Bank Holiday: ಡಿಸೆಂಬರ್ 31ರವರೆಗೆ ಕ್ರಿಸ್ಮಸ್ ರಜೆಯ ಸೀಸನ್; ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವತ್ತು ಬ್ಯಾಂಕ್ ರಜೆ; ಇಲ್ಲಿದೆ ಡೀಟೇಲ್ಸ್
Christmas Holidays: ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಇದೆ. ದೇಶದ ಎಲ್ಲೆಡೆ ಬ್ಯಾಂಕುಗಳು ಬಂದ್ ಆಗುತ್ತವೆ. ಕೆಲ ರಾಜ್ಯಗಳಲ್ಲಿ ಡಿಸೆಂಬರ್ 27ರವರೆಗೂ ಕ್ರಿಸ್ಮಸ್ ಆಚರಣೆ ಇದೆ. ಅಲ್ಲಿ ರಜೆ ಇರಬಹುದು. ಬ್ಯಾಂಕುಗಳು ಬಂದ್ ಆದರೂ ಡಿಜಿಟಲ್ ಬ್ಯಾಂಕಿಂಗ್, ಯುಪಿಐ, ನೆಟ್ಬ್ಯಾಂಕಿಂಗ್, ಎಟಿಎಂ ಇತ್ಯಾದಿ ಸೇವೆಗಳು ಇದ್ದೇ ಇರುತ್ತವೆ.
ನವದೆಹಲಿ, ಡಿಸೆಂಬರ್ 24: ಸೆಪ್ಟೆಂಬರ್ನಲ್ಲಿ ಶುರುವಾದ ಹಬ್ಬದ ಮತ್ತು ರಜೆಗಳ ಸೀಸನ್ ಡಿಸೆಂಬರ್ 31ರವರೆಗೂ ಇದೆ. ನಾಳೆ, ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ರಜೆ (Christmas holiday) ಇದೆ. ಬಹಳ ಕಡೆ ಕ್ರಿಸ್ಮಸ್ಗೆ ಸರಣಿ ರಜೆಗಳೇ ಇದೆ. ಬ್ಯಾಂಕುಗಳಿಗೂ ಕೂಡ ರಜೆ ಇದೆ. ಡಿಸೆಂಬರ್ 25ರಿಂದ 31ರವರೆಗೆ ವಿವಿಧ ಕಡೆ ವಿವಿಧ ದಿನಗಳಲ್ಲಿ ಬ್ಯಾಂಕ್ ರಜೆ ಇರುವುದನ್ನು ನೀವು ಗಮನಿಸಬೇಕು.
ಡಿಸೆಂಬರ್ 25, ಸೋಮವಾರ ಎಲ್ಲೆಲ್ಲೆ ರಜೆ?
ಡಿಸೆಂಬರ್ 25 ಕ್ರಿಸ್ಮಸ್ ಹಬ್ಬ. ಅಂದು ಘೋಷಿತ ರಾಷ್ಟ್ರೀಯ ರಜಾ ದಿನವಾಗಿದೆ. ದೇಶದ ಎಲ್ಲೆಡೆಯೂ ಸಾರ್ವತ್ರಿಕ ರಜೆಯಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಾ ಕಡೆಯೂ ಬ್ಯಾಂಕ್ ಬಂದ್ ಆಗಿರುತ್ತದೆ.
ಕ್ರಿಸ್ಮಸ್ ಹಬ್ಬ ಕೆಲವೆಡೆ ಹೆಚ್ಚಿನ ಅವಧಿ ಆಚರಿಸಲಾಗುತ್ತದಾದ್ದರಿಂದ ಡಿಸೆಂಬರ್ 25ರ ನಂತರವೂ ಕೆಲ ಪ್ರದೇಶಗಳ ಬ್ಯಾಂಕುಗಳಲ್ಲಿ ರಜೆ ಇರಬಹುದು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಜೆಗಳೆಲ್ಲೆಲ್ಲಿ?
- ಡಿಸೆಂಬರ್ 25: ಕ್ರಿಸ್ಮಸ್ ಹಬ್ಬಕ್ಕೆ ಸಾರ್ವತ್ರಿಕ ರಜೆ.
- ಡಿಸೆಂಬರ್ 26: ಕ್ರಿಸ್ಮಸ್ ಪ್ರಯುಕ್ತ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 27: ನಾಗಾಲ್ಯಾಂಡ್ನಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 30: ಯು ಕಿಯಾಂಗ್ ನಂಗ್ಬಾಹ್ ಪ್ರಯುಕ್ತ ಮೇಘಾಲಯದಲ್ಲಿ ರಜೆ ಇದೆ.
- ಡಿಸೆಂಬರ್ 31: ಭಾನುವಾರದ ರಜೆ
ಇಲ್ಲಿ ಕ್ರೈಸ್ತ ಬಹುಸಂಖ್ಯಾತ ನಾಗಾಲ್ಯಾಂಡ್ ರಾಜ್ಯದಲ್ಲಿ ಡಿಸೆಂಬರ್ 25ರಿಂದ 27ರವರೆಗೆ ಸತತ 3 ದಿನ ಕ್ರಿಸ್ಮಸ್ ಪ್ರಯುಕ್ತ ರಜೆ ಇದೆ.
ಕರ್ನಾಟಕದಲ್ಲಿ ಡಿಸೆಂಬರ್ 25ಕ್ಕೆ ಬ್ಯಾಂಕ್ ರಜೆ ಇದೆ. ಅದು ಬಿಟ್ಟರೆ ಡಿಸೆಂಬರ್ 31ಕ್ಕೆ ಭಾನುವಾರದ ರಜೆ ಮಾತ್ರವೇ ಇರುವುದು.
ಇದನ್ನೂ ಓದಿ: RBI: ನಿರ್ದೇಶಕರಿಗೆ ಸಾಲ ಕೊಟ್ಟು ನಿಯಮ ಉಲ್ಲಂಘನೆ; ಟಿಡಿಸಿಸಿ ಬ್ಯಾಂಕ್ಗೆ ದಂಡ ವಿಧಿಸಿದ ಆರ್ಬಿಐ
ಬ್ಯಾಂಕುಗಳು ಬಾಗಿಲು ಹಾಕಿದರೂ ಡಿಜಿಟಲ್ ಬ್ಯಾಂಕಿಂಗ್ ಸೇವೆ ಚಾಲನೆಯಲ್ಲಿ ಇದ್ದೇ ಇರುತ್ತದೆ. ಎಟಿಎಂಗಳು ತೆರೆದೇ ಇರುತ್ತವೆ. ಯುಪಿಐ ಮೂಲಕ ವಹಿವಾಟು ಮಾಡಬಹುದು. ಕ್ರೆಡಿಟ್ ಕಾರ್ಡ್ ಸೇವೆ, ನೆಟ್ಬ್ಯಾಂಕಿಂಗ್ ಇವೆ ಸೇವೆಗಳು ಯಥಾಪ್ರಕಾರ ಇರುತ್ತವೆ. ಬಹುತೇಕ ಬ್ಯಾಂಕಿಂಗ್ ಸೇವೆಗಳಿಗೆ ಬ್ಯಾಂಕ್ ಬಂದ್ನಿಂದ ವ್ಯತ್ಯಯವಾಗುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ