ಭಾರತದ ಶೇ 7.8 ಜಿಡಿಪಿ ದರ ಸಮರ್ಥಿಸಿದ ವಿಶ್ವಬ್ಯಾಂಕ್ ಅಧಿಕಾರಿ; ಸಾಕ್ಷ್ಯ ಸೂಚಕಗಳನ್ನು ಉಲ್ಲೇಖಿಸಿದ ನೀಲಕಂಠ ಮಿಶ್ರಾ

2026ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಬೆಳೆದಿರುವುದರ ಬಗ್ಗೆ ಹಲವರಿಗೆ ಅನುಮಾನಗಳೆದ್ದಿವೆ. ಬೆಳವಣಿಗೆ ಆಗಿರುವುದು ಶೇ. 7.8 ಅಲ್ಲ, ಶೇ. 2.6 ಮಾತ್ರ ಎಂದು ಕೆಲವರು ವಾದಿಸುತ್ತಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಒಂದು ಪೋಸ್ಟ್ ಹಾಕಿರುವ ವಿಶ್ವಬ್ಯಾಂಕ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ನೀಲಕಂಠ ಮಿಶ್ರಾ ಅವರು ಜಿಡಿಪಿ ದತ್ತಾಂಶವನ್ನು ಸಮರ್ಥಿಸಿದ್ದಾರೆ.

ಭಾರತದ ಶೇ 7.8 ಜಿಡಿಪಿ ದರ ಸಮರ್ಥಿಸಿದ ವಿಶ್ವಬ್ಯಾಂಕ್ ಅಧಿಕಾರಿ; ಸಾಕ್ಷ್ಯ ಸೂಚಕಗಳನ್ನು ಉಲ್ಲೇಖಿಸಿದ ನೀಲಕಂಠ ಮಿಶ್ರಾ
ನೀಲಕಂಠ ಮಿಶ್ರಾ
Image Credit source: PTI

Updated on: Sep 03, 2026 | 5:29 PM

ನವದೆಹಲಿ, ಸೆಪ್ಟೆಂಬರ್ 3: ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ. 7.8ರ ದರದಲ್ಲಿ ಬೆಳೆದಿರುವ ಬಗ್ಗೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿರುವ ಹೊತ್ತಲ್ಲಿ ವಿಶ್ವಬ್ಯಾಂಕ್​ನಿಂದ ಥಂಬ್ಸಪ್ ಸಿಕ್ಕಿದೆ. ಭಾರತದ ಜಿಡಿಪಿ (India GDP) ಶೇ 7.8ರಷ್ಟು ಬೆಳವಣಿಗೆ ಹೊಂದಿರುವುದರಲ್ಲಿ ಅಚ್ಚರಿ ಏನಿಲ್ಲ. ಆ ವೇಗದ ಬೆಳವಣಿಗೆ ನೈಜವಾದುದು ಎಂದು ತೋರಿಸುವ ಸೂಚಕಗಳು ಇವೆ ಎಂದು ವಿಶ್ವಬ್ಯಾಂಕ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ನೀಲಕಂಠ ಮಿಶ್ರಾ (World Bank Executive Director Neelkanth Mishra) ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಪ್ರಕಟಿಸಿದ ಜಿಡಿಪಿ ದತ್ತಾಂಶ ಸುಳ್ಳು. ಜಿಡಿಪಿ ಶೇ. 7.8ರಷ್ಟು ಬೆಳೆದಿಲ್ಲ, ಶೇ. 2.6 ಮಾತ್ರವೇ ಬೆಳವಣಿಗೆ ಆಗಿರುವುದು ಎಂದು ಹೇಳುತ್ತಿರುವ ಕೆಲ ವರ್ಗದ ಜನರ ಅಭಿಪ್ರಾಯಗಳನ್ನು ವಿಶ್ವಬ್ಯಾಂಕ್ ಅಧಿಕಾರಿ ತಳ್ಳಿಹಾಕಿದ್ದಾರೆ. ‘ಈ ವಾದಗಳು ಅಜ್ಞಾನದಿಂದ ಕೂಡಿದೆ, ತೀರಾ ತಪ್ಪಾದ ಗ್ರಹಿಕೆಯಾಗಿದೆ’ ಎಂದು ಮಿಶ್ರಾ ತಿಳಿಸಿದ್ದಾರೆ.

ತಮ್ಮ ಎಕ್ಸ್ ಅಕೌಂಟ್​ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಭಾರತದ ಆರ್ಥಿಕತೆಯು ಅತ್ಯಂತ ದೃಢವಾಗಿದ್ದು, ಇದನ್ನು ಸಾಬೀತುಪಡಿಸಲು ಹಲವು ನೈಜ ಕ್ಷೇತ್ರಗಳ ದತ್ತಾಂಶಗಳೇ (High-Frequency Data) ಸಾಕ್ಷಿಯಾಗಿವೆ’ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿ ಕುರಿತು ವಿಪಕ್ಷಗಳಿಂದ ಅಪಪ್ರಚಾರ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಿಡಿ

ಭಾರತದ ಜಿಡಿಪಿ ಬೆಳವಣಿಗೆ ಬಿಂಬಿಸುವ ಪ್ರಮುಖ ಅಂಕಿಅಂಶಗಳು

ಭಾರತದ ಶೇ. 7.8 ಜಿಡಿಪಿ ಬೆಳವಣಿಗೆಯನ್ನು ಸಮರ್ಥಿಸುವಂತಹ ಕೆಲ ಸೂಚಕಗಳನ್ನು ವಿಶ್ವಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರಾದ ನೀಲಕಂಠ ಮಿಶ್ರಾ ಅವರು ಉಲ್ಲೇಖಿಸಿದ್ದಾರೆ. ಈ ಸೂಚಕಗಳು ಈ ಕೆಳಕಂಡಂತಿವೆ:

  • ವಾಹನ ಮಾರಾಟದಲ್ಲಿ ಭಾರಿ ಏರಿಕೆ: ಆಗಸ್ಟ್ ತಿಂಗಳಲ್ಲಿ ಕಾರು ಮತ್ತು ಎಸ್‌ಯುವಿ (SUV) ವಾಹನಗಳ ರವಾನೆ ಶೇಕಡಾ 35 ರಷ್ಟು ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ಮಾರಾಟ ಶೇಕಡಾ 20 ಕ್ಕಿಂತ ಹೆಚ್ಚು ಮತ್ತು ವಾಣಿಜ್ಯ ವಾಹನಗಳ ಮಾರಾಟ ಶೇಕಡಾ 40 ಕ್ಕಿಂತ ಹೆಚ್ಚು ಪ್ರಗತಿ ಕಂಡಿದೆ.
  • ತೆರಿಗೆ ಸಂಗ್ರಹ ಮತ್ತು ಸಾಲದ ಪ್ರಗತಿ: ಜಿಎಸ್‌ಟಿ ಸೇರಿದಂತೆ ದೇಶೀಯ ತೆರಿಗೆ ಸಂಗ್ರಹಣೆ ಅತ್ಯಂತ ಸಶಕ್ತವಾಗಿ ಬೆಳೆದಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಲ ನೀಡಿಕೆ ಹೆಚ್ಚಾಗಿದ್ದು, ಆರ್ಥಿಕತೆಗೆ ನಗದು ಹರಿವು ಉತ್ತಮವಾಗಿದೆ.
  • ಹೊಸ ಜಿಡಿಪಿ ಸರಣಿ: 2026ರ ಫೆಬ್ರವರಿಯಲ್ಲಿ ಪರಿಚಯಿಸಲಾದ ಹೊಸ ಜಿಡಿಪಿ ಸರಣಿಯು (New GDP Series) ದತ್ತಾಂಶಗಳನ್ನು ಇನ್ನಷ್ಟು ನಿಖರ ಹಾಗೂ ವಿಶ್ವಾಸಾರ್ಹಗೊಳಿಸಿದೆಯೇ ಹೊರತು ಅಂಕಿಅಂಶಗಳನ್ನು ಕೃತಕವಾಗಿ ಹೆಚ್ಚಿಸಿಲ್ಲ.

ಇದನ್ನೂ ಓದಿ: ಡಾಲರ್ ಎದುರು ಪುಟಿದೆದ್ದ ಭಾರತೀಯ ಕರೆನ್ಸಿ; ಒಮ್ಮೆಗೇ 47 ಪೈಸೆ ಜಂಪ್; 3 ತಿಂಗಳ ಗರಿಷ್ಠ ಮೌಲ್ಯ
ನೀಲಕಂಠ ಮಿಶ್ರಾ ಅವರ ಎಕ್ಸ್ ಪೋಸ್ಟ್


ಖಾಸಗಿ ಹೂಡಿಕೆ ಹಾಗೂ ನಿರ್ಮಾಣ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದ ಸರಾಸರಿ ಆರ್ಥಿಕ ಪ್ರಗತಿ ದರ ಶೇಕಡಾ 7 ರಿಂದ 7.5 ರಷ್ಟು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us