Aadhaar Authentication: ಆಧಾರ್​ ಸಾರ್ವತ್ರಿಕ ದೃಢೀಕರಣಕ್ಕೆ ಸ್ಮಾರ್ಟ್​ಫೋನ್ ಬಳಕೆ ಬಗ್ಗೆ ಸುಳಿವು

ಸ್ಮಾರ್ಟ್​ಫೋನ್​ಗಳನ್ನು ಆಧಾರ್​ನ ಸಾರ್ವತ್ರಿಕ ದೃಢೀಕರಣಕ್ಕೆ ಬಳಸುವ ಬಗ್ಗೆ ಮಾತನಾಡಲಾಗಿದೆ. ಏನಿದು ಮತ್ತು ಹೇಗೆ ಅನುಕೂಲಕ ಎಂಬ ಮಾಹಿತಿ ಇಲ್ಲಿದೆ.

Aadhaar Authentication: ಆಧಾರ್​ ಸಾರ್ವತ್ರಿಕ ದೃಢೀಕರಣಕ್ಕೆ ಸ್ಮಾರ್ಟ್​ಫೋನ್ ಬಳಕೆ ಬಗ್ಗೆ ಸುಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 24, 2021 | 3:21 PM

ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿವಾಸಿಯ ಗುರುತನ್ನು ಸ್ಥಾಪಿಸಲು ಸ್ಮಾರ್ಟ್‌ಫೋನ್‌ಗಳನ್ನು “ಸಾರ್ವತ್ರಿಕ ದೃಢೀಕರಣ”ವನ್ನಾಗಿ ಬಳಸಲು ನೋಡುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಸದ್ಯಕ್ಕೆ, ಬೆರಳಚ್ಚು, ಐರಿಸ್ ಮತ್ತು ಒನ್-ಟೈಮ್ ಪಾಸ್‌ವರ್ಡ್ (OTP) ಅನ್ನು ದೃಢೀಕರಣಕ್ಕಾಗಿ ಬಳಸಲಾಗುತ್ತದೆ ಮತ್ತು ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅದರ ಮುಖ್ಯ ಕಾರ್ಯನಿರ್ವಾಹಕ ಸೌರಭ್ ಗರ್ಗ್ ಅವರು ‘ETBFSI ಕನ್ವರ್ಜ್’ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿ, “ಸಾರ್ವತ್ರಿಕ ದೃಢೀಕರಣವಾಗಿ ಸ್ಮಾರ್ಟ್‌ಫೋನ್ ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ಈಗ ಕೆಲಸ ನಡೆಯುತ್ತಿರುವ ಕ್ಷೇತ್ರವಾಗಿದೆ ಮತ್ತು ನಾವು ಆ ದಿಕ್ಕಿನಲ್ಲಿ ವೇಗವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ. ಜನರು ವಾಸ ಇರುವ, ಉಳಿಯುವ ಇತ್ಯಾದಿ ಸ್ಥಳದಿಂದಲೇ ದೃಢೀಕರಣವನ್ನು ಮಾಡಲು ಇದು ಸಹಾಯ ಮಾಡುತ್ತದೆ,” ಎಂದು ಹೇಳಿದ್ದಾರೆ.

ಸದ್ಯಕ್ಕೆ, ಒಟ್ಟಾರೆ 120 ಕೋಟಿ ಮೊಬೈಲ್ ಸಂಪರ್ಕಗಳಲ್ಲಿ 80 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ದೃಢೀಕರಣಕ್ಕಾಗಿ ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಆದರೂ ಸ್ಮಾರ್ಟ್‌ಫೋನ್ ಬಳಸಿಕೊಂಡು ಗುರುತಿನ ಪ್ರಕ್ರಿಯೆಯು ಹೇಗೆ ಪೂರ್ಣಗೊಳ್ಳುತ್ತದೆ ಎಂಬುದರ ಕುರಿತು ಯಾವುದೇ ಹೆಚ್ಚುವರಿ ವಿವರಗಳನ್ನು ಹಂಚಿಕೊಂಡಿಲ್ಲ. ಗೋಪ್ಯತೆ ಮತ್ತು ಡೇಟಾ ಸುರಕ್ಷತೆಯು ಪ್ರಾಧಿಕಾರಕ್ಕೆ ಮುಖ್ಯವಾಗಿದೆ ಎಂದು ಗರ್ಗ್ ಹೇಳಿದ್ದು, ಆಧಾರ್ ಸಂಖ್ಯೆಯು “ಸಾರ್ವತ್ರಿಕವಾಗಿ ಲಭ್ಯವಿರುವ ಮತ್ತು ದೃಢೀಕರಿಸಬಹುದಾದ ಒಂದು ಗುರುತು” ಆಗುವ ಹಾದಿಯಲ್ಲಿದೆ ಎಂದಿದ್ದಾರೆ. ಆಧಾರ್ ಮತ್ತು ಸಂಖ್ಯೆಯನ್ನು ಬಳಸಿಕೊಂಡು ಮಾಡಿದ ನೇರ ಲಾಭ ವರ್ಗಾವಣೆಯು ಸೋರಿಕೆ ಮತ್ತು ನಕಲುಗಳನ್ನು ತಡೆಯುವ ಮೂಲಕ ಸರ್ಕಾರಕ್ಕೆ 2 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.

ಬ್ಯಾಂಕಿಂಗ್ ಮತ್ತು ಟೆಲಿಕಾಂ ಉದ್ಯಮವು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾನದಂಡಗಳನ್ನು ಪೂರೈಸಲು ಆಧಾರ್ ಸಂಖ್ಯೆಯನ್ನು ಶೀಘ್ರವಾಗಿ ಅಳವಡಿಸಿಕೊಂಡಿವೆ. 70 ಕೋಟಿ ಅಥವಾ ಒಟ್ಟಾರೆ ಬ್ಯಾಂಕ್ ಖಾತೆಗಳಲ್ಲಿ ಅರ್ಧದಷ್ಟು ಆಧಾರ್‌ನೊಂದಿಗೆ ಜೋಡಣೆ ಮಾಡಲಾಗಿದೆ ಎಂದಿದ್ದಾರೆ. ಆದರೂ ಪಿಂಚಣಿ ಖಾತೆಗಳ ಸಂಖ್ಯೆ (3 ಕೋಟಿ) ಮತ್ತು ಮ್ಯೂಚುವಲ್ ಫಂಡ್ ಹೊಂದಿರುವವರು (ಸುಮಾರು 10 ಕೋಟಿ) ತುಂಬಾ ಕಡಿಮೆ ಮತ್ತು ಅವು ಶೀಘ್ರವಾಗಿ ವ್ಯಾಪ್ತಿಯನ್ನು ವಿಸ್ತರಿಸಲು ಆಧಾರ್ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಯುಐಡಿಎಐ ಈಗ ಪೂರ್ಣ KYCಗಾಗಿ ಶುಲ್ಕವನ್ನು ಪ್ರತಿ ದೃಢೀಕರಣಕ್ಕೆ ರೂ. 3 ವಿಧಿಸುತ್ತದೆ ಮತ್ತು ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಸರಳವಾದ ‘ಹೌದು ಅಥವಾ ಇಲ್ಲ’ ಎಂಬ ದೃಢೀಕರಣಕ್ಕಾಗಿ 50 ಪೈಸೆ ಕಡಿಮೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಸದ್ಯಕ್ಕೆ, 130 ಕೋಟಿ ಆಧಾರ್ ಕಾರ್ಡ್‌ಗಳಿದ್ದು, ದೇಶದ ಜನಸಂಖ್ಯೆಯ ಶೇ 99.5ರಷ್ಟನ್ನು ಒಳಗೊಂಡಿದೆ. ಉಳಿದ ಶೇಕಡಾ 0.5 ನಿವಾಸಿಗಳನ್ನು ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ: Aadhaar Card Alert: ಆಧಾರ್​ ಕಾರ್ಡ್​ದಾರರೇ ಗಮನಿಸಿ, ಒಂದು ವೇಳೆ ಇಂಥ ತಪ್ಪಾದಲ್ಲಿ 10 ಸಾವಿರ ರೂ. ದಂಡ ಬೀಳುತ್ತೆ!

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು