ಚಿನ್ನ
Image Credit source: PTI
ಮುಖ್ಯಾಂಶಗಳು
- ಚಿನ್ನದ ಬೆಲೆ ಗ್ರಾಮ್ಗೆ 145 ರೂ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಇಲ್ಲ.
- 22 ಕ್ಯಾರಟ್ ಚಿನ್ನದ ಬೆಲೆ 14,650 ರೂನಿಂದ 14,505 ರೂಗೆ ತಗ್ಗಿದೆ.
- ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 255 ರೂ ಇದೆ.
ನವದೆಹಲಿ, ಆಗಸ್ಟ್ 30: ಚಿನ್ನದ ಬೆಲೆಯ ಸತತ ಕುಸಿತ ಮುಂದುವರಿದಿದೆ. ವಾರಾಂತ್ಯದಲ್ಲಿ 145 ರೂಗಳಷ್ಟು ಬೆಲೆ ಇಳಿದಿದೆ. ಈ ವಾರದಲ್ಲಿ ಬಂಗಾರದ ದರ (Gold Price) 500ಕ್ಕೂ ಹೆಚ್ಚು ರೂಗಳಷ್ಟು ಕಡಿಮೆಗೊಂಡಿದೆ. ಹಿಂದಿನ ವಾರದಲ್ಲಿ ಸತತ ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಇಳಿಮುಖವಾಗುತ್ತಿದೆ. ವಿವಿಧ ದೇಶಗಳಲ್ಲೂ ಬೆಲೆ ತಗ್ಗಿದೆ. ಸ್ಪಾಟ್ ಗೋಲ್ಡ್ ಮತ್ತು ಸಿಲ್ವರ್ ಬೆಲೆಗಳೂ ಕಡಿಮೆಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,45,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,58,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,45,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 26,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 30ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,824
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,505
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,868
- ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,505 ರೂ
- ಚೆನ್ನೈ: 14,505 ರೂ
- ಮುಂಬೈ: 14,505 ರೂ
- ದೆಹಲಿ: 14,520
- ಕೋಲ್ಕತಾ: 14,505 ರೂ
- ಕೇರಳ: 14,505 ರೂ
- ಅಹ್ಮದಾಬಾದ್: 14,510 ರೂ
- ಜೈಪುರ್: 14,520
- ಲಕ್ನೋ: 14,520
- ಭುವನೇಶ್ವರ್: 14,505 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 143.19 ಡಾಲರ್ (13,665 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 2.134 ಡಾಲರ್ (203 ರುಪಾಯಿ)
ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 729 ಬಿಲಿಯನ್ ಡಾಲರ್ಗೆ ಏರಿಕೆ; ಸಾರ್ವಕಾಲಿಕ ದಾಖಲೆ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 15,824 ರುಪಾಯಿ
- ಮಲೇಷ್ಯಾ: 593 ರಿಂಗಿಟ್ (14,078 ರುಪಾಯಿ)
- ದುಬೈ: 536.75 ಡಿರಾಮ್ (13,972 ರುಪಾಯಿ)
- ಅಮೆರಿಕ: 147 ಡಾಲರ್ (14,055 ರುಪಾಯಿ)
- ಸಿಂಗಾಪುರ: 199.50 ಸಿಂಗಾಪುರ್ ಡಾಲರ್ (14,961 ರುಪಾಯಿ)
- ಕತಾರ್: 540 ಕತಾರಿ ರಿಯಾಲ್ (14,163 ರೂ)
- ಸೌದಿ ಅರೇಬಿಯಾ: 567 ಸೌದಿ ರಿಯಾಲ್ (14,439 ರುಪಾಯಿ)
- ಓಮನ್: 57.30 ಒಮಾನಿ ರಿಯಾಲ್ (14,230 ರುಪಾಯಿ)
- ಕುವೇತ್: 44.72 ಕುವೇತಿ ದಿನಾರ್ (13,934 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 255 ರೂ
- ಚೆನ್ನೈ: 260 ರೂ
- ಮುಂಬೈ: 255 ರೂ
- ದೆಹಲಿ: 255 ರೂ
- ಕೋಲ್ಕತಾ: 255 ರೂ
- ಕೇರಳ: 260 ರೂ
- ಅಹ್ಮದಾಬಾದ್: 255 ರೂ
- ಜೈಪುರ್: 255 ರೂ
- ಲಕ್ನೋ: 255 ರೂ
- ಭುವನೇಶ್ವರ್: 260 ರೂ
- ಪುಣೆ: 255
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ