
ನವದೆಹಲಿ, ಆಗಸ್ಟ್ 10: ಸೌರ ವಿದ್ಯುತ್ ಉಪಕರಣಗಳ (Solar Components) ಉತ್ಪಾದನೆಯಲ್ಲಿ ಭಾರತ ಸಾಧಿಸುತ್ತಿರುವ ಅಭೂತಪೂರ್ವ ಪ್ರಗತಿಯು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪ್ರಮುಖವಾಗಿ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಸೌರಶಕ್ತಿ ಕ್ಷೇತ್ರದ ಬೆಳವಣಿಗೆಯ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಚೀನಾದ ಅಗ್ರಗಣ್ಯ ಸೌರಶಕ್ತಿ ಕಂಪನಿಗಳು ಎದುರಿಸುತ್ತಿರುವ ನಷ್ಟಕ್ಕೆ ಭಾರತದ ಈ ಬೆಳವಣಿಗೆಯೇ ಪ್ರಮುಖ ಕಾರಣ ಎಂಬ ಆತಂಕ ಚೀನೀ ನೆಟಿಜನ್‌ಗಳಲ್ಲಿ ವ್ಯಕ್ತವಾಗಿದೆ. ಅಷ್ಟಕ್ಕೂ ಚೀನಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯವೇನು?
ಚೀನಾದ ಜಾಲತಾಣಗಳಲ್ಲಿ ಬಂದ ಒಂದು ವರದಿಯ ಸ್ಕ್ರೀನ್ಶಾಟ್ ಹಾಗೂ ಅದರ ಇಂಗ್ಲೀಷ್ ಭಾಷಾಂತರದ ಚಿತ್ರವನ್ನು ಭಾರತದ ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಆ ವರದಿಯಲ್ಲಿ ಭಾರತದ ಸೌರಶಕ್ತಿ ಕ್ಷೇತ್ರವು ಕಳೆದ ಏಳೆಂಟು ಕ್ಷೇತ್ರದಲ್ಲಿ ಕಂಡಿರುವ ಅದ್ವಿತೀಯ ಬೆಳವಣಿಗೆಯನ್ನು ಗುರುತಿಸಿದೆ.
ಇದನ್ನೂ ಓದಿ: 676 ಸ್ಟಾರ್ಟ್‌ಅಪ್‌ಗಳು, 548 ಒಪ್ಪಂದಗಳು: ಭಾರತದ ರಕ್ಷಣಾ ತಂತ್ರಜ್ಞಾನದ ಕನಸಿಗೆ ‘iDEX’ ಬಲ
2018 ರಿಂದೀಚೆಗೆ ಭಾರತದ ಸೌರಶಕ್ತಿ ಉಪಕರಣ ಹಾಗೂ ಫೋಟೋವೋಲ್ಟಾಯಿಕ್ (PV) ಉತ್ಪಾದನಾ ಸಾಮರ್ಥ್ಯದಲ್ಲಿ 17 ಪಟ್ಟು ಹೆಚ್ಚಳವಾಗಿದೆ. ಭಾರತವು ಸೌರಶಕ್ತಿ ಕ್ಷೇತ್ರದಲ್ಲಿ ಕೇವಲ ಆಮದುದಾರನಾಗಿ ಉಳಿಯದೆ, ಸ್ವಾವಲಂಬನೆ ಸಾಧಿಸಿ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಹೊರಹೊಮ್ಮಿರುವುದು ಚೀನೀ ಕಂಪನಿಗಳಿಗೆ ದೊಡ್ಡ ಹೊಡೆತ ನೀಡಿದೆ. ಚೀನಾದ ದೊಡ್ಡ ಸೌರಶಕ್ತಿ ತಯಾರಿಕಾ ಕಂಪನಿಗಳಿಗೆ ಬಿಲಿಯನ್ಗಟ್ಟಲೆ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಚೀನೀಯರ ಅಳಲು ತೋರಿಸುತ್ತಿರುವ ಎಕ್ಸ್ ಪೋಸ್ಟ್
Never thought this day would come:
Chinese Netizens complaining about 17 fold increase in Indian Solar Component manufacturing since 2018 and how it is driving top Chinese Solar companies into deep losses
“Chinese Photovoltaic fortress has been breached from within by India”… pic.twitter.com/hmvO0fa3hZ
— Muji Singh Rangi (@mujifren) August 10, 2026
“ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವು ನಮಗೆ ‘ಸ್ಟಾಲಿನ್‌ಗ್ರಾಡ್’ ಯುದ್ಧದಂತಾಗಿದೆ” ಎಂದು ಚೀನೀಯರು ಕಳವಳ ವ್ಯಕ್ತಪಡಿಸಿರುವುದು ಕಂಡು ಬರುತ್ತದೆ. ಸ್ಟಾಲಿನ್‌ಗ್ರಾಡ್ ಎಂಬುದನ್ನು ಎರಡನೇ ವಿಶ್ವ ಮಹಾಯುದ್ಧದ ಒಂದು ಘಟನೆಯ ಉಲ್ಲೇಖಕ್ಕೆ ಬಳಕೆಯಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಸ್ಟಾಲಿನ್‌ಗ್ರಾಡ್ ನಗರದಲ್ಲಿ ಜರ್ಮನ್ ಸೇನೆಯು ಸಿಲುಕಿಕೊಂಡು ಕ್ರಮೇಣ ತನ್ನ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಚೀನಾದ ನೆಟಿಜನ್‌ಗಳು ಸೌರಶಕ್ತಿ ಮಾರುಕಟ್ಟೆಯಲ್ಲಿ ಚೀನಾದ ಸ್ಥಿತಿಯನ್ನು ಜರ್ಮನ್ ಸೇನೆಗೆ ಹಾಗೂ ಭಾರತದ ಕ್ರಾಂತಿಕಾರಿ ಬೆಳವಣಿಗೆಯನ್ನು ರಷ್ಯಾದ ಪ್ರತಿರೋಧಕ್ಕೆ ಹೋಲಿಸಿರುವುದು ಕುತೂಹಲ.
ಇದನ್ನೂ ಓದಿ: ಅಮೆರಿಕಕ್ಕೆ ಓದಲು ಹೋದವರಲ್ಲಿ ಶೇ. 81 ಮಂದಿ ತಾಯ್ನಾಡಿಗೆ ಬರಲು ಪ್ಲಾನ್; ಏನು ಕಾರಣ?
“ಚೀನಾದ ಫೋಟೋವೋಲ್ಟಾಯಿಕ್ ಕೋಟೆಯನ್ನು ಭಾರತವು ಒಳಗಿನಿಂದಲೇ ಭೇದಿಸಿದೆ” ಎಂದು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ. ಚೀನಾದ ಮಾರುಕಟ್ಟೆ ಪ್ರಾಬಲ್ಯವನ್ನು ಭಾರತ ಯಶಸ್ವಿಯಾಗಿ ಮೆಟ್ಟಿನಿಲ್ಲುತ್ತಿದೆ ಎಂಬುದನ್ನು ಇವರುಗಳು ಒಪ್ಪಿಕೊಂಡಿದ್ದಾರೆ. ಇಂಥ ಒಂದು ದಿನ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಕಾಮೆಂಟಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ