LPG Subsidy: ಮತ್ತೆ ಎಲ್​ಪಿಜಿ ಸಬ್ಸಿಡಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ; ನಿಮಿಷಗಳಲ್ಲಿ ಪರಿಶೀಲನೆ ಮಾಡುವುದು ಹೇಗೆ?

TV9 Digital Desk

| Edited By: Srinivas Mata

Updated on: Nov 24, 2021 | 11:10 AM

ಎಲ್​ಪಿಜಿ ಸಿಲಿಂಡರ್​​ಗೆ ಸರ್ಕಾರದಿಂದ ನೀಡುವ ಸಬ್ಸಿಡಿಯನ್ನು ಗ್ರಾಹಕರು ಪರಿಶೀಲನೆ ಮಾಡುವುದು ಹೇಗೆ? ಈ ಲೇಖನದಲ್ಲಿದೆ ಹಂತ ಹಂತವಾದ ವಿವರಣೆ.

LPG Subsidy: ಮತ್ತೆ ಎಲ್​ಪಿಜಿ ಸಬ್ಸಿಡಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ; ನಿಮಿಷಗಳಲ್ಲಿ ಪರಿಶೀಲನೆ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us

ಈಗಂತೂ ಎಲ್ಲ ಎಲ್​ಪಿಜಿ ಗ್ರಾಹಕರು ಮಾರುಕಟ್ಟೆ ದರದಲ್ಲೇ ಖರೀದಿ ಮಾಡಬೇಕಿದೆ. ಆದರೆ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ 14.2 ಕೇಜಿ ತೂಕದ 12 ಸಿಲಿಂಡರ್​ಗಳಿಗೆ ಸಬ್ಸಿಡಿ ದೊರೆಯುತ್ತದೆ. ಆ ಸಬ್ಸಿಡಿಯನ್ನು ನೇರವಾಗಿ ಬಳಕೆದಾರರ ಬ್ಯಾಂಕ್​ ಖಾತೆಗೆ ಜಮೆ ಮಾಡಲಾಗುತ್ತದೆ. ಸದ್ಯಕ್ಕೆ ಸರ್ಕಾರದಿಂದ ಎಲ್​ಪಿಜಿ ಬಳಕೆದಾರರಿಗೆ ಸಬ್ಸಿಡಿ ವಿಸ್ತರಿಸಲಾಗಿದೆ ಮತ್ತು ಸಾಮಾನ್ಯವಾಗಿ, ಎಲ್​ಪಿಜಿ ದರಗಳು ಪ್ರತಿ ತಿಂಗಳು ಪರಿಷ್ಕರಣೆ ಆಗುತ್ತವೆ. ನಿಮ್ಮ ಖಾತೆಗೆ ಎಲ್​ಪಿಜಿ ಸಬ್ಸಿಡಿ ಹಣ ಬಂದಿದೆಯೇ ಎಂದು ಮ್ಯಾನ್ಯುಯಲ್ ಆಗಿ ಪರೀಕ್ಷಿಸುವ ಕೆಲಸವನ್ನು ಬಳಕೆದಾರರು ಹಲವು ಬಾರಿ ಮಾಡಿರುವ ಸಾಧ್ಯತೆ ಇರುತ್ತದೆ. ಸರ್ಕಾರಿ ಸ್ವಾಮ್ಯದ ಐಒಸಿಎಲ್, ಎಚ್​ಪಿ ಮತ್ತು ಬಿಪಿಸಿಎಲ್​ ಕಂಪೆನಿಗಳ ಅನಿಲ ಸಬ್ಸಿಡಿ ಪರಿಶೀಲನೆ ಮಾಡುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುವುದು.

ಆನ್​ಲೈನ್​ನಲ್ಲಿ ಎಲ್​ಪಿಜಿ ಸಬ್ಸಿಡಿ ಸ್ಥಿತಿ ತಿಳಿಯುವುದು ಹೇಗೆ ಎಂಬ ಹಂತ ಹಂತವಾದ ವಿವರಣೆ ಇಲ್ಲಿದೆ:

ಒಂದು ವೇಳೆ ಎಲ್​ಪಿಜಿ ಐಡಿ ಗೊತ್ತಿಲ್ಲ ಅಂತಾದರೆ ಏನು ಮಾಡುವುದು? ಅಂಥ ಸಂದರ್ಭದಲ್ಲಿ 17 ಅಂಕಿಯ ಎಲ್​ಪಿಜಿ ಸಂಖ್ಯೆಯ ಕೆಳಗಿರುವ ಬಟನ್ ಕ್ಲಿಕ್ ಮಾಡಬೇಕು.

ಯಾವ ಕಂಪೆನಿ ಎಂದು ಆರಿಸಿಕೊಳ್ಳುವ ಆಯ್ಕೆ ಎದುರಾಗುತ್ತದೆ.

ಭಾರತ್ ಗ್ಯಾಸ್, ಎಚ್​ಪಿ ಗ್ಯಾಸ್​ ಅಥವಾ ಇಂಡೇನ್ ಈ ಮೂರರಲ್ಲಿ ಒಂದನ್ನು ಆರಿಸಬೇಕು.

ಅಗತ್ಯವಾದ ಆಯ್ಕೆಯು ಮತ್ತೊಂದು ಪುಟಕ್ಕೆ ಕರೆದೊಯ್ಯುತ್ತದೆ.

ಹೊಸ ಪುಟದಲ್ಲಿ, ಯಾವ ಆಯ್ಕೆ ಮಾಡಿಕೊಳ್ಳಲಾಗಿದೆಯೋ ಅದರ ಆಧಾರಲ್ಲಿ ಕೆಲವು ಮಾಹಿತಿಗಳನ್ನು ಒದಗಿಸುವಂತೆ ಕೇಳಲಾಗುತ್ತದೆ.

ಅದು ಫೋನ್ ಸಂಖ್ಯೆ, ವಿತರಕರ ಹೆಸರು, ಬಳಕೆದಾರರ ಸಂಖ್ಯೆ ಹೀಗಾಗಿರುತ್ತದೆ.

ಕ್ಯಾಪ್ಚಾ ಕೋಡ್ ಭರ್ತಿ ಮಾಡಿ, ಸಲ್ಲಿಸಬೇಕು.

ಒಂದು ವೇಳೆ ಈಗಾಗಲೇ ಎಲ್​ಪಿಜಿ ಐಡಿ ಗೊತ್ತಿದ್ದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು (ಎಚ್​ಪಿ ವೆಬ್​ಸೈಟ್​ ಹೇಗೆ ಕೆಲಸ ಮಾಡುತ್ತದೆ ಗಮನಿಸಿ)

http://mylpg.in/ಗೆ ತೆರಳಬೇಕು

ಈಗ ಬಲಭಾಗದಲ್ಲಿ ಒದಗಿಸಿದ ಜಾಗದಲ್ಲಿ ನಿಮ್ಮ ಎಲ್​ಪಿಜಿ ID ನಮೂದಿಸಿ

ಈಗ, ನೀವು ಯಾವ OMC ಎಲ್​ಪಿಜಿ ಅನ್ನು ಬಳಸುತ್ತಿರುವಿರಿ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ, ಬಳಕೆದಾರರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ

17 ಅಂಕಿಗಳ ಎಲ್​ಪಿಜಿ ಐಡಿಯನ್ನು ನಮೂದಿಸಿ.

ನೋಂದಾಯಿತ ಮೊಬೈಲ್ ಸಂಖ್ಯೆಯ ವಿವರಗಳನ್ನು ಭರ್ತಿ ಮಾಡಬೇಕು.

ಕ್ಯಾಪ್ಚಾ ಕೋಡ್‌ನಲ್ಲಿ ಪಂಚ್ ಮಾಡಿ ಮತ್ತು proceed (ಮುಂದುವರೆಯಿರಿ) ಎಂದು ನಮೂದಿಸಿ

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಪಡೆಯುತ್ತೀರಿ

ಮುಂದಿನ ಪುಟದಲ್ಲಿ, ನಿಮ್ಮ ಇಮೇಲ್ ಐಡಿಯನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ರಚಿಸಬೇಕು

ಇಮೇಲ್ ಐಡಿಯಲ್ಲಿ ನೀವು ಸಕ್ರಿಯಗೊಳಿಸುವ ಲಿಂಕ್ ಪಡೆಯುತ್ತೀರಿ

ಲಿಂಕ್ ಅನ್ನು ಕ್ಲಿಕ್ ಮಾಡಿ

ಒಮ್ಮೆ ನೀವು ಹಾಗೆ ಮಾಡಿದರೆ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ

ಈಗ, mylpg.in ಖಾತೆಗೆ ಲಾಗಿನ್ ಮಾಡಿ

ನಿಮ್ಮ ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಅನ್ನು ಎಲ್​ಪಿಜಿ ಖಾತೆಗೆ ಜೋಡಣೆ ಮಾಡಲಾಗಿದೆಯೇ ಎಂದು ಪಾಪ್ ಅಪ್ ವಿಂಡೋದಲ್ಲಿ ನಮೂದಿಸಿ

ಈಗ ಕ್ಲಿಕ್ ಮಾಡಿ, View Cylinder Booking History (ಸಿಲಿಂಡರ್ ಬುಕಿಂಗ್ ಇತಿಹಾಸ)/ Subsidy Transferred (ಸಬ್ಸಿಡಿ ವರ್ಗಾಯಿಸಲಾಗಿದೆ) ವೀಕ್ಷಿಸಿ

ಸರ್ಕಾರದ PAHAL (DBTL) ಯೋಜನೆಯು ಎಲ್​ಪಿಜಿ ಸಿಲಿಂಡರ್‌ಗಳ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಆಧಾರ್ ಜೋಡಣೆ ಮಾಡಿದ ಬ್ಯಾಂಕ್ ಖಾತೆಗಳಿಗೆ ಒದಗಿಸುವುದನ್ನು ಖಚಿತಪಡಿಸುತ್ತದೆ. ಈ ಮಧ್ಯೆ, ಅಡುಗೆಮನೆಗಳಲ್ಲಿ ಪರಿಸರ ಸ್ನೇಹಿ ಇಂಧನದ ವ್ಯಾಪ್ತಿಯನ್ನು ಹೆಚ್ಚಿಸಲು ಸರ್ಕಾರವು ಈಗಾಗಲೇ PMUY ಅಡಿಯಲ್ಲಿ ಬಡ ಮಹಿಳೆಯರಿಗೆ 8 ಕೋಟಿ ಉಚಿತ ಎಲ್​ಪಿಜಿ ಸಂಪರ್ಕಗಳನ್ನು ನೀಡಿದೆ.

ಇದನ್ನೂ ಓದಿ: How To Get LPG Cylinder New Connection: ಒಂದು ಮಿಸ್ಡ್​ ಕಾಲ್​ನಲ್ಲಿ ಪಡೆಯಬಹುದು ಎಲ್​ಪಿಜಿ ಹೊಸ ಸಂಪರ್ಕ

ತಾಜಾ ಸುದ್ದಿ

Related Stories

Click on your DTH Provider to Add TV9 Kannada