Tax: ಮಾರ್ಚ್ 17ರವರೆಗೆ ಭಾರತದಲ್ಲಿ 18.90 ಲಕ್ಷ ಕೋಟಿ ರೂ ನಿವ್ವಳ ನೇರ ತೆರಿಗೆ ಸಂಗ್ರಹ

Net direct tax collection of 18.90 Lakh Crore Till March 17th: ಸರ್ಕಾರ ಮಾರ್ಚ್ 19ರಂದು ಬಿಡುಗಡೆ ಮಾಡಿದ ಅಂಕಿ ಸಂಖ್ಯೆ ಪ್ರಕಾರ ಏಪ್ರಿಲ್ 1ರಿಂದ ಮಾರ್ಚ್ 17ರವರೆಗೂ ಒಟ್ಟು ನೇರ ತೆರಿಗೆ ಸಂಗ್ರಹ 22.27 ಲಕ್ಷ ಕೋಟಿ ರೂ ಆಗಿದೆ. ಇದರಲ್ಲಿ 3.37 ಲಕ್ಷ ಕೋಟಿ ರೂ ಹಣವನ್ನು ರೀಫಂಡ್ ಮಾಡಲಾಗಿದೆ. ಇನ್ನುಳಿದ ನಿವ್ವಳ ನೇರ ತೆರಿಗೆ ಸಂಗ್ರಹ 18.90 ಲಕ್ಷ ಕೋಟಿ ರೂ ಎನ್ನಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಶೇ. 19.45 ಲಕ್ಷ ಕೋಟಿ ರೂ ಹೆಚ್ಚಳ ಆಗಿದೆ.

Tax: ಮಾರ್ಚ್ 17ರವರೆಗೆ ಭಾರತದಲ್ಲಿ 18.90 ಲಕ್ಷ ಕೋಟಿ ರೂ ನಿವ್ವಳ ನೇರ ತೆರಿಗೆ ಸಂಗ್ರಹ
ನೇರ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 20, 2024 | 11:07 AM

ನವದೆಹಲಿ, ಮಾರ್ಚ್ 20: ಭಾರತದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ (Net Direct Tax Collection) ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಾ ಬಂದಿರುವ ಗಣನೀಯ ಏರಿಕೆ ಮುಂದುವರಿದಿದೆ. ಆದಾಯ ತೆರಿಗೆ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಈ ವರ್ಷ ನಿವ್ವಳ ತೆರಿಗೆ ಶೇ. 20ರಷ್ಟು ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಮಾರ್ಚ್ 17ರವರೆಗೆ 18.90 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗಿದೆ. ಇದು ನಿವ್ವಳ ನೇರ ತೆರಿಗೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದರಲ್ಲಿ ಶೇ. 19.88ರಷ್ಟು ಹೆಚ್ಚಾಗಿದೆ. ಈ ಹಣಕಾಸು ವರ್ಷ ಮುಗಿಯಲು ಇನ್ನೂ ಎರಡು ವಾರ ಇದೆ. ನಿವ್ವಳ ತೆರಿಗೆ ಸಂಗ್ರಹ 20 ಲಕ್ಷ ಕೋಟಿಗೆ ಸಮೀಪ ಹೋಗುವ ಸಾಧ್ಯತೆ ಕಾಣುತ್ತಿದೆ. ಸರ್ಕಾರದ ಅಂದಾಜು ಪ್ರಕಾರ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ 19.45 ಲಕ್ಷ ಕೋಟಿ ರೂ ಆಗಬಹುದು.

ಒಟ್ಟು ನೇರ ತೆರಿಗೆ ಸಂಗ್ರಹ ಮಾರ್ಚ್ 17ರವರೆಗೂ 22.27 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದರಲ್ಲಿ ಶೇ. 18.74ರಷ್ಟು ಹೆಚ್ಚಳವಾಗಿದೆ. ಈ ಹಣದಲ್ಲಿ 3.37 ಲಕ್ಷ ಕೋಟಿ ರೂನಷ್ಟು ಹಣವನ್ನು ರೀಫಂಡ್ ಮಾಡಲಾಗಿದೆ. ಅದನ್ನು ಕಳೆದು ಉಳಿದ ನಿವ್ವಳ ನೇರ ತೆರಿಗೆ ಮೊತ್ತ 18,90,259 ರೂ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ವಿರೋಧದ ಬಳಿಕ ಪ್ಯೂರ್ ವೆಜ್ ಡೆಲಿವರಿ ಹಿಂಪಡೆಯಲು ಜೊಮಾಟೋ ನಿರ್ಧಾರ; ಪ್ರತ್ಯೇಕ ಹಸಿರು ಸಮವಸ್ತ್ರವೂ ಇಲ್ಲ

ಮಾರ್ಚ್ 17ರವರೆಗಿನ ನಿವ್ವಳ ನೇರ ತೆರಿಗೆ ಸಂಗ್ರಹದ ವಿವರ

  • ಕಾರ್ಪೊರೇಶನ್ ತೆರಿಗೆ (ಸಿಐಟಿ): 9,14,469 ಕೋಟಿ ರೂ
  • ವೈಯಕ್ತಿಕ ಆದಾಯ ತೆರಿಗೆ (ಪಿಐಟಿ): 9,72,224 ಕೋಟಿ ರೂ

ಇಲ್ಲಿ ಪರ್ಸನಲ್ ಇನ್ಕಮ್ ಟ್ಯಾಕ್ಸ್​ನಲ್ಲಿ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಕೂಡ ಸೇರುತ್ತದೆ.

2022-23ರ ಹಣಕಾಸು ವರ್ಷದಲ್ಲಿ, ಏಪ್ರಿಲ್ 1ರಿಂದ ಮಾರ್ಚ್ 17ರವರೆಗೆ 15,76,776 ಕೋಟಿ ರೂ ನಿವ್ವಳ ನೇರ ತೆರಿಗೆ ಸಂಗ್ರಹ ಆಗಿತ್ತು. ಈ ವರ್ಷ ಶೇ. 19.88ರಷ್ಟು ಹೆಚ್ಚಾಗಿದೆ ಎಂದು ನೇರ ತೆರಿಗೆ ಮಂಡಳಿಯಾದ ಸಿಬಿಡಿಟಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಯುನಿಲಿವರ್​ನಿಂದ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕ; 7,500 ಮಂದಿ ಲೇ ಆಫ್ ಸಾಧ್ಯತೆ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಭಾರತದ ಜಿಡಿಪಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಶೇ. 18ರಷ್ಟು ಇರುತ್ತದೆ. ಆದರೆ, ಬಹಳಷ್ಟು ದೇಶಗಳು ಭಾರತದಕ್ಕಿಂತ ಹೆಚ್ಚಿನ ಜಿಡಿಪಿ ಮತ್ತು ತೆರಿಗೆ ಸಂಗ್ರಹ ಪರಿಮಾಣ ಹೊಂದಿವೆ. ಡೆನ್ಮಾರ್ಕ್ ದೇಶದಲ್ಲಿ ಅಲ್ಲಿಯ ಜಿಡಿಪಿಯ ಶೇ. 44ರಷ್ಟು ಮೊತ್ತವು ತೆರಿಗೆಗಳಿಂದಲೇ ತುಂಬಿದೆ. ಇಲ್ಲಿ ಇರುವ ತೆರಿಗೆ ಡೈರೆಕ್ಟ್ ಟ್ಯಾಕ್ಸ್ ಜೊತೆಗೆ ಜಿಎಸ್​ಟಿ ಇತ್ಯಾದಿ ಇನ್​ಡೈರೆಕ್ಟ್ ಟ್ಯಾಕ್ಸ್​ಗಳನ್ನೂ ಒಳಗೊಳ್ಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ