Gold Rate Today Bangalore: 13,000 ರೂ ದಾಟಿದ 22 ಕ್ಯಾರಟ್ ಚಿನ್ನದ ಬೆಲೆ

Bullion Market 2026 January 12th: ಚಿನ್ನ, ಬೆಳ್ಳಿ ಬೆಲೆಗಳೆರಡೂ ಸೋಮವಾರ ಹೆಚ್ಚಿವೆ. ಚಿನ್ನದ ಬೆಲೆ 155 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 10 ರೂ ಜಾಸ್ತಿಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,875 ರೂನಿಂದ 13,030 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,215 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 260 ರೂನಿಂದ 270 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 287 ರೂ ಆಗಿದೆ.

Gold Rate Today Bangalore: 13,000 ರೂ ದಾಟಿದ 22 ಕ್ಯಾರಟ್ ಚಿನ್ನದ ಬೆಲೆ
ಚಿನ್ನ

Updated on: Jan 12, 2026 | 11:34 AM

ಬೆಂಗಳೂರು, ಜನವರಿ 12: ಜಾಗತಿಕವಾಗಿ ಅನಿಶ್ಚಿತ ರಾಜಕೀಯ ವಾತಾವರಣ ತೀವ್ರಗೊಂಡಷ್ಟೂ ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇಂದು ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಿವೆ. ಆಭರಣ ಚಿನ್ನದ ಬೆಲೆ (Gold Rate) 13,000 ರೂ ಗಡಿ ದಾಟಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿಯುತ್ತಿದೆ. ಸೋಮವಾರದ ಇದರ ಬೆಲೆ 10-12 ರೂ ಹೆಚ್ಚಿದೆ. ಚೆನ್ನೈ ಮೊದಲಾದ ಕಡೆ ಬೆಲೆ 287 ರೂ ತಲುಪಿದ್ದು, ಈ ವಾರದಲ್ಲೇ ಬೆಲೆ 300 ರೂ ದಾಟಿದರೆ ಆಶ್ಚರ್ಯ ಇಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,700 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,215 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,030 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,661 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,215 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,030 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,030 ರೂ
  • ಚೆನ್ನೈ: 13,120 ರೂ
  • ಮುಂಬೈ: 13,030 ರೂ
  • ದೆಹಲಿ: 13,045 ರೂ
  • ಕೋಲ್ಕತಾ: 13,030 ರೂ
  • ಕೇರಳ: 13,030 ರೂ
  • ಅಹ್ಮದಾಬಾದ್: 13,035 ರೂ
  • ಜೈಪುರ್: 13,045 ರೂ
  • ಲಕ್ನೋ: 13,045 ರೂ
  • ಭುವನೇಶ್ವರ್: 13,030 ರೂ

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 577 ರಿಂಗಿಟ್ (12,795 ರುಪಾಯಿ)
  • ದುಬೈ: 503 ಡಿರಾಮ್ (12,350 ರುಪಾಯಿ)
  • ಅಮೆರಿಕ: 140 ಡಾಲರ್ (12,627 ರುಪಾಯಿ)
  • ಸಿಂಗಾಪುರ: 183.10 ಸಿಂಗಾಪುರ್ ಡಾಲರ್ (12,831 ರುಪಾಯಿ)
  • ಕತಾರ್: 501 ಕತಾರಿ ರಿಯಾಲ್ (12,396 ರೂ)
  • ಸೌದಿ ಅರೇಬಿಯಾ: 511 ಸೌದಿ ರಿಯಾಲ್ (12,290 ರುಪಾಯಿ)
  • ಓಮನ್: 53.35 ಒಮಾನಿ ರಿಯಾಲ್ (12,496 ರುಪಾಯಿ)
  • ಕುವೇತ್: 40.97 ಕುವೇತಿ ದಿನಾರ್ (12,082 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 270 ರೂ
  • ಚೆನ್ನೈ: 287 ರೂ
  • ಮುಂಬೈ: 270 ರೂ
  • ದೆಹಲಿ: 270 ರೂ
  • ಕೋಲ್ಕತಾ: 270 ರೂ
  • ಕೇರಳ: 287 ರೂ
  • ಅಹ್ಮದಾಬಾದ್: 270 ರೂ
  • ಜೈಪುರ್: 270 ರೂ
  • ಲಕ್ನೋ: 270 ರೂ
  • ಭುವನೇಶ್ವರ್: 287 ರೂ
  • ಪುಣೆ: 270

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us