Gold Silver Price on 24th April: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ; ಮುಂದೆಯೂ ಇಳಿಕೆ ಆಗುತ್ತದಾ ದರ? ಇಲ್ಲಿದೆ ಇವತ್ತಿನ ಬೆಲೆ ಪಟ್ಟಿ
Bullion Market 2024 April 24th: ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆ ಇಂದು ಬುಧವಾರ ಭರ್ಜರಿಯಾಗಿ ಇಳಿಕೆ ಆಗಿದೆ. ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,160 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 85.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ 66,150 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,590 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು, ಏಪ್ರಿಲ್ 24: ಮೂರು ವಾರಗಳಿಂದ ಭರ್ಜರಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಈ ವಾರ ಇಳಿಕೆಯ ಹಾದಿಯಲ್ಲಿದೆ. ಇಂದು ಬುಧವಾರ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 140 ರೂನಷ್ಟು ಕುಸಿತ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್ಗೆ ಎರಡೂವರೆ ರೂನಷ್ಟು ತಗ್ಗಿದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ 2017-18ರ ನಾಲ್ಕನೇ ಸರಣಿ ಹಾಗೂ 2018-19ರ ಮೂರನೇ ಸರಣಿಯಲ್ಲಿ ಹಣ ತೊಡಗಿಸಿಕೊಂಡವರಿಗೆ ಬಂಪರ್ ರಿಟರ್ನ್ ಸಿಗುತ್ತಿದೆ. ಐದು ವರ್ಷಗಳಿಗೆ ಪ್ರೀಮೆಚ್ಯೂರ್ ಆಗಿ ರಿಡಂಪ್ಷನ್ ಪಡೆದವರಿಗೆ ಒಳ್ಳೆಯ ಲಾಭ ಆಗಲಿದೆ. ಇಸ್ರೇಲ್ ಮತ್ತು ಇರಾನ್ ಯುದ್ಧದಂತಹ ಅತಿರೇಕದ ನಿರ್ಧಾರಕ್ಕೆ ಹೋಗದೇ ಹೋದ್ದರಿಂದ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಕದಡುವ ಸಾಧ್ಯತೆ ಕಡಿಮೆ. ಹೀಗಾಗಿ, ಹೂಡಿಕೆದಾರರಲ್ಲಿ ಚಿನ್ನದ ಮೇಲಿನ ಬೇಡಿಕೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,160 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,590 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 24ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,150 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,160 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 830 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,150 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,160 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 859 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 66,150 ರೂ
- ಚೆನ್ನೈ: 67,000 ರೂ
- ಮುಂಬೈ: 66,150 ರೂ
- ದೆಹಲಿ: 66,300 ರೂ
- ಕೋಲ್ಕತಾ: 66,150 ರೂ
- ಕೇರಳ: 66,150 ರೂ
- ಅಹ್ಮದಾಬಾದ್: 66,200 ರೂ
- ಜೈಪುರ್: 66,300 ರೂ
- ಲಕ್ನೋ: 66,300 ರೂ
- ಭುವನೇಶ್ವರ್: 66,150 ರೂ
ಇದನ್ನೂ ಓದಿ: ಸಾವರೀನ್ ಗೋಲ್ಡ್ ಬಾಂಡ್: ಅವಧಿಪೂರ್ವ ಬೆಲೆ ಘೋಷಿಸಿದ ಆರ್ಬಿಐ; ಹೂಡಿಕೆದಾರರಿಗೆ ಸಿಗುವ ಲಾಭ ಎಷ್ಟು ನೋಡಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,570 ರಿಂಗಿಟ್ (62,242 ರುಪಾಯಿ)
- ದುಬೈ: 2,575 ಡಿರಾಮ್ (58,432 ರುಪಾಯಿ)
- ಅಮೆರಿಕ: 715 ಡಾಲರ್ (59,586 ರುಪಾಯಿ)
- ಸಿಂಗಾಪುರ: 978 ಸಿಂಗಾಪುರ್ ಡಾಲರ್ (59,798 ರುಪಾಯಿ)
- ಕತಾರ್: 2,630 ಕತಾರಿ ರಿಯಾಲ್ (60,109 ರೂ)
- ಸೌದಿ ಅರೇಬಿಯಾ: 2,640 ಸೌದಿ ರಿಯಾಲ್ (58,658 ರುಪಾಯಿ)
- ಓಮನ್: 279 ಒಮಾನಿ ರಿಯಾಲ್ (60,391 ರುಪಾಯಿ)
- ಕುವೇತ್: 220 ಕುವೇತಿ ದಿನಾರ್ (59,493 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,590 ರೂ
- ಚೆನ್ನೈ: 8,650 ರೂ
- ಮುಂಬೈ: 8,300 ರೂ
- ದೆಹಲಿ: 8,300 ರೂ
- ಕೋಲ್ಕತಾ: 8,300 ರೂ
- ಕೇರಳ: 8,650 ರೂ
- ಅಹ್ಮದಾಬಾದ್: 8,300 ರೂ
- ಜೈಪುರ್: 8,300 ರೂ
- ಲಕ್ನೋ: 8,300 ರೂ
- ಭುವನೇಶ್ವರ್: 8,650 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ