Sign In

By signing in or creating an account, you agree with Associated Broadcasting Company's Terms & Conditions and Privacy Policy.

New Bank Locker Rules; ಬ್ಯಾಂಕ್ ಲಾಕರ್ ನಿಯಮದಲ್ಲಿ ಆರ್​ಬಿಐ ಮಹತ್ವದ ಬದಲಾವಣೆ; ಇಲ್ಲಿದೆ ಮಾಹಿತಿ

ಲಾಕರ್​ಗಳಲ್ಲಿ ಇಟ್ಟಿರುವ ವಸ್ತುಗಳು ಕಳೆದುಹೋದಾಗ ಬ್ಯಾಂಕ್​ಗಳಿಂದ ಸರಿಯಾಗಿ ಪರಿಹಾರ ದೊರೆಯದಿರುವ ಮತ್ತು ಸ್ಪಂದನೆ ಸಿಗದಿರುವ ಬಗ್ಗೆ ಅನೇಕ ಗ್ರಾಹಕರು ದೂರು ನೀಡಿದ್ದರು. ಮೌಲ್ಯಯುತ ವಸ್ತು ಕಳೆದುಹೋಗಿ ಹಲವು ಸಮಯವೇ ಕಳೆದರೂ ಬ್ಯಾಂಕ್​ನಿಂದ ಸೂಕ್ತ ಪರಿಹಾರ ದೊರೆಯದೇ ಇರುವ ಬಗ್ಗೆ ದೂರಿದ್ದರು.

New Bank Locker Rules; ಬ್ಯಾಂಕ್ ಲಾಕರ್ ನಿಯಮದಲ್ಲಿ ಆರ್​ಬಿಐ ಮಹತ್ವದ ಬದಲಾವಣೆ; ಇಲ್ಲಿದೆ ಮಾಹಿತಿ
ಆರ್​ಬಿಐ
Follow us
TV9 Web
| Updated By: Ganapathi Sharma

Updated on:Dec 01, 2022 | 9:51 AM

ನವದೆಹಲಿ: ಬ್ಯಾಂಕ್ ಲಾಕರ್​ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್​ಬಿಐ (Reserve Bank of India) ಮಹತ್ವದ ಬದಲಾವಣೆ ಮಾಡಿದೆ. ಪರಿಣಾಮವಾಗಿ, ಲಾಕರ್​ಗಳಲ್ಲಿ (Bank Locker) ಇಟ್ಟಿರುವ ವಸ್ತುಗಳು ಅಥವಾ ದಾಖಲೆಗಳು ಕಳೆದು ಹೋದರೆ ಬ್ಯಾಂಕ್​ಗಳು ಗ್ರಾಹಕರಿಗೆ ಭಾರಿ ಮೊತ್ತದ ಪರಿಹಾರ ನೀಡಬೇಕಾಗಲಿದೆ. ಇದರಿಂದ ಭೂಮಿಗೆ ಸಂಬಂಧಿಸಿದ ಅಥವಾ ಇತರ ದಾಖಲೆಗಳನ್ನು, ಚಿನ್ನ, ಆಭರಣ ಇತ್ಯಾದಿಗಳನ್ನು ಬ್ಯಾಂಕ್​ ಲಾಕರ್​ಗಳಲ್ಲಿ ಇಡುವವರಿಗೆ ನೆರವಾಗಲಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಲಾಕರ್ ನಿಯಮಗಳಲ್ಲಿ ಬದಲಾವಣೆ ಮಾಡಿರುವುದಾಗಿ ಆರ್​ಬಿಐ ತಿಳಿಸಿದೆ.

ಲಾಕರ್​ಗಳಲ್ಲಿ ಇಟ್ಟಿರುವ ವಸ್ತುಗಳು ಕಳೆದುಹೋದಾಗ ಬ್ಯಾಂಕ್​ಗಳಿಂದ ಸರಿಯಾಗಿ ಪರಿಹಾರ ದೊರೆಯದಿರುವ ಮತ್ತು ಸ್ಪಂದನೆ ಸಿಗದಿರುವ ಬಗ್ಗೆ ಅನೇಕ ಗ್ರಾಹಕರು ದೂರು ನೀಡಿದ್ದರು. ಮೌಲ್ಯಯುತ ವಸ್ತು ಕಳೆದುಹೋಗಿ ಹಲವು ಸಮಯವೇ ಕಳೆದರೂ ಬ್ಯಾಂಕ್​ನಿಂದ ಸೂಕ್ತ ಪರಿಹಾರ ದೊರೆಯದೇ ಇರುವ ಬಗ್ಗೆ ದೂರಿದ್ದರು. ಇವುಗಳನ್ನು ಆರ್​ಬಿಐ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.

ವಸ್ತು ಕಳೆದು ಹೋದರೆ ಭಾರಿ ಮೊತ್ತದ ಪರಿಹಾರ

ಬ್ಯಾಂಕ್ ಲಾಕರ್​ನಲ್ಲಿಟ್ಟಿರುವ ಮಹತ್ವದ ವಸ್ತು ಕಳೆದು ಹೋದರೆ ಅಂಥ ಗ್ರಾಹಕರಿಗೆ ಸಂಬಂಧಪಟ್ಟ ಬ್ಯಾಂಕ್, ಲಾಕರ್​ ಬಾಡಿಗೆ ಶುಲ್ಕದ 100 ಪಟ್ಟು ಪರಿಹಾರ ನೀಡಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಬ್ಯಾಂಕ್ ಲಾಕರ್ ತೆರೆದ ಬಗ್ಗೆ ಗ್ರಾಹಕರಿಗೆ ಇ-ಮೇಲ್, ಎಸ್​ಎಂಎಸ್ ಮೂಲಕ ಸಂದೇಶ ಕಳುಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಪಾರದರ್ಶಕತೆ

ಲಾಕರ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಗ್ರಾಹಕರ ಅಮೂಲ್ಯವಾದ ವಸ್ತುಗಳು ಕಳೆದುಹೋಗದಂತೆ ನೋಡಿಕೊಳ್ಳಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್​ಬಿಐ ಹೇಳಿದೆ. ಖಾಲಿ ಲಾಕರ್​ಗಳು, ವೈಟಿಂಗ್ ಲಿಸ್ಟ್​ನಲ್ಲಿರುವ ಲಾಕರ್​ಗಳ ವಿವರವನ್ನು ಬ್ಯಾಂಕ್​ಗಳು ಪ್ರಕಟಿಸಬೇಕು. ಬ್ಯಾಂಕ್​ ಕಡೆಯಿಂದ ಗ್ರಾಹಕರಿಗೆ ಸೂಕ್ತ ವಿವರ ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಆರ್​ಬಿಐ ಹೇಳಿದೆ.

ಭಾರಿ ಮೊತ್ತದ ಶುಲ್ಕ ವಿಧಿಸುವಂತಿಲ್ಲ

ಬ್ಯಾಂಕ್​ಗಳು ಲಾಕರ್​ ಸೇವೆಗಾಗಿ ಗ್ರಾಹಕರಿಗೆ ಬೇಕಾಬಿಟ್ಟಿ ಶುಲ್ಕ ವಿಧಿಸುವಂತಿಲ್ಲ ಎಂದು ನೂತನ ನಿಯಮದಲ್ಲಿ ಹೇಳಲಾಗಿದೆ. ಉದಾಹರಣೆಗೆ; ಲಾಕರ್ ಬಾಡಿಗೆ 2,000 ರೂ. ಎಂದಿದ್ದರೆ ನಿರ್ವಹಣಾ ಶುಲ್ಕ ಎಂದು 6,000 ರೂ.ಗಿಂತ ಹೆಚ್ಚು ವಿಧಿಸುವಂತಿಲ್ಲ.

ಸಿಸಿಟಿವಿ ಕಣ್ಗಾವಲು

ಲಾಕರ್​ ಕೊಠಡಿಗೆ ಭೇಟಿ ನೀಡುವ, ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಹಾಗೂ ಅಲ್ಲಿನ ಪ್ರತಿಯೊಂದು ಚಟುವಟಿಕೆ ಮೇಲೂ ಸಿಸಿಟಿವಿ ಕ್ಯಾಮರಾ ಮೂಲಕ ನಿಗಾ ಇರಿಸಬೇಕು ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Thu, 1 December 22

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ