AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಥನಾಲ್ ಮಿಶ್ರಿತ ಪೆಟ್ರೋಲ್​ನಿಂದಾಗಿ ದೇಶದ ಖಜಾನೆಗೆ ಹತ್ತು ವರ್ಷದಿಂದ ಲಕ್ಷ ಕೋಟಿ ರೂ ಹಣ ಉಳಿತಾಯ?

Ethanol blended petrol and its benefits to nation: ಕಳೆದ 10 ವರ್ಷದಿಂದ ಇಥನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದ್ದು, ಇದರಿಂದ ದೇಶದ ಫಾರೆಕ್ಸ್​ಗೆ 99,014 ಕೋಟಿ ರೂ ಉಳಿತಾಯವಾಗಿದೆ ಎಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇಥನಾಲ್ ಅನ್ನು ಪೆಟ್ರೋಲ್​ಗೆ ಬೆರಸುತ್ತಿರುವುದರಿಂದ 2014ರಿಮದೀಚೆ 17.3 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ತಪ್ಪಿದಂತಾಗಿದೆ ಎಂದಿದ್ದಾರೆ.

ಇಥನಾಲ್ ಮಿಶ್ರಿತ ಪೆಟ್ರೋಲ್​ನಿಂದಾಗಿ ದೇಶದ ಖಜಾನೆಗೆ ಹತ್ತು ವರ್ಷದಿಂದ ಲಕ್ಷ ಕೋಟಿ ರೂ ಹಣ ಉಳಿತಾಯ?
ಇ100 ಇಂಧನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2024 | 3:38 PM

Share

ನವದೆಹಲಿ, ಸೆಪ್ಟೆಂಬರ್ 2: ಭಾರತದಲ್ಲಿ ಇಥನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಮಾರಾಟ ಮಾಡಲಾಗುತ್ತಿದೆ. ಇದು ಪೆಟ್ರೋಲ್ ಅನ್ನು ಹೆಚ್ಚು ಪರಿಸರಸ್ನೇಹಿಯನ್ನಾಗಿ ಮಾಡುತ್ತದೆ. ಈ ರೀತಿ ಪೆಟ್ರೋಲ್​ಗೆ ಇಥನಾಲ್ ಬೆರೆಸುವುದರಿಂದ ದೇಶದ ಖಜಾನೆಗೂ ಉತ್ತಮ ಎನಿಸುತ್ತದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಾರ ಪೆಟ್ರೋಲ್​ಗೆ ಇಥನಾಲ್ ಮಿಶ್ರಣ ಮಾಡುವ ಯೋಜನೆಯಿಂದಾಗಿ ಭಾರತಕ್ಕೆ ಬಹಳಷ್ಟು ಲಾಭವಾಗಿದೆ. 2014ರಿಂದೀಚೆ ಫಾರೀನ್ ಎಕ್ಸ್​ಚೇಂಜ್​ನಲ್ಲಿ ಭಾರತಕ್ಕೆ ಉಳಿತಾಯವಾದ ಹಣದ ಮೊತ್ತ ಬರೋಬ್ಬರಿ 99,014 ಕೋಟಿ ರೂ. ಹೆಚ್ಚೂಕಡಿಮೆ ಒಂದು ಲಕ್ಷ ಕೋಟಿ ರೂನಷ್ಟು ಹಣವನ್ನು ಉಳಿಸಲು ಸಾಧ್ಯವಾಗಿದೆ.

ರಾಷ್ಟ್ರ ರಾಜಧಾನಿ ನಗರಿಯಲ್ಲಿ ಇಂದು ಸೋಮವಾರ ನಡೆದ ಬಯೋ ಎನರ್ಜಿ ಇಂಟರ್​ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಹರ್ದೀಪ್ ಸಿಂಗ್ ಪುರಿ, ಇಥನಾಲ್​ನಿಂದಾಗಿ 10 ವರ್ಷದಲ್ಲಿ 1.73 ಕೋಟಿ ಮೆಟ್ರಿಕ್ ಟನ್​ಗಳಷ್ಟು ಕಚ್ಛಾ ತೈಲ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಿದಂತಾಗಿದೆ. ಇದು ಫಾರೆಕ್ಸ್ ಉಳಿತಾಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕಸದಿಂದ ರಸ, ನಿತಿನ್ ಗಡ್ಕರಿ ತಂತ್ರ; 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ?

ಭಾರತ ಸರ್ಕಾರ ಇಥನಾಲ್ ಮಿಶ್ರಿತ ಪೆಟ್ರೋಲ್ ಸರಬರಾಜು ಮಾಡುವ ಯೋಜನೆ ಆರಂಭಿಸಿದಾಗ ಪೆಟ್ರೋಲ್​ಗೆ ಶೇ. 15ರಷ್ಟು ಇಥನಾಲ್ ಅನ್ನು ಬೆರೆಸುವ ಗುರಿ ಇಟ್ಟಿತ್ತು. ಈಗ ಆ ಗುರಿ ಮುಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಶೇ. 20ರಷ್ಟು ಇಥನಾಲ್ ಮಿಶ್ರವಾಗಿರುವ ಪೆಟ್ರೋಲ್ ಅನ್ನು ಮಾರಾಟ ಮಾಡುವ ಗುರಿ ಇಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ಹೇಳಿದ್ದಾರೆ.

ಈಗಾಗಲೇ ಶೇ. 20 ಇಥನಾಲ್ ಮಿಶ್ರಿತ ಪೆಟ್ರೋಲ್ (ಇ20 ಪೆಟ್ರೋಲ್) ದೇಶಾದ್ಯಂತ 15,600 ಪೆಟ್ರೋಲ್ ಬಂಕ್​ಗಳಲ್ಲಿ ಲಭ್ಯ ಇದೆ. ಕುತೂಹಲ ಎಂದರೆ ಇ100 ಇಂಧನ ಕೂಡ ಮಾರುಕಟ್ಟೆಯಲ್ಲಿದೆ. ಇ100 ಎಂದರೆ ಶೇ. 93ರಷ್ಟು ಇಥನಾಲ್ ಮತ್ತು ಶೇ 5ರಷ್ಟು ಪೆಟ್ರೋಲ್ ಮತ್ತು ಶೇ. 1.5ರಷ್ಟು ಕೋ-ಸಾಲ್ವೆಂಟ್ ಮಿಶ್ರಣದ ಇಂಧನ ಇದಾಗಿದೆ. ಮುಂದಿನ ದಿನಗಳಲ್ಲಿ ಇ100 ಇಂಧನ ಬಹಳ ಸಾಮಾನ್ಯವಾಗಿ ಲಭ್ಯ ಇರುವ ಪೆಟ್ರೋಲ್ ಆಗಿರುತ್ತದೆ.

ಇದನ್ನೂ ಓದಿ: ಆಗಸ್ಟ್ ತಿಂಗಳಲ್ಲಿ 1,74,962 ಕೋಟಿ ರೂ ಜಿಎಸ್​ಟಿ ಸಂಗ್ರಹ; ಶೇ. 10ರಷ್ಟು ಟ್ಯಾಕ್ಸ್ ಕಲೆಕ್ಷನ್ ಹೆಚ್ಚಳ

ಇಥನಾಲ್​ನಿಂದಾಗಿ ಪೆಟ್ರೋಲ್ ಬಳಕೆ ಸದ್ಯ ತುಸು ಕಡಿಮೆ ಆಗಿದೆ. ಇದರಿಂದ ಕಳೆದ ಒಂದು ದಶಕದಲ್ಲಿ ಕಡಿಮೆ ಆಗಿರುವ ಇಂಗಾಲ ಹೊರಸೂಸುವಿಕೆಯ ಪ್ರಮಾಣ 51.9 ಮಿಲಿಯನ್ ಮೆಟ್ರಿಕ್ ಟನ್​ನಷ್ಟು ಎಂದೆನ್ನಲಾಗಿದೆ. ಈಗ ಇ100 ಇಂಧನ ವ್ಯಾಪಕವಾಗಿ ಬಳಕೆಗೆ ಬಂದರೆ ಪೆಟ್ರೋಲ್, ಡೀಸಲ್ ವಾಹನಗಳಿಂದ ಪರಿಸರ ಮಾಲಿನ್ಯ ಗಣನೀಯವಾಗಿ ತಗ್ಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ