Gold Price Today: ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ; ಆಭರಣ ಖರೀದಿಗೆ ಮುಂದಾಗಿದ್ದರೆ ದರ ವಿವರ ಮಾಹಿತಿ ಇಲ್ಲಿದೆ

| Updated By: shruti hegde

Updated on: Oct 13, 2021 | 7:28 AM

Gold Rate Today: ನೀವು ಇಂದು ಆಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಬೆಲೆ ಎಷ್ಟಿದೆ? ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ನೀವು ಕೂಡಿಟ್ಟ ಹಣದಲ್ಲಿ, ನೀವು ಆಸೆಪಟ್ಟ ಆಭರಣ ಖರೀದಿಸಬಹುದು ಅಂದನಿಸಿದರೆ ಆ ಕುರಿತಾಗಿ ಯೋಚಿಸಿ.

Gold Price Today: ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ; ಆಭರಣ ಖರೀದಿಗೆ ಮುಂದಾಗಿದ್ದರೆ ದರ ವಿವರ ಮಾಹಿತಿ ಇಲ್ಲಿದೆ
ಸಂಗ್ರಹ ಚಿತ್ರ
Follow us on

Gold and Silver Price Today | ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರತೆ ಕಾಯ್ದುಕೊಂಡಿತ್ತು. ಆ ಬಳಿಕ ಇಂದು (ಅಕ್ಟೋಬರ್​ 13, ಬುಧವಾರ) ಚಿನ್ನದ ದರದಲ್ಲಿ (Gold Price) ಏರಿಕೆ ಕಂಡು ಬಂದಿದೆ. ಅದೇ ರೀತಿ ಬೆಳ್ಳಿ ದರದಲ್ಲಿ (Silver Price) ನಿನ್ನೆ ಇಳಿಕೆ ಕಂಡು ಬಂದಿದ್ದು, ಇಂದು ಕೊಂಚ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗಿರುವಾಗ ನೀವು ಇಂದು ಆಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಬೆಲೆ ಎಷ್ಟಿದೆ? ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ನೀವು ಕೂಡಿಟ್ಟ ಹಣದಲ್ಲಿ, ನೀವು ಆಸೆಪಟ್ಟ ಆಭರಣ ಖರೀದಿಸಬಹುದು ಅಂದನಿಸಿದರೆ ಆ ಕುರಿತಾಗಿ ಯೋಚಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,150 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,41,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 2,500 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಇನ್ನು, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,160 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,81,600 ರೂ. ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,700 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಸಹ ಏರಿಕೆ ಆಗಿದ್ದು, ಕೆಜಿ ಬೆಳ್ಳಿಗೆ 61,800 ರೂಪಾಯಿ ನಿಗದಿ ಆಗಿದೆ. ನಿನ್ನೆಗಿಂತ ಇಂದು ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಮನೆಯಲ್ಲಿ ಪೂಜೆ ಪುನಸ್ಕಾರಗಳು, ಮದುವೆ ಸಮಾರಂಭಗಳು ಎದುರಿಗಿದ್ದಾಗ ಚಿನ್ನಾಭರಣ ಖರೀದಿಸುವ ಬಗ್ಗೆ ಯೋಚಿಸುವುದು ಮಾಮೂಲಿ. ಅದರಲ್ಲಿಯೂ ಅಷ್ಟೊಂದು ಬೆಲೆ ಬಾಳುವ ಚಿನ್ನವನ್ನು ಖರೀದಿಸುವಾಗ ಒಳ್ಳೆಯ ದಿನ ನೋಡಿ ಅಂಗಡಿಗೆ ತೆರಳುತ್ತಾರೆ ಗ್ರಾಹಕರು.  ವಿಶೇಷ ಎಂದರೆ ಹಬ್ಬದ ಆಚರಣೆಗಳ ಸಮಯದಲ್ಲಿ ಚಿನ್ನವನ್ನು ಖರೀದಿಸುವುದು ಹೆಚ್ಚು. ಹಾಗಿರುವಾಗ ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿ ತಿಳಿದ ಬಳಿಕ ಆಭರಣ ಕೊಳ್ಳುವತ್ತ ಯೋಚಿಸಬಹುದು.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,43,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರಕ್ಕೆ 48,320 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನಕ್ಕೆ 4,83,200 ರೂಪಾಯಿ ನಿಗದಿಯಾಗಿದೆ. ಸುಮಾರು 1,100 ರೂಪಾಯಿ ಏರಿಕೆ ಕಂಡು ಬಂದಿದೆ. ಇನ್ನು, ಕೆಜಿ ಬೆಳ್ಳಿ ಬೆಲೆ 65,800 ರೂಪಾಯಿ ಇದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,63,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,400 ರೂಪಾಯಿ ಏರಿಕೆ ಕಂಡು ಬಂದಿದೆ. ಇನ್ನು, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,05,100 ರೂಪಾಯಿ ನಿಗದಿಯಾಗಿದೆ. ಸುಮಾರು 2,500 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿಯೂ ಸಹ ಇಂದು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 61,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಏರಿಳಿತದಲ್ಲಿ 100 ರೂಪಾಯಿಯಷ್ಟು ಏರಿಕೆಯಾಗಿದೆ.

ಇದನ್ನೂ ಓದಿ:

Gold Price Today: ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ, ಬೆಳ್ಳಿ ಬೆಲೆ ಸ್ಥಿರ: ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Gold Price Today: ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರ; ಬೆಳ್ಳಿ ಬೆಲೆಯಲ್ಲಿ ಇಳಿಕೆ

Published On - 7:14 am, Wed, 13 October 21