Gold Price Today: ಚಿನ್ನದ ಬೆಲೆ ಇಂದು ಮತ್ತೆ ಏರಿಕೆ; ಬೆಳ್ಳಿ ದರ 900 ರೂ. ಕುಸಿತ

Silver Price Today: ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 49,150 ರೂ. ಇದ್ದುದು 49,300 ರೂ.ಗೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 900 ರೂ. ಕುಸಿತವಾಗಿದೆ.

Gold Price Today: ಚಿನ್ನದ ಬೆಲೆ ಇಂದು ಮತ್ತೆ ಏರಿಕೆ; ಬೆಳ್ಳಿ ದರ 900 ರೂ. ಕುಸಿತ
ಚಿನ್ನದ ಬೆಲೆ
Edited By:

Updated on: Apr 22, 2022 | 6:01 AM

ಬೆಂಗಳೂರು: ನಿನ್ನೆ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಇಂದು ಚಿನ್ನದ ದರ (Gold Rate) ಬರೋಬ್ಬರಿ 160 ರೂ. ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 900 ರೂ. ಇಳಿಕೆಯಾಗಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಹೆಚ್ಚಳವಾಗಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 49,150 ರೂ. ಇದ್ದುದು 49,300 ರೂ.ಗೆ ಏರಿಕೆಯಾಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 53,620 ರೂ. ಇದ್ದುದು 53,780 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,460 ರೂ. ಮುಂಬೈ- 49,300 ರೂ, ದೆಹಲಿ- 49,300 ರೂ, ಕೊಲ್ಕತ್ತಾ- 49,300 ರೂ, ಬೆಂಗಳೂರು- 49,300 ರೂ, ಹೈದರಾಬಾದ್- 49,300 ರೂ, ಕೇರಳ- 49,300 ರೂ, ಪುಣೆ- 49,360 ರೂ, ಮಂಗಳೂರು- 49,300 ರೂ, ಮೈಸೂರು- 49,300 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,960 ರೂ, ಮುಂಬೈ- 53,780 ರೂ, ದೆಹಲಿ- 53,780 ರೂ, ಕೊಲ್ಕತ್ತಾ- 53,780 ರೂ, ಬೆಂಗಳೂರು- 53,780 ರೂ, ಹೈದರಾಬಾದ್- 53,780 ರೂ, ಕೇರಳ- 53,780 ರೂ, ಪುಣೆ- 53,840 ರೂ, ಮಂಗಳೂರು- 53,780 ರೂ, ಮೈಸೂರು- 53,780 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ (Silver Price) ಭಾರೀ ಇಳಿಕೆಯಾಗಿದೆ.

ಇಂದಿನ ಬೆಳ್ಳಿಯ ದರ:
ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 900 ರೂ. ಕುಸಿತವಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 68,300 ರೂ. ಇದ್ದುದು ಇಂದು 67,400 ರೂ.ಗೆ ಇಳಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 73,000 ರೂ, ಮೈಸೂರು- 73,000 ರೂ., ಮಂಗಳೂರು- 73,000 ರೂ., ಮುಂಬೈ- 67,400 ರೂ, ಚೆನ್ನೈ- 73,000 ರೂ, ದೆಹಲಿ- 67,400 ರೂ, ಹೈದರಾಬಾದ್- 73,000 ರೂ, ಕೊಲ್ಕತ್ತಾ- 67,400 ರೂ. ಆಗಿದೆ.

ಇದನ್ನೂ ಓದಿ: Gold Price Today: ಒಂದೇ ದಿನದಲ್ಲಿ ಬೆಳ್ಳಿ ಬೆಲೆ 1,700 ರೂ. ಕುಸಿತ; ಚಿನ್ನ ಖರೀದಿಸುವವರೂ ತಡ ಮಾಡಬೇಡಿ!

Gold Price Today: ಇಂದು ಚಿನ್ನದ ಬೆಲೆ ಸ್ಥಿರ, ಬೆಳ್ಳಿ ಬೆಲೆ ಕೊಂಚ ಇಳಿಕೆ

TV9 Web

TV9 Kannada

Read More
Loading...
Unable to load recommendations.
Follow Us