High Risk: ಸೇವಿಂಗ್ಸ್ ಸ್ಕೀಮ್ಗೆ 10 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡುತ್ತೀರಾ? ಈ ಹೊಸ ನಿಯಮಗಳು ತಿಳಿದಿರಲಿ
New Rules For High Investment: ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಗಳನ್ನು ಕಡಿಮೆ ರಿಸ್ಕ್, ಮೀಡಿಯಂ ರಿಸ್ಕ್ ಮತ್ತು ಹೈರಿಸ್ಕ್ ಎಂದು ಮೂರು ಭಾಗವಾಗಿ ಮಾಡಲಾಗಿದೆ. ಹೈರಿಸ್ಕ್ ಎಂದು ಪರಿಗಣಿಸಲಾದ ಸ್ಕೀಮ್ಗಳಲ್ಲಿ ಹೂಡಿಕೆದಾರರಿಂದ ಕೆವೈಸಿ ದಾಖಲೆಗಳು ಹಾಗೂ ಇನ್ಕಂ ಪ್ರೂಫ್ ದಾಖಲೆಗಳನ್ನು ಪಡೆಯಬೇಕೆಂದು ಸೂಚಿಸಲಾಗಿದೆ.

ಸಣ್ಣ ಉಳಿತಾಯ ಯೋಜನೆಗಳು (Small Savings Scheme) ಸಾಕಷ್ಟು ಜನಪ್ರಿಯವಾಗುತ್ತಿವೆ. ಅದರಲ್ಲೂ ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ಗಳಿಗೆ ಜನಾಕರ್ಷಣೆ ಹೆಚ್ಚುತ್ತಿದೆ. ಹೆಚ್ಚೆಚ್ಚು ಜನರು ಪೋಸ್ಟ್ ಆಫೀಸ್ ಸ್ಕೀಮ್ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ಹರಿವಾಗಿ ಇಂಥ ಸ್ಕೀಮ್ಗಳನ್ನು ದುರುಪಯೋಗಿಸಿಕೊಳ್ಳಲಾಗುತ್ತಿದೆ ಎನ್ನುವಂತಹ ಮಾಹಿತಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸೇವಿಂಗ್ ಸ್ಕೀಮ್ಗಳಲ್ಲಿನ ಹೂಡಿಕೆ ವಿಚಾರದಲ್ಲಿ ಕೆಲವೊಂದಿಷ್ಟು ನಿಯಮ ಬದಲಾವಣೆ ಮಾಡಿದೆ. ಅದರಲ್ಲಿ ನಿರ್ದಿಷ್ಟವಾಗಿ ಅಂಚೆ ಕಚೇರಿಯ ಉಳಿತಾಯ ಯೋಜನೆಗಳಿಗೆ ಈ ನಿಯಮ ಅನ್ವಯ ಆಗುತ್ತದೆ.
ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಗಳನ್ನು ಕಡಿಮೆ ರಿಸ್ಕ್, ಮೀಡಿಯಂ ರಿಸ್ಕ್ ಮತ್ತು ಹೈರಿಸ್ಕ್ ಎಂದು ಮೂರು ಭಾಗವಾಗಿ ಮಾಡಲಾಗಿದೆ. ಹೈರಿಸ್ಕ್ ಎಂದು ಪರಿಗಣಿಸಲಾದ ಸ್ಕೀಮ್ಗಳಲ್ಲಿ ಹೂಡಿಕೆದಾರರಿಂದ ಕೆವೈಸಿ ದಾಖಲೆಗಳು ಹಾಗೂ ಇನ್ಕಂ ಪ್ರೂಫ್ ದಾಖಲೆಗಳನ್ನು ಪಡೆಯಬೇಕೆಂದು ಸೂಚಿಸಲಾಗಿದೆ.
ಹೂಡಿಕೆದಾರರನ್ನು ಹೈ ರಿಸ್ಕ್ ಎಂದು ಹೇಗೆ ಪರಿಗಣಿಸಲಾಗುತ್ತದೆ?
ಒಬ್ಬ ಹೂಡಿಕೆದಾರ 50,000 ರೂ ಮೀರದಂತೆ ಉಳಿತಾಯ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ದರೆ ಅವರನ್ನು ಕಡಿಮೆ ರಿಸ್ಕ್ ಕೆಟಗರಿಗೆ ಸೇರಿಸಲಾಗುತ್ತದೆ.
ಹೂಡಿಕೆಯ ಮೊತ್ತ 50,000 ರೂ ಮೇಲ್ಪಟ್ಟಿದ್ದು, ಆದರೆ, 10 ಲಕ್ಷ ರೂ ಒಳಗೆ ಇದ್ದರೆ ಅಂಥ ಹೂಡಿಕೆದಾರರನ್ನು ಮಧ್ಯಮ ಅಪಾಯದ ಕೆಟಗರಿಗೆ ಸೇರಿಸಲಾಗುತ್ತದೆ.
ಇನ್ನು, ಹೂಡಿಕೆ ಮೊತ್ತ 10,000 ರೂ ಗಡಿದಾಟಿದರೆ ಅಂಥವರನ್ನು ಹೆಚ್ಚು ರಿಸ್ಕ್ನ ಕೆಟಗರಿಯವರೆಂದು ಪರಿಗಣಿಸಲಾಗುತ್ತದೆ.
ಹೈ ರಿಸ್ಕ್ ಹೂಡಿಕೆದಾರರು ಯಾವ ದಾಖಲೆಗಳನ್ನು ಒದಗಿಸಬೇಕು?
ಸೇವಿಂಗ್ ಸ್ಕೀಮ್ ಬಳಸುವ ಯಾವುದೇ ಹೂಡಿಕೆದಾರರಾದರೂ ಸರಿ ಫೋಟೋ, ಐಡಿ ಪ್ರೂಫ್, ಪ್ಯಾನ್ ನಂಬರ್ ಪಡೆಯಬೇಕು ಎಂದು ಅಂಚೆ ಕಚೇರಿಗಳಿಗೆ ತಿಳಿಸಲಾಗಿದೆ.
ಆದರೆ, 10 ಲಕ್ಷ ರೂ ಮೇಲ್ಪಟ್ಟ ಹೂಡಿಕೆ ಮಾಡಿದವರು ತಮ್ಮ ಹಣಕ್ಕೆ ಮೂಲ ಯಾವುದು ಎಂಬುದರ ದಾಖಲೆ ಒದಗಿಸಬೇಕು. ಅಂಥ ದಾಖಲೆಗಳು ಈ ಕೆಳಕಂಡಂತಿವೆ:
- ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್, ಅಥವಾ ಪೋಸ್ಟ್ ಆಫೀಸ್ ಅಕೌಂಟ್ ಸ್ಟೇಟ್ಮೆಂಟ್
- ಕಳೆದ 3 ವರ್ಷದಲ್ಲಿ ಸಲ್ಲಿಸಲಾದ ಐಟಿ ರಿಟರ್ನ್ಸ್ನ ಒಂದು ವರ್ಷದ ದಾಖಲೆ
- ಸೇಲ್ ಡೀಡ್, ಗಿಫ್ಟ್ ಡೀಡ್, ವಿಲ್, ಅನುವಂಶಿಕ ಆಸ್ತಿ ಇತ್ಯಾದಿ ದಾಖಲೆಗಳು
- ಆ ಹಣಕ್ಕೆ ಮೂಲ ಯಾವುದು ಎಂದು ತೋರಿಸುವ ಇತರ ಯಾವುದೇ ದಾಖಲೆ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Sun, 28 May 23




