India’s GDP Growth: ಜಿಡಿಪಿ ಕುಸಿತದ ಹೊರತಾಗಿಯೂ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಆರ್ಥಿಕತೆ; ಕೇಂದ್ರ
ಜಿಡಿಪಿ ಬೆಳವಣಿಗೆ ಕುಂಠಿತವಾಗಿರುವ ಹೊರತಾಗಿಯೂ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಚೀನಾದಲ್ಲಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇಕಡಾ 3.9ರ ಆರ್ಥಿಕ ಬೆಳವಣಿಗೆ ದಾಖಲಾಗಿದ್ದರೆ, ಇದೇ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇಕಡಾ 8.4ರಷ್ಟಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನವದೆಹಲಿ: ದೇಶದ ಜಿಡಿಪಿ ಬೆಳವಣಿಗೆ (GDP growth) ದರ ಭಾರೀ ಪ್ರಮಾಣದಲ್ಲಿ ಕುಸಿತವಾಗಿರುವುದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ಮಖ್ಯವಾಗಿ ಉತ್ಪಾದನೆ (Production) ಮತ್ತು ಗಣಿಗಾರಿಕೆ (Mining) ವಲಯಗಳ ಚಟುವಟಿಕೆಗಳ ಕುಸಿತ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಮೇಲೆ ಪರಿಣಾಮ ಬೀರಿದೆ. ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ದೇಶವು ಶೇಕಡಾ 6.3ರ ಜಿಡಿಪಿ ಬೆಳವಣಿಗೆ ದರ ದಾಖಲಿಸಿದೆ. ಇದು ಅದಕ್ಕಿಂತ ಹಿಂದಿನ ಮೂರು ತಿಂಗಳ ಅವಧಿಯಲ್ಲಿ ಶೇಕಡಾ 13.5ರಷ್ಟಿತ್ತು. ಕೋವಿಡೋತ್ತರ ತ್ರೈಮಾಸಿಕಗಳಲ್ಲಿ ವೇಗದ ಚೇತರಿಕೆಯ ಸುಳಿವು ನೀಡಿದ್ದ ಜಿಡಿಪಿ ಬೆಳವಣಿಗೆ ಮತ್ತೆ ಇಳಿಕೆ ಕಂಡಿದೆ.
ಆದಾಗ್ಯೂ, ಜಿಡಿಪಿ ಬೆಳವಣಿಗೆ ಕುಂಠಿತವಾಗಿರುವ ಹೊರತಾಗಿಯೂ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಚೀನಾದಲ್ಲಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇಕಡಾ 3.9ರ ಆರ್ಥಿಕ ಬೆಳವಣಿಗೆ ದಾಖಲಾಗಿದ್ದರೆ, ಇದೇ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇಕಡಾ 8.4ರಷ್ಟಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: New Bank Locker Rules; ಬ್ಯಾಂಕ್ ಲಾಕರ್ ನಿಯಮದಲ್ಲಿ ಆರ್ಬಿಐ ಮಹತ್ವದ ಬದಲಾವಣೆ; ಇಲ್ಲಿದೆ ಮಾಹಿತಿ
ನೈಜ ಜಿಡಿಪಿ ದರ ಲೆಕ್ಕಾಚಾರದ ಪ್ರಕಾರ 2022-23ರ ಅಂದಾಜು ಜಿಡಿಪಿ 38.17 ಲಕ್ಷ ಕೋಟಿ ರೂ. ಆಗಿರಲಿದೆ. ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 8.4ರ ಜಿಡಪಿ ಬೆಳವಣಿಗೆ ಅಂದಾಜಿಸಲಾಗಿತ್ತು. ಆದರೆ ಶೇಕಡಾ 6.3ರ ಬೆಳವಣಿಗೆ ದಾಖಲಿಸಲಾಗಿದೆ ಎಂದು ಕೇಂದ್ರ ಸಾಖ್ಯಿಕ ಇಲಾಖೆ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಜಿಡಿಪಿ ಬೆಳವಣಿಗೆ ಶೇಕಡಾ 6.8 ರಿಂದ 7ರ ವರೆಗೆ ನಿರೀಕ್ಷಿಸಬಹುದು. ದೇಶದ ಆರ್ಥಿಕತೆಯು ಹಳಿಗೆ ಮರಳಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದಾರೆ. 2019-20ರಿಂದ ಜಿಡಿಪಿ ಬೆಳವಣಿಗೆ ಹಂತ ಹಂತವಾಗಿ ವೇಗಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Digital Rupee: ಆರ್ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ
ಹಬ್ಬದ ಮಾರಾಟ ಸೇರಿದಂತೆ ಹಲವು ಚಟುವಟಿಕೆಗಳ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಹಳಿಕೆ ಮರಳಿದೆ. ಶೇಕಡಾ 6.8 ರಿಂದ 7ರ ಬೆಳವಣಿಗೆಯನ್ನು ದಾಖಲಿಸುವ ಹಾದಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಪ್ರಮುಖ ಕ್ಷೇತ್ರಗಳ ಬೆಳವಣಿಗೆ ಕುಸಿತ ಕಾರಣ
ಜಿಡಿಪಿ ಬೆಳವಣಿಗೆ ತಗ್ಗಲು ಪ್ರಮುಖ ಕ್ಷೇತ್ರಗಳ ಚಟುವಟಿಕೆಗಳಲ್ಲಿ ಆಗಿರುವ ಕುಸಿತವೇ ಕಾರಣ ಎಂದು ಸಾಂಖ್ಯಿಕ ಇಲಾಖೆ ತಿಳಿಸಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಸಿಮೆಂಟ್ ಉತ್ಪಾದನೆಯಲ್ಲಿ 20 ತಿಂಗಳ ಕುಸಿತ ಕಾಣಿಸಿದೆ. ಇದು ಜಿಡಿಪಿ ಬೆಳವಣಿಗೆ ಕುಗ್ಗಲು ಕಾರಣ ಎಂದು ಸರ್ಕಾರ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ