ಬೆಂಗಳೂರು, ಮಾರ್ಚ್ 30: ಈ ವಾರಾಂತ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಗಳು (Gold and Silver Rates) ಮಿಶ್ರ ಫಲ ಕಂಡಿವೆ. ಚಿನ್ನದ ಬೆಲೆ ಏರಿಕೆ ಆದರೆ ಬೆಳ್ಳಿ ಬೆಲೆ ಇಳಿಕೆ ಕಂಡಿದೆ. ಇತ್ತೀಚೆಗೆ, ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಸಾಕಷ್ಟು ಏರಿಳಿತಗಳಾಗಿವೆ. ಆದರೆ ಕಳೆದ ಹತ್ತು ದಿನಗಳಲ್ಲಿ ಈ ಎರಡು ಲೋಹಗಳ ಬೆಲೆಗಳಲ್ಲಿ ಅಂತಹ ದೊಡ್ಡ ವ್ಯತ್ಯಾಸವಾಗಿಲ್ಲ. ಚಿನ್ನದ ಬೆಲೆ ಹತ್ತು ದಿನಗಳ ಹಿಂದೆ 8,310 ರೂ ಇತ್ತು. ಈಗ ಅದು 8,360 ರೂ ಆಗಿದೆ. ಗ್ರಾಮ್ಗೆ 50 ರೂನಷ್ಟು ಮಾತ್ರ ಹೆಚ್ಚಳವಾಗಿದೆ. ಶನಿವಾರ ಚಿನ್ನದ ಬೆಲೆ 20 ರೂನಷ್ಟು ಏರಿಕೆ ಆಗಿತ್ತು. ಬೆಳ್ಳಿ ಬೆಲೆ ಹತ್ತು ದಿನದಿಂದ ಹಿಂದಿನ ಪ್ರಮಾಣದಲ್ಲೇ ಇದೆ. ಅಂದು 104 ರೂ ಇತ್ತು. ಇವತ್ತೂ ಕೂಡ ಅದೇ ಬೆಲೆಗೆ ಇಳಿದಿದೆ. ಮೊನ್ನೆ ಶುಕ್ರವಾರ ಇದರ ಬೆಲೆ ಒಮ್ಮೆಲೇ 3 ರೂನಷ್ಟು ಏರಿಕೆ ಆಗಿಹೋಗಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 83,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 91,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 83,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,400 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಏಪ್ರಿಲ್-ಜೂನ್ ಕ್ವಾರ್ಟರ್ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪ್ರಕಟ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ