2027ರಲ್ಲಿ ಭಾರತದ್ದು 4.52 ಟ್ರಿಲಿಯನ್ ಡಾಲರ್ ಜಿಡಿಪಿ; ಜಪಾನ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ: ಐಎಂಎಫ್ ವರದಿ

ಭಾರತದ ಆರ್ಥಿಕತೆ 2027ರಲ್ಲಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಂಬರ್ 4ನೇ ಸ್ಥಾನ ಪಡೆಯುತ್ತದೆ ಎಂದು ಐಎಂಎಫ್​ನ ವರದಿ ಹೇಳುತ್ತಿದೆ. ನಾಲ್ಕನೇ ಸ್ಥಾನದಲ್ಲಿರುವ ಜಪಾನ್ 2027ರಲ್ಲಿ ಆರನೇ ಸ್ಥಾನಕ್ಕೆ ಕುಸಿಯುತ್ತದೆ ಎನ್ನುತ್ತಿದೆ ಐಎಂಎಫ್. 2027ರಲ್ಲಿ ಭಾರತದ ಜಿಡಿಪಿ ನಾಲ್ಕೂವರೆ ಟ್ರಿಲಿಯನ್ ಡಾಲರ್ ಗಡಿ ದಾಟಿ ಹೋಗುತ್ತದೆ. ಅಮೆರಿಕ, ಚೀನಾ, ಜರ್ಮನಿ ನಂತರದ ಸ್ಥಾನವನ್ನು ಭಾರತ ಪಡೆಯಲಿದೆ ಎಂದು ಈ ವರದಿ ತಿಳಿಸಿದೆ.

2027ರಲ್ಲಿ ಭಾರತದ್ದು 4.52 ಟ್ರಿಲಿಯನ್ ಡಾಲರ್ ಜಿಡಿಪಿ; ಜಪಾನ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ: ಐಎಂಎಫ್ ವರದಿ
ಜಿಡಿಪಿ
Image Credit source: Getty Images

Updated on: Oct 16, 2026 | 8:15 PM

ನವದೆಹಲಿ, ಅಕ್ಟೋಬರ್ 16: ಪ್ರಸಕ್ತ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಹೆಚ್ಚು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಐಎಂಎಫ್​ನ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್​ಲುಕ್​ನ ಲೆಕ್ಕಾಚಾರಗಳ ಪ್ರಕಾರ, 2027ಕ್ಕೆ ಭಾರತದ ಜಿಡಿಪಿ 4.52 ಟ್ರಿಲಿಯನ್ ಡಾಲರ್​ನಷ್ಟಾಗಲಿದೆ. ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರಲಿದೆ.

ಐಎಂಎಫ್ ವರದಿ ಪ್ರಕಾರ, 2027ರಲ್ಲಿ ಅಮೆರಿಕ ಅತಿದೊಡ್ಡ ಆರ್ಥಿಕತೆ ದೇಶವಾಗಿ ಮುಂದುವರಿಯುತ್ತದೆ. ನಂತರದ ಸ್ಥಾನದಲ್ಲಿ ಚೀನಾ ಮತ್ತು ಜರ್ಮನಿ ಇರುತ್ತವೆ. ಜಪಾನ್ ದೇಶ ನಾಲ್ಕನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿಯಬಹುದು. ಬ್ರಿಟನ್ ದೇಶ ಐದನೇ ಸ್ಥಾನದಲ್ಲಿ ಇರಲಿದೆ. ಭಾರತ ಆರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಬಹುದು. ಇದು 2027ಕ್ಕೆ ಐಎಂಎಫ್ ಮಾಡಿರುವ ಭವಿಷ್ಯವಾಣಿ.

ಇದನ್ನೂ ಓದಿ: ಭಾರತದ ಹೊಸ ಜಿಡಿಪಿ ದರ ಲೆಕ್ಕಾಚಾರ ಸರಿಯಾಗಿದೆ: ಐಎಂಎಫ್ ಸ್ಪಷ್ಟನೆ

ಜಪಾನ್ ಯಾಕೆ ಸ್ಥಾನ ಕಳೆದುಕೊಳ್ಳುತ್ತಿದೆ?

ಜಪಾನ್ ಜಿಡಿಪಿ ಕಳೆದ ಹಲವು ವರ್ಷಗಳಿಂದ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಹೀಗಾಗಿ, ಅದರ ಜಿಡಿಪಿ ಬಹುತೇಕ ನಿಂತ ನೀರಾಗಿದೆ. 2026ರಲ್ಲಿ ಭಾರತದ ಜಿಡಿಪಿ ಶೇ 7ರಷ್ಟು ಬೆಳೆಯಬಹುದು, ಜಪಾನ್ ಜಿಡಿಪಿ ಬೆಳವಣಿಗೆ ಕೇವಲ ಶೇ. 0.7 ಇರಬಹುದು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. ಹೀಗಾಗಿ, ಜಪಾನ್ ಅನ್ನು ಹಿಂದಿಕ್ಕುವುದು ಭಾರತಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ.

2026ರಲ್ಲಿ ವಿವಿಧ ದೇಶಗಳು ಹಾಗೂ ಆರ್ಥಿಕ ಶಕ್ತಿ

  1. ಅಮೆರಿಕ: 32.38 ಟ್ರಿಲಿಯನ್ ಡಾಲರ್
  2. ಚೀನಾ: 20.85 ಟ್ರಿಲಿಯನ್ ಡಾಲರ್
  3. ಜರ್ಮನಿ: 5.45 ಟ್ರಿಲಿಯನ್ ಡಾಲರ್
  4. ಜಪಾನ್: 4.38 ಟ್ರಿಲಿಯನ್ ಡಾಲರ್
  5. ಬ್ರಿಟನ್: 4.26 ಟ್ರಿಲಿಯನ್ ಡಾಲರ್
  6. ಭಾರತ: 4.15 ಟ್ರಿಲಿಯನ್ ಡಾಲರ್
  7. ಫ್ರಾನ್ಸ್: 3.59 ಟ್ರಿಲಿಯನ್ ಡಾಲರ್
  8. ಇಟಲಿ: 2.74 ಟ್ರಿಲಿಯನ್ ಡಾಲರ್
  9. ರಷ್ಯಾ: 2.65 ಟ್ರಿಲಿಯನ್ ಡಾಲರ್
  10. ಬ್ರೆಜಿಲ್: 2.63 ಟ್ರಿಲಿಯನ್ ಡಾಲರ್

ಇದನ್ನೂ ಓದಿ: ಕೈಮೀರುತ್ತಿರುವ ಹಣದುಬ್ಬರ; ಆರ್​ಬಿಐ ತುರ್ತಾಗಿ ಬಡ್ಡಿದರ ಏರಿಸಬಹುದು: ಯೂನಿಯನ್ ಬ್ಯಾಂಕ್ ವರದಿ

ಈಗಿರುವ ಆರ್ಥಿಕ ಬೆಳವಣಿಗೆ ದರಗಳು ಮುಂದುವರಿದಿಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಜರ್ಮನಿಯನ್ನೂ ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಬಹುದು. ಜರ್ಮನಿ ಜಿಡಿಪಿ ಈ ವರ್ಷ ಶೇ 1.3 ಮತ್ತು ಮುಂದಿನ ವರ್ಷ ಶೇ 1.1ರಷ್ಟು ವೃದ್ಧಿಸಬಹುದು ಎಂದು ಐಎಂಎಫ್ ಅಂದಾಜಿಸಿದೆ. ಅದೇ ವೇಳೆ ಭಾರತ ಶೇ. 7ರಷ್ಟು ಜಿಡಿಪಿ ವೃದ್ಧಿ ಕಾಣಲಿದೆ. ಇದೇ ಟ್ರೆಂಡ್ ಮುಂದುವರಿದಲ್ಲಿ ಇನ್ನು 4-5 ವರ್ಷದಲ್ಲಿ ಭಾರತವು ಜರ್ಮನಿಯನ್ನು ಹಿಂದಿಕ್ಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us