Inspiring Story: ಶಾಲೆ ಓದುವಾಗಲೇ ಕಂಪನಿಯ ಸಿಇಒ; ಶಾಲೆಯ ಬಾತ್​ರೂಮೇ ಮೀಟಿಂಗ್ ಸೆಂಟರ್; 15 ವರ್ಷದ ಎರಿಕ್ ಝು ಕಥೆ

15 Yr Old Business Prodigy Eric Zhu: 15 ವರ್ಷದ ಎರಿಕ್ ಝು ಅವರು ಏವಿಯೇಟರ್ ಎಂಬ ಕಂಪನಿಯ ಸಿಇಒ ಆಗಿ ಮಿಂಚುಹರಿಸುತ್ತಿದ್ದಾನೆ. ಈತ ಶಾಲಾ ತರಗತಿಗಳ ಮಧ್ಯೆಯೇ ಪಾಠ ಮತ್ತು ವ್ಯವಹಾರ ಎರಡನ್ನೂ ಬ್ಯಾಲೆನ್ಸ್ ಮಾಡುವ ಕೌಶಲ್ಯ ಕಲಿತಿದ್ದಾನೆ. ಆಶ್ಚರ್ಯ ಆಗಬಹುದು. ಇದು ನಿಜ.

Inspiring Story: ಶಾಲೆ ಓದುವಾಗಲೇ ಕಂಪನಿಯ ಸಿಇಒ; ಶಾಲೆಯ ಬಾತ್​ರೂಮೇ ಮೀಟಿಂಗ್ ಸೆಂಟರ್; 15 ವರ್ಷದ ಎರಿಕ್ ಝು ಕಥೆ
ಎರಿಕ್ ಝು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 28, 2023 | 5:13 PM

ಸ್ಯಾನ್ ಫ್ರಾನ್ಸಿಸ್ಕೋ: ಶಾಲೆಗೆ ಹೋಗುವ ಮಕ್ಕಳಿಗೆ ಹೋಮ್ ವರ್ಕ್ ಮಾಡೋದು, ಎಕ್ಸಾಂ ಬರೆಯೋದೇ ಸರ್ವಸ್ವ. ಅದು ಬಿಟ್ಟರೆ ಆಟ. ಇದೇ ಅವರ ಪ್ರಪಂಚ. ಮನೆಯಲ್ಲಿ ಅಪ್ಪ ಅಥವಾ ಅಮ್ಮನ ಸ್ವಂತ ಬ್ಯುಸಿನೆಸ್ ಇದ್ದರೆ ಅದರಲ್ಲಿ ಒಂದಷ್ಟು ಭಾಗಿಯಾಗುವುದು ಬಿಟ್ಟರೆ ಶಾಲಾ ಮಕ್ಕಳಿಗೂ ವ್ಯವಹಾರಕ್ಕೂ ದೂರ ದೂರ. ಆದರೆ, ಅಮೆರಿಕದ 15 ವರ್ಷದ ಶಾಲಾ ಬಾಲಕನೊಬ್ಬ ಆಂಟ್ರಪ್ರೆನ್ಯೂರ್ ಆಗಿ ಸದ್ದು ಮಾಡುತ್ತಿದ್ದಾನೆ. 15 ವರ್ಷದ ಎರಿಕ್ ಝು ಅವರು ಏವಿಯೇಟರ್ ಎಂಬ ಕಂಪನಿಯ ಸಿಇಒ ಆಗಿ ಮಿಂಚುಹರಿಸುತ್ತಿದ್ದಾನೆ. ಈತ ಶಾಲಾ ತರಗತಿಗಳ ಮಧ್ಯೆಯೇ ಪಾಠ ಮತ್ತು ವ್ಯವಹಾರ ಎರಡನ್ನೂ ಬ್ಯಾಲೆನ್ಸ್ ಮಾಡುವ ಕೌಶಲ್ಯ ಕಲಿತಿದ್ದಾನೆ. ಆಶ್ಚರ್ಯ ಆಗಬಹುದು. ಇದು ನಿಜ.

ಎರಿಕ್ ಝು ಅವರ ಏವಿಯೇಟರ್ ಕಂಪನಿ ವಿವಿಧ ಸ್ಟಾರ್ಟಪ್​ಗಳಿಗೆ ಫಂಡಿಂಗ್ ಒದಗಿಸುವ ಕಾರ್ಯಕ್ಕೆ ಪ್ಲಾಟ್​ಫಾರ್ಮ್ ಆಗಿ ಕಾರ್ಯನಿರ್ವಹಿಸುತ್ತದೆ. ಹೊಸ ಸ್ಟಾರ್ಟಪ್​ಗಳಿಗೆ ಫಂಡಿಂಗ್ ಮಾಡುವುದೆಂದರೆ ಕ್ಲೈಂಟ್​ಗಳನ್ನು ಭೇಟಿ ಮಾಡುವುದು, ಇವೆಲ್ಲವೂ ಇರುತ್ತದೆ. ಇದೆಲ್ಲಾ ಒಬ್ಬ ಶಾಲಾ ಬಾಲಕನಿಗೆ ಹೇಗೆ ಸಾಧ್ಯ ಎನಿಸಬಹುದು. ಶಾಲಾ ತರಗತಿ ನಡೆಯುವಾಗ, ಕ್ಲೈಂಟ್ ಜೊತೆ ಮೀಟಿಂಗ್ ಮಾಡುವ ಸಂದರ್ಭ ಬಂದಾಗ ಎರಿಕ್ ಝು ಏನಾದರೂ ನೆವ ಹೇಳಿ 15 ನಿಮಿಷ ಬ್ರೇಕ್ ಪಡೆದು ಬಾತ್​ರೂಮ್​ಗೆ ಹೋಗಿ ಅಲ್ಲಿ ಝೂಮ್ ಕಾಲ್ ಮೂಲಕ ಹೂಡಿಕೆದಾರರು ಮತ್ತು ಕ್ಲೈಂಟ್​ಗಳೊಂದಿಗೆ ಮಾತನಾಡಿ ವ್ಯವಹಾರ ಕುದುರಿಸುವ ಕೆಲಸ ಮಾಡುತ್ತಾನೆ.

ಇದನ್ನೂ ಓದಿInspiring: 11ನೇ ವಯಸ್ಸಿನಲ್ಲಿ ಕೇಳಿದ್ದು ಅಪ್ಪ ಕೊಡಿಸಲಿಲ್ಲ; ಹಣ ಸಂಪಾದಿಸುವ ಹುಚ್ಚು ಹಿಡಿದವ 22ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಿ ನಿವೃತ್ತನಾದ ಕಥೆ

ಬಾತ್​ರೂಮಲ್ಲಿ ಕೆಲಸ ಮಾಡೋದು ಅಪ್ಪನಿಗೆ ಗೊತ್ತಾದಾಗ

ಎರಿಕ್ ಝು ತನ್ನ ಶಾಲೆಯ ಬಾತ್​ರೂಮನ್ನೇ ಮೀಟಿಂಗ್ ಸೆಂಟರ್ ಮಾಡಿಕೊಂಡ ವಿಷಯ ಆ ಶಾಲೆಯ ಸಿಬ್ಬಂದಿಗೆ ಗೊತ್ತಾಗದೇ ಇರಲು ಹೇಗೆ ಸಾಧ್ಯ. ಲೂಸ್ ಮೋಶನ್ ಇತ್ಯಾದಿ ನೆವ ಕೊಟ್ಟು ಎರಿಕ್ ಶಾಲಾ ತರಗತಿಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಾನಂತೆ. ಆದರೆ, ಎಷ್ಟು ಸಲ ಎಂದು ಸುಳ್ಳು ನೆವ ಹೇಳಲು ಸಾಧ್ಯ. ಆದರೂ ಹಲವು ಬಾರಿ ಇದನ್ನು ರಹಸ್ಯವಾಗಿ ಇಟ್ಟುಕೊಂಡಿದ್ದು ಹೌದು. ಆದರೆ, ಮಾಧ್ಯಮವೊಂದರಲ್ಲಿ ಈ ವಿಷಯ ಬರೆಯಲ್ಪಟ್ಟಾಗ ಶಾಲೆಯ ಆಡಳಿತಕ್ಕೆ ಗೊತ್ತಾಗುತ್ತದೆ. ಎರಿಕ್​ಗೆ ಎಚ್ಚರಿಕೆಯನ್ನೂ ಕೊಡುತ್ತಾರೆ. ಅವರ ತಂದೆಗೂ ಅಲರ್ಟ್ ಮಾಡುತ್ತಾರೆ. ಅಪ್ಪ ಒಂದು ದಿನ ಈತನನ್ನು ಕೇಳಿಯೇಬಿಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಎರಿಕ್ ಝು, ತನ್ನ ಅಪ್ಪನ ಮೆಸೇಜ್ ಉಲ್ಲೇಖಿಸುತ್ತಾ, ಅಂದು ನನ್ನ ಕಥೆ ಮುಗಿಯುತು ಅಂತ ಅಂದುಕೊಂಡಿದ್ದೆ ಎಂದು ಟ್ವೀಟ್ ಮಾಡಿದ್ದಾರೆ.

ಎರಿಕ್ ಝು ಅವರ ತಂದೆ ಮತ್ತು ತಾಯಿ ಇಬ್ಬರೂ ಚೀನಾ ಮೂಲದವರು. ಅಪ್ಪ ವಿಜ್ಞಾನಿಯಾದರೆ ಅಮ್ಮ ಡಾಕ್ಟರ್. ಈತ ಸರ್ಜನ್ ಆಗಲಿ ಎಂಬುದು ಇಬ್ಬರ ಆಸೆ. ಆದರೆ, ಎರಿಕ್ ಝು ನಡೆಯುತ್ತಿರುವ ಹಾದಿಯೇ ಬೇರೆ. ತನ್ನ ಮಗ ಸ್ಟಾರ್ಟಪ್​ಗಳಿಗೆ ಹೂಡಿಕೆ ತರುವ ಕೆಲಸ ಮಾಡುತ್ತಿದ್ದಾನೆ ಎಂದು ಗೊತ್ತಾದಾಗ ಹೋಗಲಿ ಏನಾದರೂ ಮಾಡಿಕೋ ಎಂದು ಸುಮ್ಮನಾಗಿದ್ದಾರೆ.

ಇದನ್ನೂ ಓದಿSuccessful Business: ಗೃಹಿಣಿ ಹರಿಣಿಯ ಸಾಹಸಗಾಥೆ; ಅನಾರೋಗ್ಯಪೀಡಿತ ಮಗನಿಗಾಗಿ ಶುರುಮಾಡಿದ ಕಂಪನಿಯಲ್ಲಿ 100 ಮಂದಿ ಉದ್ಯೋಗ

ಎರಡು ವರ್ಷ ಕ್ಲಾಸ್​ಗೆ ಹೋದರೂ ಕೋಡಿಂಗ್ ಕಲಿಯಲಿಲ್ಲ; ಎರಿಕ್ ಕಥೆ ಇವತ್ತಿನ ಶಿಕ್ಷಣಕ್ಕೆ ಕೈಗನ್ನಡಿ

ನಾವೆಲ್ಲಾ ಶಾಲೆಗಳಿಗೆ ಹೋಗಿ ಕಲಿತಿದ್ದೇವೆ, ಪರೀಕ್ಷೆ ಬರೆದು ಪಾಸಾಗಿದ್ದೇವೆ. ಆದರೆ, ನಾವು ಮಾಡುತ್ತಿರುವ ಕೆಲಸವನ್ನು ಎಲ್ಲಿ ಕಲಿತಿದ್ದೇವೆ? ಬಹುತೇಕ ಮಂದಿ ತಮ್ಮ ವೃತ್ತಿಕೌಶಲ್ಯದ ಬಹುಪಾಲನ್ನು ತಾವು ಕೆಲಸ ಮಾಡುವಾಗಲೇ ಸಂಪಾದಿಸುತ್ತಾರೆ. ಈ ವಿಚಾರದಲ್ಲಿ ಎರಿಕ್ ಝು ಪಕ್ಕಾ ನಿದರ್ಶನ ಎನಿಸಿದ್ದಾರೆ. 15 ವರ್ಷದ ಎರಿಕ್ ಝು ಕೋಡಿಂಗ್ ಕಲಿಯಲೆಂದು ಎರಡು ವರ್ಷ ಕ್ಲಾಸ್​ಗೆ ಹೋಗುತ್ತಾರೆ. ಆದರೆ, ಏನೂ ಕಲಿಯುವುದಿಲ್ಲ. ಒಮ್ಮೆ ಈತ ಕೋಡಿಂಗ್ ಸಬ್ಜೆಕ್ಟ್ ಟೀಚ್ ಮಾಡುವ ಸಂದರ್ಭ ಬರುತ್ತದೆ. ಆಗ ಈತ ಕೋಡಿಂಗ್ ಕಲಿಯುತ್ತಾನೆ. ಅದೂ ಇಂಟರ್ನೆಟ್ ಮೂಲಕ. ತನಗೆ ಪ್ರಾಯೋಗಿಕ ಸಂದರ್ಭ ಬಂದಾಗ ಚೆನ್ನಾಗಿ ಕಲಿಯಬಲ್ಲೆ ಎಂಬುದು ಎರಿಕ್ ಅನಿಸಿಕೆ. ಇದು ಬಹುಶಃ ಎಲ್ಲಾ ವ್ಯಕ್ತಿಗಳಿಗೂ ಅನ್ವಯಿಸುತ್ತದೆ.

ಅಮೆರಿಕದ ಇಂಡಿಯಾನ ಒಂದು ಹಳ್ಳಿಯಂಥ ನಗರ ಎನ್ನುತ್ತಾನೆ ಎರಿಕ್

ಇನ್ನೂ ಹದಿಹರೆಯದಲ್ಲೇ ಸ್ಟಾರ್ಟಪ್ ನಡೆಸುವ ಎರಿಕ್ ಝು ತನ್ನ ಶಾಲೆಯಲ್ಲಿ ಅದೆಷ್ಟು ಫೇಮಸ್ ಆಗಿರಬಹುದು, ಅಥವಾ ಹೀರೋ ಎನಿಸಿರಬಹುದು ಎಂದು ನಮಗೆ ಅನಿಸುತ್ತದೆ. ಆದರೆ, ಈತ ಒಂದು ಸಂದರ್ಶನದಲ್ಲಿ ಹೇಳುವ ಪ್ರಕಾರ ಈತನ ಪೋಷಕರ ಮನೆ ಇರುವ ಇಂಡಿಯಾನ ಒಂದು ಹಳ್ಳಿಯಂಥದ್ದಂತೆ. ಅದರಲ್ಲೂ ಈತ ಓದಿದ ಹೈಸ್ಕೂಲಿನಲ್ಲಿ ಸ್ಟಾರ್ಟಪ್ ಎಂದರೆ ಏನು ಅಂತ ಯಾರಿಗೂ ಗೊತ್ತಾಗುವುದಿಲ್ಲವಂತೆ.

ಇದನ್ನೂ ಓದಿSuccess Story: ಕರ್ನಾಟಕದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಆರ್​ಎಸ್ ಕಾಮತ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಕಟ್ಟಿದ ಕಥೆ

ಪ್ರಪಂಚ ದೊಡ್ಡದಿದೆ, ನಿಮ್ಮ ಟೈಮ್ ಸರಿಯಾಗಿ ಉಪಯೋಗಿಸಿ: ಎರಿಕ್ ಸಲಹೆ

ಇಂತಿಪ್ಪ ಎರಿಕ್ ಝು 16ನೇ ವಯಸ್ಸಿನಲ್ಲಿ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರ ಸಾಲಿನಲ್ಲಿ ನಿಂತ ಸಂವಹನ ನಡೆಸಬಲ್ಲವನೆನಸಿಸಿದ್ದಾನೆ. ಟ್ವಿಟ್ಟರ್​ನಲ್ಲಿ ಈತನ ಮಾತಿನ ವರಸೆ ಬಲು ಫೇಮಸ್. ತನ್ನ ವಯಸ್ಸಿನ ಇತರ ಮಕ್ಕಳಿಗೆ ಈತ ಕೊಡುವ ಸಲಹೆ ಬಹಳ ಅದ್ಭುತ.

ನಿಮ್ಮ ಸುತ್ತಮುತ್ತ ಕಾಣಿಸುವುದಕ್ಕಿಂತ ಈ ಪ್ರಪಂಚ ಬಹಳ ದೊಡ್ಡದಿದೆ. ಶಾಲೆಯಲ್ಲಿ 7 ಗಂಟೆ, ಹೋಂವರ್ಕ್​ಗೆ 3 ಗಂಟೆ ತೆಗೆದುಹಾಕಿದರೂ ನಿಮಗೆ ದಿನಕ್ಕೆ ಐದಾರು ಗಂಟೆ ಮಿಗುತ್ತದೆ. ನಿಮ್ಮ ಈ ಅಮೂಲ್ಯ ಸಮಯವನ್ನು ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ಹರಣ ಮಾಡುವುದರ ಬದಲು ಏನಾದರೂ ಹೊಸತು ಕಲಿಯಿರಿ ಎಂದು ಎರಿಕ್ ಝು ಸಲಹೆ ಕೊಡುತ್ತಾರೆ. ಎಂಥ ಜಾಣ ಅಲ್ಲವಾ?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Sun, 28 May 23

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ