ಚಿನ್ನ
Image Credit source: Getty Images
ಮುಖ್ಯಾಂಶಗಳು
- ಇಂದು ಸೋಮವಾರ ಚಿನ್ನದ ಬೆಲೆ ಗ್ರಾಮ್ಗೆ 50 ರೂ ಏರಿದೆ.
- ಆಭರಣ ಚಿನ್ನದ ಬೆಲೆ 14,220 ರೂನಿಂದ 14,270 ರೂಗೆ ಏರಿದೆ.
- ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 250 ರೂ ಇದೆ.
ನವದೆಹಲಿ, ಆಗಸ್ಟ್ 17: ಚಿನ್ನದ ಬೆಲೆಯ (Gold Price) ಏರಿಕೆ ಮುಂದುವರಿದಿದೆ. ವಾರಾಂತ್ಯದಲ್ಲಿ ಗ್ರಾಮ್ಗೆ 205 ರೂ ಏರಿದ್ದ ಬಂಗಾರದ ದರ ಇವತ್ತು 50 ರೂ ಹಿಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಲ್ಪ ವ್ಯತ್ಯಯಗಳಾಗಿವೆ. ಸ್ಪಾಟ್ ಗೋಲ್ಡ್ (Spot gold) ಮತ್ತು ಸ್ಪಾಟ್ ಸಿಲ್ವರ್ ದರಗಳೂ ತುಸು ಏರಿವೆ. ಈಗಿನ ಒಂದು ಗ್ರಾಮ್ ಸ್ಪಾಟ್ ಗೋಲ್ಡ್ ಬೆಲೆ 141.18 ಡಾಲರ್ (ಸುಮಾರು 13,498 ರೂ) ಇದೆ. ಇನ್ನು, ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆಯಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,42,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,55,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,42,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 17ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,566
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,270
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,676
- ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,270 ರೂ
- ಚೆನ್ನೈ: 14,270 ರೂ
- ಮುಂಬೈ: 14,270 ರೂ
- ದೆಹಲಿ: 14,285
- ಕೋಲ್ಕತಾ: 14,270 ರೂ
- ಕೇರಳ: 14,270 ರೂ
- ಅಹ್ಮದಾಬಾದ್: 14,275 ರೂ
- ಜೈಪುರ್: 14,285
- ಲಕ್ನೋ: 14,285
- ಭುವನೇಶ್ವರ್: 14,270 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 141.18 ಡಾಲರ್ (13,498 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 2.106 ಡಾಲರ್ (201 ರುಪಾಯಿ)
ಇದನ್ನೂ ಓದಿ: ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 15,566 ರುಪಾಯಿ
- ಮಲೇಷ್ಯಾ: 593 ರಿಂಗಿಟ್ (13,899 ರುಪಾಯಿ)
- ದುಬೈ: 527.50 ಡಿರಾಮ್ (13,728 ರುಪಾಯಿ)
- ಅಮೆರಿಕ: 144 ಡಾಲರ್ (13,764 ರುಪಾಯಿ)
- ಸಿಂಗಾಪುರ: 191.50 ಸಿಂಗಾಪುರ್ ಡಾಲರ್ (14,330 ರುಪಾಯಿ)
- ಕತಾರ್: 527.50 ಕತಾರಿ ರಿಯಾಲ್ (13,832 ರೂ)
- ಸೌದಿ ಅರೇಬಿಯಾ: 543 ಸೌದಿ ರಿಯಾಲ್ (13,825 ರುಪಾಯಿ)
- ಓಮನ್: 56 ಒಮಾನಿ ರಿಯಾಲ್ (13,904 ರುಪಾಯಿ)
- ಕುವೇತ್: 43.73 ಕುವೇತಿ ದಿನಾರ್ (13,604 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 250 ರೂ
- ಚೆನ್ನೈ: 255 ರೂ
- ಮುಂಬೈ: 250 ರೂ
- ದೆಹಲಿ: 250 ರೂ
- ಕೋಲ್ಕತಾ: 250 ರೂ
- ಕೇರಳ: 255 ರೂ
- ಅಹ್ಮದಾಬಾದ್: 250 ರೂ
- ಜೈಪುರ್: 250 ರೂ
- ಲಕ್ನೋ: 250 ರೂ
- ಭುವನೇಶ್ವರ್: 255 ರೂ
- ಪುಣೆ: 250
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ