2024, ಭಾರತದ ಆರ್ಥಿಕತೆಗೆ ಮಿಶ್ರ ಫಲ ಸಿಕ್ಕಿದ ವರ್ಷವಾಗಿದೆ. ಜಾಗತಿಕ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳ ಮಧ್ಯೆಯೂ ಭಾರತದ ಆರ್ಥಿಕ ಬೆಳವಣಿಗೆ ತಕ್ಕಮಟ್ಟಿಗಿನ ವೇಗದಲ್ಲಿ ಸಾಗಿದೆ. ಇದು ಸಕಾರಾತ್ಮಕ ಅಂಶವಾದರೆ, ಕೆಲ ಆಂತರಿಕ ಸಮಸ್ಯೆಗಳು ಆರ್ಥಿಕ ವೇಗವನ್ನು ಮಂದಗೊಳಿಸಿರುವುದೂ ಉಂಟು. ಈ ವರ್ಷ ಭಾರತದ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಹೇಗಿತ್ತು ಎಂಬ ಚಿತ್ರಣ ಇಲ್ಲಿದೆ….
2024ರ ಕ್ಯಾಲಂಡರ್ ವರ್ಷದ ಮೊದಲೆರಡು ಕ್ವಾರ್ಟರ್ನಲ್ಲಿ, ಅಂದರೆ, ಜನವರಿಯಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳವಣಿಗೆ ಹೊಂದಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 8.2ರ ದರದಲ್ಲಿ ಬೆಳೆದಿದೆ. ಸರ್ಕಾರದಿಂದ ಬಂಡವಾಳ ವೆಚ್ಚ, ಆಂತರಿಕ ಬೇಡಿಕೆಯು ಈ ಬೆಳವಣಿಗೆಗೆ ಪುಷ್ಟಿ ನೀಡಿದ ಸಂಗತಿಗಳಾಗಿವೆ.
ಇದನ್ನೂ ಓದಿ: ವಿಳಂಬದ ಐಟಿ ರಿಟರ್ನ್ಸ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಮಧ್ಯಪ್ರವೇಶ; ಡಿ. 31ರ ಡೆಡ್ಲೈನ್ ವಿಸ್ತರಣೆಗೆ ಆದೇಶ
ಈ ವರ್ಷ ಭಾರತದ ಫಾರೆಕ್ಸ್ ರಿಸರ್ವ್ಸ್ ಗರಿಷ್ಠ ಮಟ್ಟಕ್ಕೆ ಏರಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶೀ ವಿನಿಮಯ ಮೀಸಲು ನಿಧಿ 700 ಬಿಲಿಯನ್ ಡಾಲರ್ ಗಡಿ ದಾಟಿತ್ತು. ಚೀನಾ, ಜಪಾನ್ ಮತ್ತು ಸ್ವಿಟ್ಜರ್ಲ್ಯಾಂಡ್ ಬಳಿಕ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಭಾರತದ್ದಾಗಿದೆ.
ಭಾರತದಲ್ಲಿ ಈ ವರ್ಷ ಜಿಎಸ್ಟಿ ಸಂಗ್ರಹ ಸಖತ್ತಾಗಿ ಆಗುತ್ತಿದೆ. ತಿಂಗಳಿಗೆ ಸರಾಸರಿಯಾಗಿ 1.7 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ಮೊತ್ತವು ಸರ್ಕಾರದ ಖಜಾನೆಗೆ ತುಂಬುತ್ತಿದೆ. ಇದು ಆರ್ಥಿಕ ಚಟುವಟಿಕೆ ಉತ್ತಮ ರೀತಿಯಲ್ಲಿ ಆಗುತ್ತಿರುವುದರ ದ್ಯೋತಕವಾಗಿದೆ. ಸರ್ಕಾರಕ್ಕೆ ಹೆಚ್ಚು ಬಂಡವಾಳ ವೆಚ್ಚ ಮಾಡಲೂ ಇದು ಸಹಾಯಕವಾಗಿದೆ.
ಇದನ್ನೂ ಓದಿ: ಸಾಫ್ಟ್ಪವರ್ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್
ಹಾಗೆಯೇ, ವಿದೇಶೀ ನೇರ ಹೂಡಿಕೆಗಳು 2024ರಲ್ಲಿ 1 ಟ್ರಿಲಿಯನ್ ಡಾಲರ್ಗೂ ಅಧಿಕ ಮಟ್ಟಕ್ಕೆ ಹೋಗಿದೆ. ಮ್ಯಾನುಫ್ಯಾಕ್ಚರಿಂಗ್, ಟೆಕ್ನಾಲಜಿ ಮತ್ತು ನವೀಕರಣ ಇಂಧನ ವಲಯಗಳಲ್ಲಿ ಹೆಚ್ಚಿನ ಎಫ್ಡಿಐ ಬಂದಿವೆ. ಪಿಎಲ್ಐ ಸ್ಕೀಮ್ಗಳು ಸಾಕಷ್ಟು ಎಫ್ಡಿಐ ಅನ್ನು ಆಕರ್ಷಿಸುತ್ತಿವೆ. ಹಣದುಬ್ಬರ ಕೆಲ ತಿಂಗಳು ಕೈಮೀರಿದಂತೆ ಇದ್ದರೂ ಆಶಾದಾಯಕ ಪರಿಸ್ಥಿತಿ ವ್ಯಾಪ್ತಿಯಲ್ಲೇ ಇದೆ. ತರಕಾರಿ ಬೆಲೆಗಳ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ. ಇದು ನಿಯಂತ್ರಣಕ್ಕೆ ಬಂದರೆ ಹಣದುಬ್ಬರ ಶೇ. 5ಕ್ಕಿಂತ ಒಳಗೆ ಬರುವ ಸಾಧ್ಯತೆಯೇ ಹೆಚ್ಚು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ