ಆಹಾರ ಉದ್ಯಮದಲ್ಲಿ ಸಮಾನ ಅವಕಾಶಕ್ಕೆ ಎಫ್​ಎಸ್​ಎಸ್​ಎಐ ತಂತ್ರ; ಮಹಿಳೆಯರು, ತೃತೀಯ ಲಿಂಗಿಗಳಿಗೆ ವಿಶೇಷ ವ್ಯವಸ್ಥೆ

FSSAI Supports Women and Transgender Food Entrepreneurs: ಆಹಾರ ಉದ್ಯಮದಲ್ಲಿ ಪುರುಷ ಉದ್ಯಮಿಗಳ ಪ್ರಾಬಲ್ಯ ಹೆಚ್ಚಿದೆ. ಈ ಉದ್ಯಮದಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳನ್ನೂ ಪಾಲ್ಗೊಳ್ಳುವಂತೆ ಉತ್ತೇಜಿಸಲು ಎಫ್​ಎಸ್​ಎಸ್​ಎಐ ತನ್ನ ಆಹಾರ ಸುರಕ್ಷಾ ಪೋರ್ಟಲ್​ನಲ್ಲಿ ವಿಶೇಷ ಕೆಟಗರಿ ರೂಪಿಸಿದೆ. ಈ ಸ್ಪೆಷಲ್ ಕೆಟಗರಿಯಲ್ಲಿ ದಾಖಲಾದ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಿ ಲೈಸೆನ್ಸ್ ವಿತರಿಸುವುದು ಸುಲಭವಾಗಲಿದೆ. ಅರ್ಜಿ ಸಲ್ಲಿಕೆ ವೇಳೆಯೇ ಆಧಾರ್ ಅಥವಾ ಪ್ಯಾನ್ ಮೂಲಕ ಸ್ಪೆಷಲ್ ಕೆಟಗರಿ ವ್ಯಕ್ತಿಗಳನ್ನು ಗುರುತಿಸಿ ವಿಭಾಗಿಸಲಾಗುತ್ತದೆ. ಆದ್ಯತೆ ಮೇರೆಗೆ ಈ ಕೆಟಗರಿಯ ಅರ್ಜಿಗಳನ್ನು ಬೇಗನೇ ಪ್ರೋಸಸ್ ಮಾಡಿ ಪರವಾನಿಗೆ ನೀಡುವ ಉದ್ದೇಶ ಇದೆ.

ಆಹಾರ ಉದ್ಯಮದಲ್ಲಿ ಸಮಾನ ಅವಕಾಶಕ್ಕೆ ಎಫ್​ಎಸ್​ಎಸ್​ಎಐ ತಂತ್ರ; ಮಹಿಳೆಯರು, ತೃತೀಯ ಲಿಂಗಿಗಳಿಗೆ ವಿಶೇಷ ವ್ಯವಸ್ಥೆ
ಆಹಾರ ಉದ್ಯಮ

Updated on: Sep 26, 2023 | 6:44 PM

ನವದೆಹಲಿ, ಸೆಪ್ಟೆಂಬರ್ 26: ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣಗಳ ಪ್ರಾಧಿಕಾರವಾದ ಎಫ್​ಎಸ್​ಎಸ್​ಎಐ (FSSAI- Food Safety and Standards Authority of India) ಇದೀಗ ತನ್ನ ಆಹಾರ ಸುರಕ್ಷತೆ ಅನುಸರಣೆ ವ್ಯವಸ್ಥೆಯ ಪೋರ್ಟಲ್​ನಲ್ಲಿ (FoSCoS- food safety compliance system) ಸ್ಪೆಷನ್ ಕೆಟಗರಿ ರಚಿಸಿದೆ. ಆಹಾರ ಉದ್ಯಮದಲ್ಲಿರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳನ್ನು ಈ ವಿಶೇಷ ವರ್ಗಕ್ಕೆ ಪರಿಗಣಿಸಲಾಗಿದೆ. ಪರವಾನಿಗೆ ಪ್ರಕ್ರಿಯೆಯಲ್ಲಿ ಇವರಿಗೆ ಹೆಚ್ಚು ಅನುಕೂಲ ಸಿಗಲಿದೆ. ಅಂದರೆ ಇವರಿಗೆ ಬೇಗ ಪರವಾನಿಗೆ ಸಿಗುವಂತೆ ಈ ಸ್ಪೆಷಲ್ ಕೆಟಗರಿ ಮಾಡಲಾಗಿದೆ.

ಆಹಾರ ಉದ್ಯಮದಲ್ಲಿ ಪುರುಷ ಉದ್ಯಮಿಗಳ ಪ್ರಾಬಲ್ಯ ಹೆಚ್ಚಿದೆ. ಈ ಉದ್ಯಮದಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳನ್ನೂ ಪಾಲ್ಗೊಳ್ಳುವಂತೆ ಉತ್ತೇಜಿಸಲು ಎಫ್​ಎಸ್​ಎಸ್​ಎಐ ಈ ಕ್ರಮ ಕೈಗೊಂಡಿದೆ. ಸ್ಪೆಷಲ್ ಕೆಟಗರಿಯಲ್ಲಿ ದಾಖಲಾದ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಿ ಲೈಸೆನ್ಸ್ ವಿತರಿಸುವುದು ಸುಲಭವಾಗಲಿದೆ. ಅರ್ಜಿ ಸಲ್ಲಿಕೆ ವೇಳೆಯೇ ಆಧಾರ್ ಅಥವಾ ಪ್ಯಾನ್ ಮೂಲಕ ಸ್ಪೆಷಲ್ ಕೆಟಗರಿ ವ್ಯಕ್ತಿಗಳನ್ನು ಗುರುತಿಸಿ ವಿಭಾಗಿಸಲಾಗುತ್ತದೆ. ಆದ್ಯತೆ ಮೇರೆಗೆ ಈ ಕೆಟಗರಿಯ ಅರ್ಜಿಗಳನ್ನು ಬೇಗನೇ ಪ್ರೋಸಸ್ ಮಾಡಿ ಪರವಾನಿಗೆ ನೀಡುವ ಉದ್ದೇಶ ಇದೆ.

ಇದನ್ನೂ ಓದಿ: ವೈಮಾನಿಕ ಕ್ಷೇತ್ರಕ್ಕೆ ಹೋಗುವ ಒಂದು ರೂ ಹಣದಿಂದ ಆರ್ಥಿಕತೆಗೆ 3 ಪಟ್ಟು ಲಾಭವಾ? ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವಿಶ್ಲೇಷಣೆ

ಹೊರಗೆ ಅಡುಗೆ ಮಾಡುವುದನ್ನು ತಪ್ಪಿಸಿ: ಸಿಹಿ ತಯಾರಕರಿಗೆ ಎಫ್​ಎಸ್​ಎಸ್​ಎಐ ಸೂಚನೆ

ಇದೇ ವೇಳೆ ಹಬ್ಬದ ಸೀಸನ್​ನಲ್ಲಿ ಆಹಾರ ಸುರಕ್ಷತೆ ಕಾಯ್ದುಕೊಳ್ಳಲು ಸಾಧ್ಯವಾಗುವಂತೆ ಎಫ್​ಎಸ್​ಎಸ್​ಎಐ ಸಂಸ್ಥೆ ನಿನ್ನೆ ಆಹಾರ ಉದ್ದಿಮೆದಾರರಿಗೆ ಅಡ್ವೈಸರಿ ಹೊರಡಿಸಿದೆ. ಬಹಿರಂಗ ಸ್ಥಳದಲ್ಲಿ ಆಹಾರ ತಯಾರಿಸದಂತೆ ಸಿಹಿ ತಯಾರಕರಿಗೆ ನೀಡಿರುವ ಸೂಚನೆಯು ಅಡ್ವೈಸರಿಯಲ್ಲಿ ಒಳಗೊಂಡಿದೆ. ಬಹಿರಂಗ ಸ್ಥಳದಲ್ಲಿ ಅಡುಗೆ ಮಾಡಿದಾಗ ವಾತಾವರಣದ ಕಲುಷ ವಸ್ತುಗಳು ಆಹಾರಕ್ಕೆ ಬೆರೆಯಬಹುದಾದ್ದರಿಂದ ಈ ಎಚ್ಚರಿಕೆ ನೀಡಲಾಗಿದೆ.

ಇನ್ನು, ಹಾಲು ಮತ್ತು ಹಾಲಿನ ಪದಾರ್ಥಗಳಾದ ಖೊವಾ, ಪನೀರ್, ತುಪ್ಪ ಇತ್ಯಾದಿಯ ಕಲಬೆರೆಕೆ ಸಾಧ್ಯತೆ ಹೆಚ್ಚಿರುವುದನ್ನು ಎಫ್​ಎಸ್​ಎಸ್​ಎಐ ಗುರುತಿಸಿದ್ದು, ಅದನ್ನು ತಡೆಯುವಂತೆ ಎಫ್​ಬಿಒಗಳಿಗೆ (ಫುಡ್ ಬಿಸಿನೆಸ್ ಆಪರೇಟರ್ಸ್) ಸೂಚಿಸಲಾಗಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಕಡಿಮೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ

ಇನ್ನು ಹೋಟೆಲ್​ಗಳಲ್ಲಿ ಆಹಾರ ಕರೆಯಲಾಗುವ ಎಣ್ಣೆಯ ಗುಣಮಟ್ಟವನ್ನು ಪರಿಶೀಲಿಸುವಂತೆಯೂ ನಿನ್ನೆಯ ಸಭೆಯಲ್ಲಿ ಎಫ್​ಬಿಒಗಳಿಗೆ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Tue, 26 September 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us