Gold Rate Today Bangalore: ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​​ಗೆ 165 ರೂ ಇಳಿಕೆ; ಇಲ್ಲಿದೆ ದರಪಟ್ಟಿ

Bullion Market 2025 May 12th: ಚಿನ್ನದ ಬೆಲೆ ಇಂದು ಸೋಮವಾರ ಗ್ರಾಮ್​​ಗೆ 165 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 1 ರೂ ತಗ್ಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 9,045 ರೂ ಇದ್ದದ್ದು 8,880 ರೂಗೆ ಇಳಿದೆ. ಅಪರಂಜಿ ಚಿನ್ನದ ಬೆಲೆ 9,688 ರೂಗೆ ಇಳಿದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 99 ರೂ ಇದ್ದದ್ದು 98 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 111 ರೂನಿಂದ 110 ರೂಗೆ ಇಳಿದಿದೆ.

Gold Rate Today Bangalore: ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​​ಗೆ 165 ರೂ ಇಳಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: May 12, 2025 | 10:37 AM

ಬೆಂಗಳೂರು, ಮೇ 12: ಭಾರತದಲ್ಲಿ ಚಿನ್ನದ ಬೆಲೆ (Gold rate today) ಇವತ್ತು ಸೋಮವಾರ ಸಖತ್ ಇಳಿಕೆ ಕಂಡಿದೆ. ಗ್ರಾಮ್​​ಗೆ ಬರೋಬ್ಬರಿ 165 ರೂಗಳಷ್ಟು ಬೆಲೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಬಹುತೇಕ 185 ರೂಗಳಷ್ಟು ಕಡಿಮೆ ಆಗಿದೆ. 10 ಗ್ರಾಮ್ ಆಭರಣ ಚಿನ್ನದ ಬೆಲೆ 1,650 ರೂಗಳ ಇಳಿಕೆ ಆಗಿದೆ. 9,045 ರೂ ಇದ್ದ ಬೆಲೆ 8,880 ರೂಗೆ ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನಿವಾರ ಪೇಟೆಯಲ್ಲಿ ಬೆಲೆ ವ್ಯತ್ಯಯವಾಗಿಲ್ಲ. ಮಲೇಷ್ಯಾ ಸೇರಿ ಕೆಲವೇ ಕೆಲವು ದೇಶಗಳಲ್ಲಿ ಹಳದಿ ಲೋಹದ ಬೆಲೆ ತಗ್ಗಿದೆ. ಇನ್ನು, ಬೆಳ್ಳಿಯೂ ಕೂಡ ಚಿನ್ನದ ರೀತಿ ಇವತ್ತು ಬೆಲೆ ಇಳಿಕೆ ಕಂಡಿದೆ. ಗ್ರಾಮ್​​ಗೆ ಒಂದು ರೂನಷ್ಟು ದರ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 88,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 96,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 88,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,900 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 12ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 88,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 96,880 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,660 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 88,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 96,880 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 88,800 ರೂ
  • ಚೆನ್ನೈ: 88,800 ರೂ
  • ಮುಂಬೈ: 88,800 ರೂ
  • ದೆಹಲಿ: 88,950 ರೂ
  • ಕೋಲ್ಕತಾ: 88,800 ರೂ
  • ಕೇರಳ: 88,800 ರೂ
  • ಅಹ್ಮದಾಬಾದ್: 88,850 ರೂ
  • ಜೈಪುರ್: 88,950 ರೂ
  • ಲಕ್ನೋ: 88,950 ರೂ
  • ಭುವನೇಶ್ವರ್: 88,800 ರೂ

ಇದನ್ನೂ ಓದಿ: ತುರ್ತು ಸಂದರ್ಭದಲ್ಲಿ ದೇಶದ ಎಲ್ಲಾ ತೈಲ ಮತ್ತು ನೈಸರ್ಗಿಕ ಅನಿಲದ ಮೊದಲ ಅಧಿಕಾರ ಸರ್ಕಾರದ್ದು: ಹೊಸ ನಿಯಮ ನಿರೀಕ್ಷೆ

ಇದನ್ನೂ ಓದಿ
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,460 ರಿಂಗಿಟ್ (88,620 ರುಪಾಯಿ)
  • ದುಬೈ: 3,710 ಡಿರಾಮ್ (86,280 ರುಪಾಯಿ)
  • ಅಮೆರಿಕ: 1,005 ಡಾಲರ್ (85,850 ರುಪಾಯಿ)
  • ಸಿಂಗಾಪುರ: 1,353 ಸಿಂಗಾಪುರ್ ಡಾಲರ್ (89,030 ರುಪಾಯಿ)
  • ಕತಾರ್: 3,735 ಕತಾರಿ ರಿಯಾಲ್ (87,530 ರೂ)
  • ಸೌದಿ ಅರೇಬಿಯಾ: 3,790 ಸೌದಿ ರಿಯಾಲ್ (86,300 ರುಪಾಯಿ)
  • ಓಮನ್: 393.50 ಒಮಾನಿ ರಿಯಾಲ್ (87,310 ರುಪಾಯಿ)
  • ಕುವೇತ್: 304.20 ಕುವೇತಿ ದಿನಾರ್ (84,710 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,800 ರೂ
  • ಚೆನ್ನೈ: 11,000 ರೂ
  • ಮುಂಬೈ: 9,800 ರೂ
  • ದೆಹಲಿ: 9,800 ರೂ
  • ಕೋಲ್ಕತಾ: 9,800 ರೂ
  • ಕೇರಳ: 11,000 ರೂ
  • ಅಹ್ಮದಾಬಾದ್: 9,800 ರೂ
  • ಜೈಪುರ್: 9,800 ರೂ
  • ಲಕ್ನೋ: 9,800 ರೂ
  • ಭುವನೇಶ್ವರ್: 11,000 ರೂ
  • ಪುಣೆ: 9,800

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us