ಎಚ್1ಬಿ ವೀಸಾ, ಗ್ರೀನ್ ಕಾರ್ಡ್ ಸ್ಪಾನ್ಸರ್​ಶಿಪ್ ಸ್ಥಗಿತಗೊಳಿಸಿದ ಐಬಿಎಂ; ಕೆಲಸ ತೊರೆಯಲು ಅಥವಾ ಬೇರೆ ದೇಶಕ್ಕೆ ವರ್ಗವಾಗಲು ಸೂಚನೆ

ಐಬಿಎಂ ತನ್ನ ಅತಿದೊಡ್ಡ ವಿಭಾಗವಾದ ‘ಐಬಿಎಂ ಕನ್ಸಲ್ಟಿಂಗ್’ನ ಬಹುತೇಕ ಹುದ್ದೆಗಳಿಗೆ ಎಚ್-1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ಪ್ರಾಯೋಜಕತ್ವವನ್ನು ನಿಲ್ಲಿಸಿದೆ. ಬಾಧಿತ ಉದ್ಯೋಗಿಗಳಿಗೆ ಅಮೆರಿಕದಿಂದ ಹೊರಗಿನ ಹುದ್ದೆಗಳಿಗೆ ಸ್ಥಳಾಂತರಗೊಳ್ಳಲು ಆಯ್ಕೆ ನೀಡಲಾಗಿದೆ. ಇಲ್ಲವಾದರೆ, 2026ರ ಡಿಸೆಂಬರ್ 31ರೊಳಗೆ ಸಂಸ್ಥೆ ತೊರೆಯಬೇಕಾಗುತ್ತದೆ. ನಿರ್ಧಾರ ಕೈಗೊಳ್ಳಲು ಮೂರು ವಾರಗಳ ಗಡುವು ನೀಡಲಾಗಿದೆ.

ಎಚ್1ಬಿ ವೀಸಾ, ಗ್ರೀನ್ ಕಾರ್ಡ್ ಸ್ಪಾನ್ಸರ್​ಶಿಪ್ ಸ್ಥಗಿತಗೊಳಿಸಿದ ಐಬಿಎಂ; ಕೆಲಸ ತೊರೆಯಲು ಅಥವಾ ಬೇರೆ ದೇಶಕ್ಕೆ ವರ್ಗವಾಗಲು ಸೂಚನೆ
ಎಚ್-1ಬಿ ವೀಸಾ
Image Credit source: Getty Images

Updated on: Nov 26, 2026 | 4:07 PM

ಕ್ಯಾಲಿಫೋರ್ನಿಯಾ, ನವೆಂಬರ್ 26: ಎಚ್1ಬಿ ವೀಸಾ ಪಡೆದು ಐಬಿಎಂ ಉದ್ಯೋಗಿಗಳಾಗಿ ಅಮೆರಿಕಕ್ಕೆ ಹಾರಿದವರಿಗೆ ಈಗ ಎದೆ ಢವಢವ ಹೊಡೆದುಕೊಳ್ಳುವಂತಾಗಿದೆ. ಐಬಿಎಂ ಕನ್ಸಲ್ಟಿಂಗ್ ಹುದ್ದೆಗಳಿಗೆ ಎಚ್1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ಪ್ರಾಯೋಜಕತ್ವವನ್ನು ನಿಲ್ಲಿಸಲು ಐಬಿಎಂ ನಿರ್ಧರಿಸಿದೆ. ಅಂದರೆ, ಕಂಪನಿಯ ಸ್ಪಾನ್ಸರ್​ಶಿಪ್ ಕಳೆದುಕೊಂಡ ಉದ್ಯೋಗಿಗಳು ಕೆಲಸ ಬಿಟ್ಟು ಹೋಗಬೇಕಾಗುತ್ತದೆ. ಅಥವಾ, ಬೇರೆ ದೇಶಗಳಲ್ಲಿದ್ದುಕೊಂಡು ಐಬಿಎಂ ಉದ್ಯೋಗಿಯಾಗಿ ಮುಂದುವರಿಯುವ ಅವಕಾಶ ಕೊಡಲಾಗಿದೆ.

ಕೌಶಲ್ಯ ಲಭ್ಯತೆ ಮತ್ತು ಗ್ರಾಹಕರ ಅಗತ್ಯಗಳಲ್ಲಿ ಬದಲಾವಣೆಯಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಇದು ಐಬಿಎಂನ ಎಲ್ಲಾ ವಿಭಾಗಗಳಿಗೂ ಅನ್ವಯಿಸುವ ಸಾಮೂಹಿಕ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದೆ. ವಿಶ್ವಾದ್ಯಂತ 1.50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಐಬಿಎಂನಲ್ಲಿ ಕನ್ಸಲ್ಟಿಂಗ್ ಅತಿದೊಡ್ಡ ವಿಭಾಗವಾಗಿದೆ. ಅಮೆರಿಕದಲ್ಲಿರುವ ಹೆಚ್ಚಿನ ಕನ್ಸಲ್ಟಿಂಗ್ ಹುದ್ದೆಗಳಿಗೆ ವೀಸಾ ಮತ್ತು ಗ್ರೀನ್ ಕಾರ್ಡ್ ಪ್ರಾಯೋಜಕತ್ವ ನಿಲ್ಲಲಿದೆ.

Loading...

ಇದನ್ನೂ ಓದಿ: ಅಮೆರಿಕದ ಎಲ್ಲಾ ಮಕ್ಕಳಿಗೆ ಸಿಗಲಿವೆ 2 ಸ್ಪೇಸ್​​ಎಕ್ಸ್ ಷೇರುಗಳು; ಇಲಾನ್ ಮಸ್ಕ್​ರಿಂದ ಸಾವಿರಾರು ಕೋಟಿ ರೂ ಗಿಫ್ಟ್

ಮೂರು ವಾರಗಳ ನಿರ್ಧಾರದ ಗಡುವು ಮತ್ತು ಎರಡು ಆಯ್ಕೆಗಳು

ಪ್ರಾಯೋಜಿತ ವೀಸಾಗಳಲ್ಲಿರುವ ಬಾಧಿತ ಉದ್ಯೋಗಿಗಳಿಗೆ ನಿರ್ಧಾರ ಕೈಗೊಳ್ಳಲು ಸುಮಾರು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ವ್ಯವಸ್ಥಾಪಕರೊಂದಿಗಿನ ವೈಯಕ್ತಿಕ ಸಭೆಗಳಲ್ಲಿ ಈ ಮಾಹಿತಿ ನೀಡಲಾಗಿದೆ. ಉದ್ಯೋಗಿಗಳ ಮುಂದೆ ಎರಡು ಆಯ್ಕೆಗಳಿವೆ: ಅಮೆರಿಕದಿಂದ ಹೊರಗಿನ ಐಬಿಎಂ ಹುದ್ದೆಗೆ ಸ್ಥಳಾಂತರಗೊಳ್ಳುವುದು ಅಥವಾ ಡಿಸೆಂಬರ್ 31, 2026ರೊಳಗೆ ಮೂರು ತಿಂಗಳ ವೇತನ ಪರಿಹಾರದೊಂದಿಗೆ ಸಂಸ್ಥೆಯಿಂದ ಹೊರನಡೆಯುವುದು.

ಭಾರತೀಯ ವೃತ್ತಿಪರರ ಮೇಲೆ ಹೆಚ್ಚು ಪರಿಣಾಮ

ಎಚ್-1ಬಿ ವೀಸಾ ಪಡೆಯುವವರಲ್ಲಿ ಭಾರತೀಯರ ಪಾಲು ದೊಡ್ಡ ಪ್ರಮಾಣದಲ್ಲಿರುವುದರಿಂದ ಮತ್ತು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಾಗಿ ದಶಕಗಳ ಕಾಲ ಕಾಯಬೇಕಾದ ಬ್ಯಾಕ್‌ಲಾಗ್ ಇರುವುದರಿಂದ, ಈ ಬದಲಾವಣೆಯು ಭಾರತೀಯ ವೃತ್ತಿಪರರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.

ಇದನ್ನೂ ಓದಿ: ಎನ್ ಚಂದ್ರಶೇಖರನ್ ಮರುನೇಮಕ ವಿರುದ್ಧ ಬಾಂಬೆ ಹೈಕೋರ್ಟ್ ಕೋರ್ಟ್ ಮೊರೆಬೀಳಲಿರುವ ಟಾಟಾ ಟ್ರಸ್ಟ್ಸ್

ನವೆಂಬರ್ 19ರ ವೇಳೆಗೆ ಐಬಿಎಂ ಕರಿಯರ್ ಪೋರ್ಟಲ್‌ನಲ್ಲಿ (IBM Career Portal) ಅಮೆರಿಕದ ಹೊರಗೆ 1,278 ಕನ್ಸಲ್ಟಿಂಗ್ ಹುದ್ದೆಗಳ ಪಟ್ಟಿಯಾಗಿದೆ. ಅವುಗಳಲ್ಲಿ 1,125 ಹುದ್ದೆಗಳು ಭಾರತದಲ್ಲೇ ಇವೆ; ಭಾರತಕ್ಕೆ ಸ್ಥಳಾಂತರಗೊಂಡರೆ ವೇತನದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆಯ ಬಗ್ಗೆ ಉದ್ಯೋಗಿ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us