AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಮುದ್ರಾಂಕ, ನೋಂದಣಿ ಶುಲ್ಕಗಳ ಆದಾಯ ಭರ್ಜರಿ ಹೆಚ್ಚಳ; ಇಲ್ಲಿದೆ ವಿವರ

23ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ರಾಜ್ಯದ ಸರಾಸರಿ ಮಾಸಿಕ ಆದಾಯ 13.72 ಶತಕೋಟಿ ರೂ. ಆಗಿದೆ. ಕಳೆದ ವರ್ಷ ಇದು 9.83 ಶತಕೋಟಿ ರೂ. ಆಗಿತ್ತು.

ಕರ್ನಾಟಕದ ಮುದ್ರಾಂಕ, ನೋಂದಣಿ ಶುಲ್ಕಗಳ ಆದಾಯ ಭರ್ಜರಿ ಹೆಚ್ಚಳ; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 21, 2022 | 6:46 PM

Share

ಬೆಂಗಳೂರು: ಕರ್ನಾಟಕವು 23ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮುದ್ರಾಂಕ ಶುಲ್ಕ (Stamp Duty) ಮತ್ತು ನೋಂದಣಿ ಶುಲ್ಕಗಳಿಂದ (Registration Charges) 82.29 ಶತಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (Motilal Oswal Financial Services Limited) ಅಧ್ಯಯನ ವರದಿಯಿಂದ ತಿಳಿದುಬಂದಿದೆ. 22ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಆದಾಯದ ಪ್ರಮಾಣದಲ್ಲಿ ಶೇಕಡಾ 39ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದಲ್ಲಿ ಕರ್ನಾಟಕ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳಿಂದ 59 ಶತಕೋಟಿ ರೂಪಾಯಿ ಆದಾಯ ಗಳಿಸಿತ್ತು ಎಂದು ವರದಿ ಹೇಳಿದೆ. ಇದರೊಂದಿಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳ ಆದಾಯದ ವಾರ್ಷಿಕ ಹೆಚ್ಚಳದ ಪ್ರಮಾಣದಲ್ಲಿ ಕರ್ನಾಟಕವು 16ನೇ ಸ್ಥಾನ ಪಡೆದಿದೆ. ಒಟ್ಟಾರೆಯಾಗಿ ಅತಿಹೆಚ್ಚು ಆದಾಯ ಗಳಿಸುತ್ತಿರುವ 4ನೇ ರಾಜ್ಯವಾಗಿ ಗುರುತಿಸಿಕೊಂಡಿದೆ.

23ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ರಾಜ್ಯದ ಸರಾಸರಿ ಮಾಸಿಕ ಆದಾಯ 13.72 ಶತಕೋಟಿ ರೂ. ಆಗಿದೆ. ಕಳೆದ ವರ್ಷ ಇದು 9.83 ಶತಕೋಟಿ ರೂ. ಆಗಿತ್ತು. ದೇಶದ ಒಟ್ಟಾರೆ ಆದಾಯಕ್ಕೆ ಕರ್ನಾಟಕ ಶೇಕಡಾ 8ರ ಕೊಡುಗೆ ನೀಡಿದೆ ಎಂದು ವರದಿ ಉಲ್ಲೇಖಿಸಿದೆ.

ದೇಶದಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳ ಆದಾಯ ಶೇಕಡಾ 35ರಷ್ಟು ಹೆಚ್ಚಳವಾಗಿದ್ದು, ಈ ವರ್ಷ ಮೊದಲಾರ್ಧದಲ್ಲಿ 948.47 ಶತಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ ಇದು 701.20 ಶತಕೋಟಿ ರೂ. ಆಗಿತ್ತು. ತಿಂಗಳ ಸರಾಸರಿ ಆದಾಯ ಸಂಗ್ರಹ ಈ ವರ್ಷ 158.07 ಶತಕೋಟಿ ರೂ. ಇದೆ. ಕಳೆದ ವರ್ಷ ಇದು 116.87 ಶತಕೋಟಿ ರೂ. ಆಗಿತ್ತು.

ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ

ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳಿಂದ ಅತಿಹೆಚ್ಚು ಆದಾಯ ಗಳಿಸುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳು ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿವೆ. ಮಹಾರಾಷ್ಟ್ರ 113.0 ಶತಕೋಟಿ ರೂ. ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯ ಗಳಿಕೆ ಪ್ರಮಾಣದಲ್ಲಿ ಶೇಕಡಾ 20ರಷ್ಟು ಹೆಚ್ಚಳವಾಗಿದೆ. ಉತ್ತರ ಪ್ರದೇಶ 93 ಶತಕೋಟಿ ರೂ. ಆದಾಯ ಗಳಿಸಿದ್ದು, ಶೇಕಡಾ 13ರಷ್ಟು ಹೆಚ್ಚಳವಾಗಿದೆ. ತಮಿಳುನಾಡು 86.62 ಶತಕೋಟಿ ರೂ. ಆದಾಯ ಗಳಿಸಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕ ಮತ್ತು ತೆಲಂಗಾಣ ಕ್ರಮವಾಗಿ 82.29 ಶತಕೋಟಿ ರೂ. ಹಾಗೂ 72.13 ಶತಕೋಟಿ ರೂ. ಆದಾಯ ಗಳಿಸಿ ನಾಲ್ಕು, ಐದನೇ ಸ್ಥಾನಗಳಲ್ಲಿವೆ.

ಮುದ್ರಾಂಕ, ನೋಂದಣಿ ಶುಲ್ಕಗಳ ಆದಾಯ; ಟಾಪ್ 5 ರಾಜ್ಯಗಳು
ಮಹಾರಾಷ್ಟ್ರ 113.0 ಶತಕೋಟಿ ರೂ.
ಉತ್ತರ ಪ್ರದೇಶ 93 ಶತಕೋಟಿ ರೂ.
ತಮಿಳುನಾಡು 86.62 ಶತಕೋಟಿ ರೂ.
ಕರ್ನಾಟಕ 82.29 ಶತಕೋಟಿ ರೂ.
ತೆಲಂಗಾಣ 72.13 ಶತಕೋಟಿ ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ