ಹೊರ ದೇಶಗಳ ಮಾರುಕಟ್ಟೆ ಮಂದಗೊಂಡರೂ ಭಾರತದ ಆರ್ಥಿಕ ವೃದ್ಧಿಯಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಪುಷ್ಟಿ: ಫಿಚ್ ರೇಟಿಂಗ್ಸ್

Fitch Ratings: ಭಾರತದ ಪ್ರಬಲ ಆರ್ಥಿಕ ವೃದ್ಧಿಯಿಂದ ಕಾರ್ಪೊರೇಟ್ ಸಂಸ್ಥೆಗಳ ಬೇಡಿಕೆ ಹೆಚ್ಚಲಿದೆ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ. ಪ್ರಮುಖ ವಿದೇಶೀ ಮಾರುಕಟ್ಟೆಗಳಲ್ಲಿ ವೇಗ ಮಂದಗೊಂಡಿದ್ದರೂ ಆ ನ್ಯೂನತೆ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚು ಕಾಡಲಾರದು. ದೇಶದ ಆಂತರಿಕ ಬೇಡಿಕೆ ಪ್ರಬಲ ಇರುವುದರಿಂದ ವೇಗದಲ್ಲಿ ಬೆಳೆಯುವ ದೇಶಗಳ ಪೈಕಿ ಭಾರತವೂ ಇರಲಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

ಹೊರ ದೇಶಗಳ ಮಾರುಕಟ್ಟೆ ಮಂದಗೊಂಡರೂ ಭಾರತದ ಆರ್ಥಿಕ ವೃದ್ಧಿಯಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಪುಷ್ಟಿ: ಫಿಚ್ ರೇಟಿಂಗ್ಸ್
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 24, 2023 | 3:46 PM

ನವದೆಹಲಿ, ಡಿಸೆಂಬರ್ 24: ಭಾರತದ ಪ್ರಬಲ ಆರ್ಥಿಕ ವೃದ್ಧಿಯು ಇಲ್ಲಿನ ಕಾರ್ಪೊರೇಟ್ ಸಂಸ್ಥೆಗಳಿಗೆ (Indian Corporates) ವರದಾನ ಆಗಲಿದೆ. ಈ ಸಂಸ್ಥೆಗಳ ಬೇಡಿಕೆ ಹೆಚ್ಚಲಿದೆ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ (Fitch ratings) ಅಭಿಪ್ರಾಯಪಟ್ಟಿದೆ. ‘ಇಂಡಿಯಾ ಕಾರ್ಪೊರೇಟ್ಸ್: ಸೆಕ್ಟರ್ ಟ್ರೆಂಡ್ಸ್ 2024’ ಎಂಬ ತನ್ನ ಹೊಸ ಸಂಶೋಧನಾ ವರದಿಯಲ್ಲಿ ಫಿಚ್ ರೇಟಿಂಗ್ಸ್ ಭಾರತದ ಕಾರ್ಪೊರೇಟ್ ಸಂಸ್ಥೆಗಳ ಬೆಳವಣಿಗೆ ಬಗ್ಗೆ ಅಭಿಪ್ರಾಯಗಳನ್ನು ದಾಖಲಿಸಿದೆ.

2023ರಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಉತ್ತಮ ಬೆಳವಣಿಗೆ ಸಾಧಿಸಿದ್ದವು. ಅದು ಮುಂದಿನ ವರ್ಷವೂ ಮುಂದುವರಿಯಲಿದೆ. ಪ್ರಮುಖ ವಿದೇಶೀ ಮಾರುಕಟ್ಟೆಗಳಲ್ಲಿ ಪ್ರಗತಿಯ ವೇಗ ಮಂದಗೊಂಡಿದ್ದರೂ ಆ ನ್ಯೂನತೆಯನ್ನು ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಜೀರ್ಣಿಸಿಕೊಳ್ಳಬಹುದು ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

ಇದನ್ನೂ ಓದಿ: Infosys: ಸಿಎಫ್​ಒ ರಾಜೀನಾಮೆ ಬೆನ್ನಲ್ಲೇ ಜಾಗತಿಕ ಎಐ ಕಂಪನಿಯೊಂದರೊಂದಿಗೆ ಇನ್ಫೋಸಿಸ್​ನ ಬಿಲಿಯನ್ ಡಾಲರ್ ಒಪ್ಪಂದ ರದ್ದು

ಒಳ ಹೂರಣ ವೆಚ್ಚದಲ್ಲಿ (input cost) ಇಳಿಕೆ ಹಾಗೂ ಬೇಡಿಕೆಯಲ್ಲಿ ಹೆಚ್ಚಳ ಆಗುತ್ತಿರುವುದರಿಂದ ಮುಂದಿನ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಲಾಭದ ಅಂತರ ಅಥವಾ ಮಾರ್ಜಿನ್ ಇನ್ನಷ್ಟು ಹೆಚ್ಚಾಗಲಿದೆ ಎಂದು ಫಿಚ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ಆಂತರಿಕವಾಗಿ ಇರುವ ಬೇಡಿಕೆಯು ಪ್ರಬಲಗೊಳ್ಳುವುದರಿಂದ ಅತಿ ವೇಗದಲ್ಲಿ ಬೆಳೆಯುವ ದೇಶಗಳ ಪೈಕಿ ಭಾರತವೂ ಇರಲಿದೆ. 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಹೆಚ್ಚಾಗಲಿದೆ. ಜಾಗತಿಕ ಹಿನ್ನಡೆಯ ನಡುವೆಯೂ ಭಾರತ ಈ ಬೆಳವಣಿಗೆ ಸಾಧಿಸುತ್ತಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: Year Ender: 2023ರಲ್ಲಿ ಬೆರಗು ಮೂಡಿಸಿದ ಸ್ಮಾಲ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು; ಮೂರು ಸ್ತರದ ಫಂಡ್​ಗಳು ತಂದಿವೆ ಅಚ್ಚರಿಯ ರಿಟರ್ನ್ಸ್

ಸಿಮೆಂಟ್, ಎಲೆಕ್ಟ್ರಿಸಿಟಿ, ಪೆಟ್ರೋಲಿಯಂ ಉತ್ಪನ್ನ ಇತ್ಯಾದಿ ವಲಯಗಳು ಬೇಡಿಕೆ ಹೆಚ್ಚಿಸಿಕೊಳ್ಳಲಿವೆ. ಉತ್ತಮಗೊಳ್ಳುತ್ತಿರುವ ಇನ್​ಫ್ರಾಸ್ಟ್ರಕ್ಚರ್​ನಿಂದಾಗಿ ಉಕ್ಕಿಗೆ ಬೇಡಿಕೆ ಹೆಚ್ಚುತ್ತದೆ. ಹೆಚ್ಚುತ್ತಿರುವ ವಾಹನಗಳ ಮಾರಾಟ ಪ್ರಮಾಣವು ವಾಹನ ತಯಾರಕ ಸಂಸ್ಥೆಗಳ ಆದಾಯಕ್ಕೆ ಪುಷ್ಟಿ ಕೊಡಲಿದೆ. 2023ರಲ್ಲಿ ಪ್ರವಾಸೋದ್ಯಮವೂ ಗರಿಗೆದರಿದೆ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಇದೇ ವೇಳೆ ಯೂರೋಪ್ ಮತ್ತು ಅಮೆರಿಕದಲ್ಲಿ ಆರ್ಥಿಕತೆ ತುಸು ಮಂದಗೊಂಡಿರುವುದರಿಂದ ಐಟಿ ಸರ್ವಿಸ್​ನಲ್ಲಿ ತೀಕ್ಷ್ಣ ಪ್ರಗತಿ ನಿರೀಕ್ಷಿಸಲು ಆಗುವುದಿಲ್ಲ ಎಂದೂ ಜಾಗತಿಕ ಪ್ರಮುಖ ರೇಟಿಂಗ್ಸ್ ಸಂಸ್ಥೆಯಾದ ಅದು ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Sun, 24 December 23

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು