
ನವದೆಹಲಿ, ಜುಲೈ 19: ಜಾಗತಿಕವಾಗಿ ಏನಾದರೂ ಬಿಕ್ಕಟ್ಟು (Crisis) ಅಥವಾ ಯುದ್ಧದ ಪರಿಸ್ಥಿತಿ ಎದುರಾದರೆ ಹೂಡಿಕೆದಾರರು ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯ ಕಡೆಗೆ ಮುಖ ಮಾಡುತ್ತಾರೆ. ಇದರಿಂದ ಚಿನ್ನದ ಬೆಲೆ (Gold Price) ಹೆಚ್ಚಾಗುತ್ತದೆ. ಆದರೆ, ಇತ್ತೀಚಿನ ಪಶ್ಚಿಮ ಏಷ್ಯಾ ಸಂಘರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಸುಮಾರು 27% ರಷ್ಟು ಮತ್ತು ಬೆಳ್ಳಿಯ ಬೆಲೆ ಬರೋಬ್ಬರಿ 52% ರಷ್ಟು ಕುಸಿದಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಚಿನ್ನದ ಬೆಲೆ ಕುಸಿಯಲು ಕಾರಣವೇನು?
ಹಣಕಾಸು ತಜ್ಞರ ಪ್ರಕಾರ, ಆರ್ಥಿಕತೆಯಲ್ಲಿ ಎರಡು ರೀತಿಯ ಬಿಕ್ಕಟ್ಟುಗಳು ಇರುತ್ತವೆ, ಹಣಕಾಸು ಮಾರುಕಟ್ಟೆ ಬಿಕ್ಕಟ್ಟು ಮತ್ತು ಭೌತಿಕ ಕೊರತೆಯ ಬಿಕ್ಕಟ್ಟು. ಇವೆರಡು ಸಂದರ್ಭದಲ್ಲಿ ಚಿನ್ನದ ಬೆಲೆ ಏರುವುದುಂಟು.
ದೇಶಗಳು ಅತಿಯಾದ ಸಾಲ ಮಾಡುವುದರಿಂದ, ಬ್ಯಾಂಕುಗಳ ನಷ್ಟದಿಂದ ಅಥವಾ ತಪ್ಪು ಆರ್ಥಿಕ ನೀತಿಗಳಿಂದಾಗಿ ಹಣದುಬ್ಬರ (Inflation) ಹೆಚ್ಚಾದಾಗ ಹಣಕಾಸು ಮಾರುಕಟ್ಟೆಯ ಬಿಕ್ಕಟ್ಟು (Financial Market Crisis) ಸಂಭವಿಸುತ್ತದೆ. ಇಂತಹ ಸಮಯದಲ್ಲಿ ಕರೆನ್ಸಿಯ (ಹಣದ) ಮೌಲ್ಯ ಕುಸಿಯುತ್ತದೆ. ಆಗ ಹೂಡಿಕೆದಾರರು ಚಿನ್ನವನ್ನು ಖರೀದಿಸುತ್ತಾರೆ ಮತ್ತು ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತದೆ.
ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್ಗೆ ಸರ್ಕಾರ ನಿರ್ದೇಶನ
ಭೌತಿಕ ಕೊರತೆಯ ಪರಿಸ್ಥಿತಿಯು ತೈಲ (Oil), ಗ್ಯಾಸ್ ಅಥವಾ ಇತರ ಅಗತ್ಯ ವಸ್ತುಗಳ ಭೌತಿಕ ಕೊರತೆಯಿಂದ ಉಂಟಾಗುವ ಬಿಕ್ಕಟ್ಟು (Physical Shortage Crisis). ಪ್ರಸ್ತುತ ಜಗತ್ತು ಎದುರಿಸುತ್ತಿರುವುದು ಇದೇ ರೀತಿಯ ಬಿಕ್ಕಟ್ಟನ್ನು. ಇತ್ತೀಚೆಗೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $135 ದಾಟಿದಾಗ ಇಂಧನ ವೆಚ್ಚ ಗಗನಕ್ಕೇರಿತು. ಈ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಕುಸಿಯುತ್ತಿದೆ. ಇದಕ್ಕೆ ಕಾರಣ ಇದೆ.
ಪ್ರಸ್ತುತ ಇಂಧನ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಇಳಿಯಲು ಎರಡು ಪ್ರಮುಖ ಸಂಭವನೀಯ ಕಾರಣಗಳಿವೆ:
ಅಗತ್ಯದ ಆದ್ಯತೆ: ಇಂಧನ (ಶಕ್ತಿ/ಎನರ್ಜಿ) ಎಂಬುದು ಪ್ರತಿಯೊಬ್ಬರಿಗೂ ಅತ್ಯಗತ್ಯ ವಸ್ತು, ಆದರೆ ಚಿನ್ನ ಹಾಗಿಲ್ಲ. ಇಂಧನದ ಬೆಲೆ ಹೆಚ್ಚಾದಾಗ ಸರ್ಕಾರಗಳು ಮತ್ತು ಜನರು ತಮ್ಮ ಬಹುಪಾಲು ಹಣವನ್ನು ತೈಲ ಇಂಪೋರ್ಟ್ (ಆಮದು) ಮಾಡಲು ಮತ್ತು ದೈನಂದಿನ ಇಂಧನ ವೆಚ್ಚಗಳಿಗಾಗಿಯೇ ಖರ್ಚು ಮಾಡಬೇಕಾಗುತ್ತದೆ.
ಚಿನ್ನದ ಆಮದು ಇಳಿಕೆ: ಇಂಧನಕ್ಕಾಗಿ ಹಣ ಹೆಚ್ಚು ಖರ್ಚಾಗುವುದರಿಂದ, ಚಿನ್ನದ ಮೇಲೆ ಹೂಡಿಕೆ ಮಾಡಲು ಜನರ ಬಳಿ ಹಣ ಕಡಿಮೆ ಉಳಿಯುತ್ತದೆ. ಜೊತೆಗೆ, ಸರ್ಕಾರಗಳು ಚಿನ್ನದ ಆಮದನ್ನು ಕಡಿಮೆ ಮಾಡಲು ಅದರ ಮೇಲಿನ ತೆರಿಗೆಯನ್ನು ಹೆಚ್ಚಿಸಿವೆ. ಇದರ ಪರಿಣಾಮವಾಗಿ ಚಿನ್ನದ ಬೇಡಿಕೆ (Demand) ಅರ್ಧಕ್ಕರ್ಧ ಕಡಿಮೆಯಾಗಿ ಬೆಲೆ ಕುಸಿದಿರಬಹುದು.
ಚಿನ್ನದ ಮುಂದಿನ ಬೆಲೆ ಏರಿಳಿತಗಳು ಅಮೆರಿಕಾದ ಸೆಂಟ್ರಲ್ ಬ್ಯಾಂಕ್ (US Federal Reserve) ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿವೆ:
ಇದನ್ನೂ ಓದಿ: ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್ಪಿಜಿ ಸಿಲಿಂಡರ್; ಎಚ್ಪಿ ನಂತರ ಈಗ ಭಾರತ್ ಗ್ಯಾಸ್ನಿಂದಲೂ ಸಪ್ಲೈ ಶುರು
ಕರೆನ್ಸಿ ಅಪಮೌಲ್ಯದ ವಿರುದ್ಧ ಚಿನ್ನ ಮತ್ತು ಬೆಳ್ಳಿ ಸದಾ ರಕ್ಷಣೆ ನೀಡುತ್ತವೆ. ಇಂದಿನ ಅಗತ್ಯ ವಸ್ತುಗಳ ಕೊರತೆಯ ಬಿಕ್ಕಟ್ಟು ನಾಳೆ ಮತ್ತೆ ಸಾಲದ ಬಿಕ್ಕಟ್ಟಾಗಿ ಬದಲಾಗಬಹುದು. ಆದ್ದರಿಂದ ದೀರ್ಘಾವಧಿಯ ದೃಷ್ಟಿಯಿಂದ ಪೋರ್ಟ್‌ಫೋಲಿಯೊದಲ್ಲಿ ಸ್ವಲ್ಪ ಭಾಗವನ್ನು ಚಿನ್ನದಲ್ಲಿ ಹೂಡಿಕೆ ಮಾಡುವುದು ಇನ್ನೂ ಬುದ್ಧಿವಂತಿಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ