AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cement price: ಸ್ಥಿರವಾಗಿದ್ದರೂ ಬೇಡಿಕೆ; ಡಿಸೆಂಬರ್​ನಲ್ಲಿ ಸಿಮೆಂಟ್ ದರ ಇಳಿಕೆ

ಬೇಡಿಕೆಯಲ್ಲಿ ಅಂಥ ವ್ಯತ್ಯಾಸ ಆಗದಿದ್ದರೂ ಡಿಸೆಂಬರ್ ತಿಂಗಳಲ್ಲಿ ಸಿಮೆಂಟ್ ದರ ಇಳಿಕೆ ಆಗಿದೆ. ಎಷ್ಟು ಇಳಿದಿದೆ ಮತ್ತು ಅದರ ಹಿಂದಿನ ಕಾರಣಗಳೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Cement price: ಸ್ಥಿರವಾಗಿದ್ದರೂ ಬೇಡಿಕೆ; ಡಿಸೆಂಬರ್​ನಲ್ಲಿ ಸಿಮೆಂಟ್ ದರ ಇಳಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 07, 2022 | 1:51 PM

Share

ಬೇಡಿಕೆ ಸ್ಥಿರವಾಗಿಯೇ ಇದ್ದರೂ ವಾಲ್ಯೂಮ್​ಗಳ ಏರಿಕೆಯಿಂದಾಗಿ ಡಿಸೆಂಬರ್‌ನಲ್ಲಿ ಸಿಮೆಂಟ್ ಬೆಲೆಗಳು ಕುಸಿದಿವೆ. Emkay ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್‌ನ ಸಿಮೆಂಟ್ ಮಾರುಕಟ್ಟೆಯ ವಿಶ್ಲೇಷಣೆಯ ಪ್ರಕಾರ, 2021ರ ಡಿಸೆಂಬರ್​ನಲ್ಲಿ ಸರಾಸರಿ ಪ್ಯಾನ್-ಇಂಡಿಯಾ ಸಿಮೆಂಟ್ ಬೆಲೆಗಳು ಶೇ 5ರಷ್ಟು ಮಾಸಿಕವಾಗಿ ಕಡಿಮೆಯಾಗಿದೆ. ಇದು ಹೆಚ್ಚಾಗಿ ವಾಲ್ಯೂಮ್​ನ ಕಾರಣದಿಂದಾಗಿ ಆಗಿದೆ. ಪೂರ್ವ ಮತ್ತು ದಕ್ಷಿಣದಲ್ಲಿ ಬೆಲೆಗಳು ತಿಂಗಳಿಂದ ತಿಂಗಳಿಗೆ ಶೇ 6ರಿಂದ 7ರಷ್ಟು ಕಡಿಮೆಗೊಳಿಸಿದರೆ, ಇತರ ಪ್ರದೇಶಗಳಲ್ಲಿ ಬೆಲೆಗಳು ಶೇ 3ರಿಂದ 4ರಷ್ಟು ಕುಸಿದವು. ಉದ್ಯಮದ ಪ್ರಮಾಣವು ತಿಂಗಳಿಂದ ತಿಂಗಳಿಗೆ ಶೇ 25ರಷ್ಟು ಹೆಚ್ಚಾಗಬಹುದು ಎಂದು ವರದಿ ಹೇಳಿದೆ. ಎಲ್ಲ ಪ್ರದೇಶಗಳು ಶೇ 20ರಿಂದ 30ರಷ್ಟು ತಿಂಗಳಿಂದ ತಿಂಗಳಿಗೆ ವಾಲ್ಯೂಮ್ ಬೆಳವಣಿಗೆಯನ್ನು ಕಂಡಿರುವ ಸಾಧ್ಯತೆಯಿದೆ. ಪೂರ್ವವನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಡಿಸೆಂಬರ್‌ನಲ್ಲಿ ವರ್ಷದಿಂದ ವರ್ಷದ ಬೇಡಿಕೆ ಸುಧಾರಣೆ ಆಗಬೇಕು ಎಂದು ಬ್ರೋಕರೇಜ್ ಹೇಳಿದೆ.

ಬೇಡಿಕೆ ಚೇತರಿಸಿಕೊಳ್ಳುವುದರ ಜತೆಗೆ ಕಂಪೆನಿಗಳು 2022ರ ಜನವರಿಗೆ ಪ್ರದೇಶದಾದ್ಯಂತ 10ರಿಂದ 30 ರುಪಾಯಿ ಬ್ಯಾಗ್‌ಗಳ ಬೆಲೆ ಏರಿಕೆಯನ್ನು ಘೋಷಿಸಿವೆ. ಆದರೂ ಮುಂದಿನ ಕೆಲವು ದಿನಗಳಲ್ಲಿ ಅದನ್ನು ಕಡಿಮೆಗೊಳಿಸುವುದು ತಿಳಿಯಲಿದೆ. ಹಬ್ಬದ ರಜಾಗಳು, ಅಕಾಲಿಕ ಮಳೆ, ಮರಳು ಲಭ್ಯತೆ ಸುಧಾರಣೆ ಮತ್ತು ನಿರ್ಮಾಣ ವೆಚ್ಚದಲ್ಲಿ ಹಣದುಬ್ಬರವನ್ನು ತಗ್ಗಿಸುವುದು, ಇನ್​ಫ್ರಾ ಪ್ರಾಜೆಕ್ಟ್‌ಗಳ ಚೇತರಿಕೆ ಮಾಸಿಕ ವಾಲ್ಯೂಮ್ ಬೆಳವಣಿಗೆಯಲ್ಲಿ ಸುಧಾರಣೆಗೆ ಕಾರಣವಾಯಿತು.

“ಸರ್ಕಾರದ ವೆಚ್ಚದಲ್ಲಿ ಹೆಚ್ಚಳ ಮತ್ತು ಗ್ರಾಮೀಣ ಬೇಡಿಕೆಯಲ್ಲಿ ಹೆಚ್ಚಳದೊಂದಿಗೆ, ಬೇಡಿಕೆಯು ಮತ್ತಷ್ಟು (ಜನವರಿ 22 ರ ಮಧ್ಯದಿಂದ) ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,” ಎಂದು ಎಂಕೆ ಹೇಳಿದೆ. FY22 Q3ರಲ್ಲಿ ಮಾರ್ಜಿನ್‌ಗಳು ಬೇಡಿಕೆ/ಬೆಲೆ ಚೇತರಿಕೆಯೊಂದಿಗೆ ಕಡಿಮೆಯಾಗುವ ನಿರೀಕ್ಷೆಯಿದೆ. ವೆಚ್ಚದ ಹಣದುಬ್ಬರವು ಇತ್ತೀಚಿನ ಗರಿಷ್ಠ ಮಟ್ಟದಿಂದ ಇನ್‌ಪುಟ್ ಬೆಲೆಗಳಲ್ಲಿ (ಪೆಟ್‌ಕೋಕ್, ಕಲ್ಲಿದ್ದಲು ಮತ್ತು ಡೀಸೆಲ್) ಶೇ 15ರಿಂದ ಶೇ 40ರಷ್ಟು ಇಳಿಕೆಯೊಂದಿಗೆ Q4ನಿಂದ ಸರಾಗವಾಗಬೇಕು. ಬೆಳವಣಿಗೆಗಳು ವಲಯವನ್ನು ಪಾಸಿಟಿವ್ ಆಗಿ ನಡೆಸುತ್ತವೆ,” ಎಂದು ಬ್ರೋಕರೇಜ್ ಹೇಳಿದೆ.

ಕಳೆದ ಎರಡು ವರ್ಷಗಳಲ್ಲಿ ಶೇ 40ಕ್ಕಿಂತ ಹೆಚ್ಚಿನ ಹೆಚ್ಚಳದ ನಂತರ ಉದ್ಯಮದ EBITDA/ಟನ್ FY22Eನಲ್ಲಿ ಹೆಚ್ಚಿನ ಏರಿಳಿತ ಇಲ್ಲದೆ ಉಳಿಯುವ ನಿರೀಕ್ಷೆಯಿದೆ. ಆದರೆ FY22-24Eಗಿಂತ ಶೇ 4-5 CAGR ಅನ್ನು ನೋಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: WPI Inflation: ಸಗಟು ದರ ಸೂಚ್ಯಂಕ ಹಣದುಬ್ಬರ ನವೆಂಬರ್​ ತಿಂಗಳಿನಲ್ಲಿ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿ ಶೇ 14.23ಕ್ಕೆ

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು