Development: ಹೊಸ ತಂತ್ರಜ್ಞಾನಗಳಿಗೆ ಸಿದ್ಧವಾಗಿದೆ ಭಾರತದ ಶಿಕ್ಷಣ ಮತ್ತು ಕೌಶಲ್ಯ ವ್ಯವಸ್ಥೆ; ಭಾರತೀಯ ಯುವಕರ ಮೇಲೆ ನೆಟ್ಟಿದೆ ಇಡೀ ವಿಶ್ವದ ಕಣ್ಣು

|

Updated on: Jan 11, 2024 | 5:13 PM

Vibrant Gujarat Global Summit 2024: ಭಾರತವು ವಿಶ್ವಕ್ಕೆ ಉತ್ಪಾದನಾ ಕೇಂದ್ರವಾಗುವ ಹಾದಿಯಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್​ನ ಎರಡನೇ ದಿನದ ಕಾರ್ಯಕ್ರಮವೊಂದಲ್ಲಿ ಧರ್ಮೇಂದ್ರ ಪ್ರಧಾನ್ ಪಾಲ್ಗೊಂಡು ಮಾತನಾಡಿದರು. ಕೆಲಸ ಮಾಡುವ ವಯಸ್ಸಿನ ಜನರು ಭಾರತದಲ್ಲಿ ಹೆಚ್ಚು ಇರುವುದರಿಂದ ಜಗತ್ತಿನ ಕಣ್ಣು ಭಾರತದ ಯುವಕರ ಮೇಲೆ ನೆಟ್ಟಿದೆ ಎಂದು ಅವರು ಹೇಳಿದ್ದಾರೆ.

Development: ಹೊಸ ತಂತ್ರಜ್ಞಾನಗಳಿಗೆ ಸಿದ್ಧವಾಗಿದೆ ಭಾರತದ ಶಿಕ್ಷಣ ಮತ್ತು ಕೌಶಲ್ಯ ವ್ಯವಸ್ಥೆ;  ಭಾರತೀಯ ಯುವಕರ ಮೇಲೆ ನೆಟ್ಟಿದೆ ಇಡೀ ವಿಶ್ವದ ಕಣ್ಣು
ಧರ್ಮೇಂದ್ರ ಪ್ರಧಾನ್
Follow us on

ಗಾಂಧಿನಗರ್, ಜನವರಿ 11: ಕೆಲಸ ಮಾಡಬಲ್ಲ ವಯಸ್ಸಿನ ಜನರ ಸಂಖ್ಯೆ (working age population) ಮುಂದಿನ ಎರಡು ಮೂರು ದಶಕಗಳಲ್ಲಿ ಭಾರತದಲ್ಲಿ ಅತಿಹೆಚ್ಚು ಇರಲಿದೆ. ಇಡೀ ವಿಶ್ವದ ಕಣ್ಣು ಈಗ ಭಾರತೀಯ ಯುವಕರ ಮೇಲೆ ನೆಟ್ಟಿದೆ ಎಂದು ಕೇಂದ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಹತ್ತನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್​ನ (Vibrant Gujarat Global Summit 2024) ಎರಡನೇ ದಿನದ ಕಾರ್ಯಕ್ರಮದಲ್ಲಿ ಸೆಮಿನಾರ್ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಾರತದ ಯುವಕರು ವಿಶ್ವ ಉದ್ಯೋಗಗಳಲ್ಲಿ ಬಹುಪಾಲು ಪಡೆಯಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಉದ್ಯೋಗಗಳು ಹೊಸ ತಂತ್ರಜ್ಞಾನಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ಭಾರತದ ಶಿಕ್ಷಣ ಮತ್ತು ಕೌಶಲ್ಯ ವ್ಯವಸ್ಥೆಯು ದೇಶದ ಯುವಕರನ್ನು ಭವಿಷ್ಯದ ಅಗತ್ಯಗಳಿಗೆ ರೂಪುಗೊಳಿಸುತ್ತಿದೆ ಎಂದು ಇಂದು (ಜ. 11) ಗುರುವಾರ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Narendra Modi: ಸ್ವಾತಂತ್ರ್ಯ ಶತಮಾನೋತ್ಸವದ ವೇಳೆ ಮುಂದುವರಿದ ದೇಶವನ್ನಾಗಿಸುವ ಗುರಿ: ನರೇಂದ್ರ ಮೋದಿ

ಮುಂಚೂಣಿಯಲ್ಲಿ ಗುಜರಾತ್….

ಭಾರತವು ವಿಶ್ವಕ್ಕೆ ಉತ್ಪಾದನಾ ಕೇಂದ್ರವಾಗುವ ಹಾದಿಯಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ.

‘ಉತ್ಪಾದನಾ ಅಡ್ಡೆಯಾಗಲು ಒಳ್ಳೆಯ ನೀತಿ, ಉತ್ತಮ ಮಾರುಕಟ್ಟೆ, ಗುಣಮಟ್ಟದ ಮಾನವ ಸಂಪನ್ಮೂಲ ಅಗತ್ಯ. ಕೌಶಲ್ಯ ಅಭಿವೃದ್ಧಿ ಇಲ್ಲದೇ ಇದು ಅಸಾಧ್ಯ…. ಗುಜರಾತ್​ನಲ್ಲಿ ಮೊದಲ ಬಾರಿಗೆ ಸ್ಕಿಲ್ ಯೂನಿವರ್ಸಿಟಿ ತೆರೆಯಲಾಗಿದೆ. ಇದಕ್ಕಾಗಿ ಗುಜರಾತ್ ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಕೌಶಲ್ಯವಂತ ಕೆಲಸಗಾರರು ಆರ್ಥಿಕತೆಗೆ ಪುಷ್ಟಿ ಕೊಡುವುದು ಮಾತ್ರವಲ್ಲ, ಈ ವಲಯದ ಲಾಭ ಹೆಚ್ಚಳಕ್ಕೆ ಕಾರಣರಾಗುತ್ತಾರೆ,’ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಇದನ್ನೂ ಓದಿ: Gautam adani: ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್: ಮುಂದಿನ 3 ವರ್ಷದಲ್ಲಿ ಗುಜರಾತ್​ನಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ: ಗೌತಮ್ ಅದಾನಿ

2047ರ ಕನಸು ನನಸಾಗಿಸಲು ಪ್ರತಿಯೊಬ್ಬರ ಕೊಡುಗೆ ಬೇಕು

ಸ್ವಾತಂತ್ರ್ಯದ ಶತಮಾನೋತ್ಸವವಾದ 2047ರೊಳಗೆ ವಿಕಸಿತ ಭಾರತದ ಹೆಗ್ಗರಿಯನ್ನು ಸಾಕಾರಗೊಳಿಸಬೇಕಾದರೆ ಪ್ರತಿಯೊಬ್ಬರ ಕೊಡುಗೆ ಬೇಕು. ಅದರಲ್ಲೂ ಯುವಕರ ಕೊಡುಗೆ ಅಗತ್ಯ. ಸರ್ಕಾರವು ವಿಕಸಿತ ಭಾರತದ ಕ್ರಿಯಾ ಯೋಜನೆ ಮೂಲಕ ಯುವ ಸಮುದಾಯದ ಪ್ರತಿಯೊಬ್ಬರನ್ನೂ ಬೆಸೆಯಲು ಬಯಸುತ್ತದೆ. ಎಲ್ಲರ ಪ್ರಯತ್ನದಿಂದ ವಿಕಸಿತ ಭಾರತ ಸಾಧ್ಯವಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವರು ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Thu, 11 January 24