ/ಕಾಲೇಜುಗಳ ಕಾಲ ಮತ್ತು ಮುಂಗಾರುಗಳ ಆರಂಭದ ಕಾರಣದಿಂದಾಗಿ ಲಾಭವನ್ನು ಹೆಚ್ಚಿಸುವ ಅವಧಿಯಾಗಿದೆ,” ಎಂದು ಅವರು ಹೇಳಿದರು. ಅದರೆ ಸಾಮಾನ್ಯ ಸರಕು ಮತ್ತು ಉಡುಪು ವಿಭಾಗಗಳು ಹಿಂದಿನ ತ್ರೈಮಾಸಿಕಕ್ಕಿಂತ ತುಲನಾತ್ಮಕವಾಗಿ ಉತ್ತಮ ಎಳೆತವನ್ನು ಕಂಡವು. ಆದರೆ ಇನ್ನೂ ಕೊವಿಡ್-19 ನೇತೃತ್ವದ ಅಡೆತಡೆಗಳು ಮತ್ತು ತೀವ್ರ ಹಣದುಬ್ಬರದ ಪ್ರಭಾವದ ಕೆಲವು ಸವಾಲುಗಳನ್ನು ಹೊಂದಿದೆ.
“ಈ ತ್ರೈಮಾಸಿಕದ ನಮ್ಮ ವಿವೇಚನೆಯ ಕೊಡುಗೆ ಮಿಶ್ರಣವು ಇನ್ನೂ ಪೂರ್ವ-ಸಾಂಕ್ರಾಮಿಕ ಮಟ್ಟವನ್ನು ತಲುಪಿಲ್ಲ. ಆದರೆ ಉತ್ತಮವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಹಣದುಬ್ಬರವು ವಿವೇಚನಾಯುಕ್ತ ವರ್ಗಗಳ ಸಮೂಹ ಬಳಕೆಯ ಪರಿಮಾಣದ ಬೆಳವಣಿಗೆಯಲ್ಲಿ ಸಂಭವನೀಯ ಒತ್ತಡವನ್ನು ಮರೆ ಮಾಡುತ್ತದೆ,” ಎಂದು ಅವರು ಹೇಳಿದ್ದಾರೆ. ತುಲನಾತ್ಮಕವಾಗಿ ಹಳೆಯ ಮಳಿಗೆಗಳಲ್ಲಿ ವಿವೇಚನೆಯ ಉತ್ಪನ್ನಗಳ ಪಾಸಿಟಿವ್ ಪರಿಮಾಣದ ಬೆಳವಣಿಗೆಯ ಮೂಲಕ ಮೌಲ್ಯದ ಬೆಳವಣಿಗೆಯು D-Mart ವ್ಯವಹಾರದ ಶಕ್ತಿ, ಸ್ಪರ್ಧಾತ್ಮಕ ಪ್ರಭಾವ ಹಾಗೂ ಸ್ಥಳೀಯ ಆರ್ಥಿಕತೆಯ ಅತ್ಯುತ್ತಮ ಪ್ರತಿಬಿಂಬವಾಗಿದೆ. ಅದರ ಇ-ಕಾಮರ್ಸ್ ವ್ಯವಹಾರ ಡಿಮಾರ್ಟ್ ರೆಡಿ ಕೂಡ ಭಾರತದ 12 ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ.
“ನಾವು ಹೆಚ್ಚಿನದನ್ನು ಮಾಡುತ್ತಿದ್ದೇವೆ ಮತ್ತು ದೊಡ್ಡ ನಗರಗಳತ್ತ ಗಮನ ಹರಿಸುವುದನ್ನು ಮುಂದುವರಿಸುತ್ತೇವೆ. ಸಣ್ಣ ಪಟ್ಟಣಗಳು ಪ್ರಾಯೋಗಿಕವಾಗಿವೆ ಮತ್ತು ಈ ಪಟ್ಟಣಗಳಲ್ಲಿನ ನಮ್ಮ ಗ್ರಾಹಕರಿಂದ ನಾವು ಪಡೆಯುವ ಪ್ರತಿಕ್ರಿಯೆಯಿಂದ ನಿರಂತರವಾಗಿ ಕಲಿಯುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.