AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಕೊಟ್ಟು ಕುಣಿಕೆ ಹಾಕೋ ಆನ್ಲೈನ್ ಖದೀಮರಿದ್ದಾರೆ ಹುಷಾರ್; ಲೋನ್ ಸ್ಕ್ಯಾಮ್ ಗುರುತಿಸುವುದು ಹೇಗೆ?

Loan Scam: ಲೋನ್ ಆ್ಯಪ್​ಗಳಲ್ಲಿ ಸುಲಭವಾಗಿ ಸಿಗುತ್ತದೆಂದು ಸಾಲ ಪಡೆದು ಬ್ಲ್ಯಾಕ್​ಮೇಲ್ ಇತ್ಯಾದಿ ದೌರ್ಜನ್ಯಕ್ಕೆ ಒಳಗಾದ ಹಲವು ಪ್ರಕರಣಗಳು ನಿತ್ಯವೂ ಬೆಳಕಿಗೆ ಬರುತ್ತಲೇ ಇವೆ. ಬ್ಯಾಂಕುಗಳಲ್ಲಿ ಸಾಲ ಪಡೆಯಲು ಯತ್ನಿಸಿ ವಿಫಲರಾದ ಮಂದಿ, ಅಥವಾ ತುರ್ತಾಗಿ ಹಣ ಬೇಕಿರುವ ಮಂದಿ ಸಾಮಾನ್ಯವಾಗಿ ಆನ್ಲೈನ್ ಲೋನ್ ಜಾಲಕ್ಕೆ ಬೀಳುತ್ತಾರೆ. ಆನ್ಲೈನ್ ಆ್ಯಪ್​ನವರು ಏನು ಮಾಡಿಯಾರು ಎಂದು ಸುಮ್ಮನಿರುವಂತಿಲ್ಲ. ನಿಮ್ಮ ಜುಟ್ಟು ಜನಿವಾರವನ್ನು ಅವರ ಕೈಗೆ ಕೊಟ್ಟಿರುತ್ತೀರಿ.

ಸಾಲ ಕೊಟ್ಟು ಕುಣಿಕೆ ಹಾಕೋ ಆನ್ಲೈನ್ ಖದೀಮರಿದ್ದಾರೆ ಹುಷಾರ್; ಲೋನ್ ಸ್ಕ್ಯಾಮ್ ಗುರುತಿಸುವುದು ಹೇಗೆ?
ಲೋನ್ ಸ್ಕ್ಯಾಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 05, 2023 | 1:51 PM

Share

ಸಾಕಷ್ಟು ಸವಲತ್ತುಗಳಿರುವ ಇವತ್ತಿನ ಕಾಲದಲ್ಲಿ ಖರ್ಚು ಮಾಡಲು ಹೇರಳ ನೆಪಗಳಿವೆ. ಅಂತೆಯೇ, ಬಹುತೇಕ ಮಂದಿಗೆ ಸಾಲ ಅನಿವಾರ್ಯ ಆಗಿಹೋಗಿದೆ. ಒಮ್ಮೆ ಸಾಲದ ಸುಳಿಗೆ ಸಿಲುಕಿಬಿಟ್ಟರೆ ಅದರಿಂದ ಹೊರಬರುವುದು ಬಹಳ ಕಷ್ಟ. ಹಿಂದೆಲ್ಲಾ ಖಾಸಗಿ ಫೈನಾನ್ಷಿಯರ್​ಗಳಲ್ಲಿ ಸಿಕ್ಕಾಪಟ್ಟೆ ಬಡ್ಡಿಗೆ ಸಾಲ ಪಡೆದು ಆಸ್ತಿಪಾಸ್ತಿ ಕಳೆದುಕೊಂಡ ಉದಾಹರಣೆ ಬಹಳ ಉಂಟು. ಈಗ ಬ್ಯಾಂಕುಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಆದರೂ ಕೂಡ ಕಡಿಮೆ ಕ್ರೆಡಿಟ್ ಸ್ಕೋರ್ ಇತ್ಯಾದಿ ಬೇರೆ ಬೇರೆ ಕಾರಣಕ್ಕೆ ಬ್ಯಾಂಕುಗಳಲ್ಲಿ ಸಾಲ ಸಿಗದ ಜನರು ಆನ್ಲೈನ್ ಖದೀಮರ ಜಾಲಕ್ಕೆ (loan scam) ಸುಲಭವಾಗಿ ಬೀಳುತ್ತಾರೆ.

ಲೋನ್ ಆ್ಯಪ್​ಗಳಲ್ಲಿ ಸುಲಭವಾಗಿ ಸಿಗುತ್ತದೆಂದು ಸಾಲ ಪಡೆದು ಬ್ಲ್ಯಾಕ್​ಮೇಲ್ ಇತ್ಯಾದಿ ದೌರ್ಜನ್ಯಕ್ಕೆ ಒಳಗಾದ ಹಲವು ಪ್ರಕರಣಗಳು ನಿತ್ಯವೂ ಬೆಳಕಿಗೆ ಬರುತ್ತಲೇ ಇವೆ. ಈ ಆನ್ಲೈನ್ ವಂಚಕರು ಸಾಲ ಕೊಡುವುದು ನಿಜವೇ ಆದರೂ ವಿಪರೀತ ಬಡ್ಡಿದರ, ಪ್ರೋಸಸಿಂಗ್ ಫೀ ಇತ್ಯಾದಿ ವಿಧಿಸಿ ಹಿಂಸಿಸುವುದುಂಟು.

ಲೋನ್ ಸ್ಕ್ಯಾಮ್ ಜಾಲ ಹೇಗೆ ಕೆಲಸ ಮಾಡುತ್ತೆ?

ಬ್ಯಾಂಕುಗಳಲ್ಲಿ ಸಾಲ ಪಡೆಯಲು ಯತ್ನಿಸಿ ವಿಫಲರಾದ ಮಂದಿ, ಅಥವಾ ತುರ್ತಾಗಿ ಹಣ ಬೇಕಿರುವ ಮಂದಿ ಸಾಮಾನ್ಯವಾಗಿ ಆನ್ಲೈನ್ ಲೋನ್ ಜಾಲಕ್ಕೆ ಬೀಳುತ್ತಾರೆ. ಇಮೇಲ್, ವಾಟ್ಸಾಪ್, ಟೆಲಿಗ್ರಾಮ್, ಎಸ್ಸೆಮ್ಮೆಸ್ ಹೀಗೆ ಬೇರೆ ಬೇರೆ ಪ್ಲಾಟ್​ಫಾರ್ಮ್​ಗಳಲ್ಲಿ ಸುಲಭವಾಗಿ ಲೋನ್ ಕೊಡಲಾಗುತ್ತದೆಂಬ ಮೆಸೇಜ್ ಕಳುಹಿಸಲಾಗುತ್ತದೆ. ಯಾವುದೇ ದಾಖಲೆ ಇಲ್ಲದೇ ಕೆಲವೇ ಕ್ಷಣಗಳಲ್ಲಿ ಲೋನ್ ಸ್ಯಾಂಕ್ಷನ್ ಆಗುತ್ತದೆ ಎಂಬ ಆಮಿಷ ಒಡ್ಡಲಾಗುತ್ತದೆ.

ಇದನ್ನೂ ಓದಿ: Bengaluru Airport: ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ನಷ್ಟದಲ್ಲಿ; ಬೆಂಗಳೂರು ಏರ್ಪೋರ್ಟ್ ಅತಿಹೆಚ್ಚು ಲಾಭದಾಯಕ

ಈ ಮೆಸೇಜ್​ನಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಅನಧಿಕೃತ ಆ್ಯಪ್ ಡೌನ್​ಲೋಡ್ ಆಗುತ್ತದೆ. ಅಥವಾ ಆನ್ಲೈನ್ ಫಾರ್ಮ್ ಪ್ರತ್ಯಕ್ಷವಾಗುತ್ತದೆ. ಆ ಆ್ಯಪ್ ಮೂಲಕ ನಿಮ್ಮ ಫೋನ್​ನ ಎಲ್ಲಾ ವೈಯಕ್ತಿಕ ಮಾಹಿತಿಯು ಖದೀಮರಿಗೆ ದೊರಕಿಹೋಗುತ್ತದೆ.

ನಿಮಗೆ ತತ್​ಕ್ಷಣಕ್ಕೆ ಸಾಲ ಸಿಗಬಹುದು. ಆದರೆ, ಬಡ್ಡಿದರ, ಪ್ರೋಸಸಿಂಗ್ ಫೀ ಇತ್ಯಾದಿ ಮಾಹಿತಿಯನ್ನು ಸರಿಯಾಗಿ ನೀಡುವುದಿಲ್ಲ. 1 ಲಕ್ಷ ರೂ ಸಾಲ ನೀಡಿದರೆ 20,000 ರೂನಷ್ಟು ಪ್ರೋಸಸಿಂಗ್ ಫೀ ಮುರಿದುಕೊಳ್ಳಬಹುದು. ಜೊತೆಗೆ ಬಡ್ಡಿದರ ತಿಂಗಳಿಗೆ ಶೇ. 10ಕ್ಕಿಂತಲೂ ಹೆಚ್ಚು ಇರಬಹುದು. ತಡವಾಗಿ ಕಟ್ಟಿದರೆ ಸಿಕ್ಕಾಪಟ್ಟೆ ದಂಡ ವಿಧಿಸಬಹುದು.

ಆನ್ಲೈನ್ ಆ್ಯಪ್​ನವರು ಏನು ಮಾಡಿಯಾರು ಎಂದು ಸುಮ್ಮನಿರುವಂತಿಲ್ಲ. ನಿಮ್ಮ ಜುಟ್ಟು ಜನಿವಾರವನ್ನು ಅವರ ಕೈಗೆ ಕೊಟ್ಟಿರುತ್ತೀರಿ. ನಿಮ್ಮ ಮೊಬೈಲ್​ನಲ್ಲಿರುವ ಫೋಟೋ ಮತ್ತಿತರ ವೈಯಕ್ತಿಕ ಮಾಹಿತಿ ಇಟ್ಟುಕೊಂಡು ನಿಮ್ಮನ್ನು ಬ್ಲ್ಯಾಕ್​ಮೇಲ್ ಮಾಡುತ್ತಾರೆ. ನಿಮಗೆ ಫೋನ್ ಮಾಡಿ ಬೆದರಿಸುತ್ತಾರೆ. ರಿಕವರಿ ಏಜೆಂಟ್​ಗಳು ನಿಮ್ಮ ಮನೆಬಾಗಿಲಿಗೆ ಬಂದು ಧಮಕಿ ಹಾಕುತ್ತಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ

ಲೋನ್ ವಂಚಕರ ಸುಳಿಗೆ ಬೀಳದಿರುವುದು ಹೇಗೆ?

  • ಲೋನ್ ಕೊಡುತ್ತೇವೆಂದು ನಿಮ್ಮನ್ನು ಸಂಪರ್ಕಿಸುವ ಸಂಸ್ಥೆ ಆರ್​ಬಿಐನಲ್ಲಿ ನೊಂದಾಯಿತವಾಗಿದೆಯಾ ಪರಿಶೀಲಿಸಿ
  • ಫೋನ್, ಇಮೇಲ್ ಅಥವಾ ಇನ್ಯಾವುದಾದರೂ ಮೂಲಕ ನಿಮ್ಮ ಕಾರ್ಡ್ ವಿವರ ತಿಳಿಸಬೇಡಿ. ಯಾವ ಒಟಿಪಿ ಇತ್ಯಾದಿಯನ್ನು ಕೊಡಬೇಡಿ.
  • ಸಾಲ ಕೊಡುವ ಸಂಸ್ಥೆಯ ವಿಳಾಸ ನೈಜವಾ ಇಲ್ಲವಾ, ಕಚೇರಿ ಹೊಂದಿದೆಯಾ ಇಲ್ಲವಾ ಪರಿಶೀಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Tue, 5 December 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!