ಆಗಸ್ಟ್ ತಿಂಗಳಲ್ಲಿ 1,74,962 ಕೋಟಿ ರೂ ಜಿಎಸ್​ಟಿ ಸಂಗ್ರಹ; ಶೇ. 10ರಷ್ಟು ಟ್ಯಾಕ್ಸ್ ಕಲೆಕ್ಷನ್ ಹೆಚ್ಚಳ

GST collection in August 2024: ಆಗಸ್ಟ್​ನಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ಆದರೆ, ನಿವ್ವಳ ತೆರಿಗೆ ಸಂಗ್ರಹದಲ್ಲಿ ಶೇ. 6.5ರಷ್ಟು ಕಡಿಮೆ ಆಗಿದೆ. ಜುಲೈಗೆ ಹೋಲಿದರೆ ಜಿಎಸ್​ಟಿ ಕಲೆಕ್ಷನ್ ಕಡಿಮೆ ಆಗಿದೆ. ಸರ್ಕಾರದಿಂದ ಬಿಡುಗಡೆ ಆದ ದತ್ತಾಂಶದ ಪ್ರಕಾರ ಆಗಸ್ಟ್​ನಲ್ಲಿ ಒಟ್ಟಾರೆ ಸಂಗ್ರಹವಾದ ಜಿಎಸ್​ಟಿ ಮೊತ್ತ 1.74 ಲಕ್ಷ ಕೋಟಿ ರೂ.

ಆಗಸ್ಟ್ ತಿಂಗಳಲ್ಲಿ 1,74,962 ಕೋಟಿ ರೂ ಜಿಎಸ್​ಟಿ ಸಂಗ್ರಹ; ಶೇ. 10ರಷ್ಟು ಟ್ಯಾಕ್ಸ್ ಕಲೆಕ್ಷನ್ ಹೆಚ್ಚಳ
ಜಿಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2024 | 10:51 AM

ನವದೆಹಲಿ, ಸೆಪ್ಟೆಂಬರ್ 2: ಆಗಸ್ಟ್ ತಿಂಗಳಲ್ಲಿ ಒಟ್ಟು 1,74,962 ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹ ಆಗಿದೆ ಎಂದು ಸರ್ಕಾರ ನಿನ್ನೆ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ. ಹಿಂದಿನ ವರ್ಷದ ಆಗಸ್ಟ್ ತಿಂಗಳಲ್ಲಿ 1.59 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ಆದರೆ, ಆಗಸ್ಟ್​ಗೆ ಪೂರ್ವ ತಿಂಗಳು, ಅಂದರೆ ಜುಲೈನಲ್ಲಿ ಜಿಎಸ್​ಟಿ ಸಂಗ್ರಹ 1,82,075 ಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ತುಸು ಇಳಿಕೆ ಆಗಿದೆ.

ಒಂದು ತಿಂಗಳಲ್ಲಿ 2.10 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗಿದ್ದು ಈವರೆಗಿನ ದಾಖಲೆಯಾಗಿದೆ. ಇದು ಆಗಿದ್ದು 2024ರ ಏಪ್ರಿಲ್ ತಿಂಗಳಲ್ಲಿ. ಈ ವರ್ಷ ಜನವರಿಯಿಂದ ಆಗಸ್ಟ್​ವರೆಗೂ ಸಂಗ್ರಹಣೆಗೊಂಡ ಜಿಎಸ್​ಟಿ ತೆರಿಗೆ ಮೊತ್ತ 9.13 ಲಕ್ಷ ಕೋಟಿ ರೂ ಆಗಿದೆ. 2023ರ ಇದೇ ಅವಧಿಯಲ್ಲಿ 8.29 ಲಕ್ಷ ಕೋಟಿ ರೂನಷ್ಟು ಟ್ಯಾಕ್ಸ್ ಕಲೆಕ್ಷನ್ಸ್ ಆಗಿತ್ತು.

ಇದನ್ನೂ ಓದಿ: ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ

ಆಗಸ್ಟ್ ತಿಂಗಳಲ್ಲಿ ರೀಫಂಡ್​ಗಳಾಗಿರುವ ಮೊತ್ತ 24,460 ರೂ ಇದೆ. ಹಿಂದಿನ ವರ್ಷದ ಆಗಸ್ಟ್​ಗೆ ಹೋಲಿಸಿದರೆ ರೀಫಂಡ್​ನಲ್ಲಿ ಶೇ. 38ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ತೆರಿಗೆ ಸಂಗ್ರಣೆಯಲ್ಲಿ ರೀಫಂಡ್ ಅನ್ನು ಕಳೆದು ಉಳಿಯುವ ನಿವ್ವಳ ಜಿಎಸ್​ಟಿ ಕಲೆಕ್ಷನ್ಸ್ 1.5 ಲಕ್ಷ ಕೋಟಿ ರೂ ಆಗುತ್ತದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ನೆಟ್ ಕಲೆಕ್ಷನ್​ನಲ್ಲಿ ಶೇ. 6.5ರಷ್ಟು ಕಡಿಮೆ ಆಗಿರುವುದು ಕಂಡು ಬರುತ್ತದೆ.

ಆಗಸ್ಟ್ ತಿಂಗಳಲ್ಲಿ ಒಟ್ಟಾರೆ ಬಂದಿರುವ 1.74 ಲಕ್ಷ ಕೋಟಿ ರೂ ಮೊತ್ತದ ತೆರಿಗೆಯಲ್ಲಿ ಆಂತರಿಕ ವ್ಯವಹಾರಗಳಿಂದ ಸಿಕ್ಕಿದ್ದು 1.25 ಲಕ್ಷ ಕೋಟಿ ರೂ. ಈ ತೆರಿಗೆ ಸಂಗ್ರಹಣೆಯಲ್ಲಿ ಶೇ 9.2ರಷ್ಟು ಹೆಚ್ಚಳವಾಗಿದೆ. ಇನ್ನು, ಆಮದುಗೊಂಡ ಸರಕುಗಳಿಂದ ಬಂದ ತೆರಿಗೆ 49,976 ಕೋಟಿ ರೂ ಆಗಿದೆ. ಇದರಲ್ಲಿ ಶೇ. 12.1ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ ಒಮ್ಮೆ ಹೂಡಿಕೆ ಮಾಡಿ, ಮಾಸಿಕ 20,000 ರೂ ಪಡೆಯಿರಿ

ಪ್ರತೀ ತಿಂಗಳು ರಾಜ್ಯವಾರು ಜಿಎಸ್​ಟಿ ಸಂಗ್ರಹದ ವಿವರ ನೀಡಲಾಗುತ್ತಿತ್ತು. ಈ ಬಾರಿ ಅದು ಬಿಡುಗಡೆ ಆಗಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಆಗುತ್ತದೆ. ನಂತರದ ಸ್ಥಾನ ಕರ್ನಾಟಕದ್ದು. ತಮಿಳುನಾಡು, ಗುಜರಾತ್ ರಾಜ್ಯಗಳಲ್ಲೂ ಅಧಿಕ ತೆರಿಗೆ ಸಂಗ್ರಹಣೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ