AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Small Savings Account: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಯಥಾ ಸ್ಥಿತಿ ಉಳಿಸಿದ ಕೇಂದ್ರ ಹಣಕಾಸು ಸಚಿವಾಲಯ

2022ನೇ ಇಸವಿಯ ಏಪ್ರಿಲ್​ನಿಂದ ಜೂನ್ ಅವಧಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸರ್ಕಾರದಿಂದ ತಿಳಿಸಲಾಗಿದೆ.

Small Savings Account: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಯಥಾ ಸ್ಥಿತಿ ಉಳಿಸಿದ ಕೇಂದ್ರ ಹಣಕಾಸು ಸಚಿವಾಲಯ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 01, 2022 | 7:56 AM

Share

ಹಣಕಾಸು ಸಚಿವಾಲಯವು (Finance Ministry) 2022ರ ಏಪ್ರಿಲ್​ನಿಂದ ಜೂನ್ ಅವಧಿಯ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಬದಲಾಯಿಸದೆ ಹಾಗೇ ಉಳಿಸಿದೆ. ವಿವಿಧ ಇನ್​ಸ್ಟ್ರುಮೆಂಟ್​ಗಳ ಮೇಲಿನ ಬಡ್ಡಿ ದರಗಳು ಶೇ 4.0ರಿಂದ ಶೇ 7.6ರ ವರೆಗೆ ಇರುತ್ತದೆ. 2022ರ ಏಪ್ರಿಲ್​ನಿಂದ ಜೂನ್ ತನಕದ ಸಣ್ಣ ಉಳಿತಾಯ ಇನ್​ಸ್ಟ್ರುಮೆಂಟ್​ಗಳ ಬಡ್ಡಿ ದರದ ವಿವರ ಇಲ್ಲಿದೆ:

ಉಳಿತಾಯ ಠೇವಣಿ ಶೇ 4.0 ಒಂದು ವರ್ಷದ ಟರ್ಮ್ ಡೆಪಾಸಿಟ್ ಶೇ 5.5 ಎರಡು ವರ್ಷಗಳ ಟರ್ಮ್ ಡೆಪಾಸಿಟ್ ಶೇ 5.5 ಮೂರು ವರ್ಷಗಳ ಟರ್ಮ್ ಡೆಪಾಸಿಟ್ ಶೇ 5.5 ಐದು ವರ್ಷಗಳ ಟರ್ಮ್ ಡೆಪಾಸಿಟ್ ಶೇ 6.7 ಐದು ವರ್ಷಗಳ ರೆಕರಿಂಗ್ ಡೆಪಾಸಿಟ್ ಶೇ 5.8 ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ 7.4 ಮಾಸಿಕ ಆದಾಯ ಖಾತೆ ಶೇ 6.6 ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್​ಎಸ್​ಸಿ) ಶೇ 6.8 ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (ಪಿಪಿಎಫ್) ಶೇ 7.1 ಕಿಸಾನ್ ವಿಕಾಸ್ ಪತ್ರ ಶೇ 6.9 ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಶೇ 7.6

ಇದು ಸತತ ಎಂಟನೇ ತ್ರೈಮಾಸಿಕವಾಗಿದ್ದು, ಸಣ್ಣ ಉಳಿತಾಯ ಇನ್​ಸ್ಟ್ರುಮೆಂಟ್​ ಮೇಲಿನ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದರೂ ಈ ಬಡ್ಡಿದರಗಳೊಂದಿಗೆ ಸಂಬಂಧಿಸಿರುವ ಸರ್ಕಾರಿ ಬಾಂಡ್ ಯೀಲ್ಡ್​ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಡ್ಡಿದರಗಳು ಸರ್ಕಾರವು ನಿಗದಿಪಡಿಸಿದಾಗ ಹೋಲಿಸಬಹುದಾದ ಮೆಚ್ಯೂರಿಟಿಗಳ ಈ ಸೆಕ್ಯೂರಿಟಿಗಳ ಯೀಲ್ಡ್​ಗಿಂತ 0-100 ಬೇಸಿಸ್ ಪಾಯಿಂಟ್‌ಗಳ ಸ್ಪ್ರೆಡ್​ನಲ್ಲಿ ಸರ್ಕಾರಿ ಸೆಕ್ಯೂರಿಟಿಗಳ ಮೇಲಿನ ಮಾರುಕಟ್ಟೆ ಇಳುವರಿಗಳಿಗೆ ಜೋಡಣೆ ಮಾಡಲಾಗಿದೆ. 2021ರ ಡಿಸೆಂಬರ್​ನಿಂದ 2022ರಲ್ಲಿ, ಇದು ಏಪ್ರಿಲ್-ಜೂನ್ 2022ರ ಸಣ್ಣ ಉಳಿತಾಯ ಬಡ್ಡಿದರಗಳ ಉಲ್ಲೇಖದ ಅವಧಿಯಾಗಿದೆ. ಐದು-ವರ್ಷದ ಸರ್ಕಾರಿ ಬಾಂಡ್‌ಗಳ ಯೀಲ್ಡ್ ತೀವ್ರವಾಗಿ ಏರಿದ್ದು, ಅದರೊಂದಿಗೆ ಶೇ 5.74ರಷ್ಟು, 2026 ಬಾಂಡ್ ಈ ಅವಧಿಯಲ್ಲಿ 36 ಬೇಸಿಸ್ ಪಾಯಿಂಟ್‌ಗಳನ್ನು, ಅಂದರೆ ಶೇ 5.69ರಿಂದ ಶೇಕಡಾ 6.05ಕ್ಕೆ ಜಿಗಿದಿದೆ.

ಅದೇ ಅವಧಿಯಲ್ಲಿ 10-ವರ್ಷದ ಬಾಂಡ್ ಯೀಲ್ಡ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ 44 ಬೇಸಿಸ್ ಪಾಯಿಂಟ್‌ ಏರಿಕೆಯಾಗಿದೆ. ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಸಿಬ್ಬಂದಿ ತಮ್ಮ ‘ಸ್ಟೇಟ್ ಆಫ್ ದಿ ಎಕಾನಮಿ’ ಲೇಖನದಲ್ಲಿ ಸಣ್ಣ ಉಳಿತಾಯ ಇನ್​ಸ್ಟ್ರುಮೆಂಟ್​ಗಳ ಮೇಲಿನ ಬಡ್ಡಿದರಗಳನ್ನು ಏಪ್ರಿಲ್-ಜೂನ್ 2022ಕ್ಕೆ ಸೂತ್ರ-ನಿರ್ದೇಶಿತ ದರಗಳಿಗೆ ಅನುಗುಣವಾಗಿ ತರಲು 9-118 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಬೇಕು ಎಂದು ಗಮನಿಸಿದ್ದರು. ಸಣ್ಣ ಉಳಿತಾಯ ಬಡ್ಡಿದರಗಳನ್ನು ಹೊಂದಿಸಲು ಸೂತ್ರ ಆಧಾರಿತ ವಿಧಾನಕ್ಕೆ ಬದ್ಧವಾಗಿರುವಂತೆ ಕೇಂದ್ರೀಯ ಬ್ಯಾಂಕ್ ನಿಯತಕಾಲಿಕವಾಗಿ ಸರ್ಕಾರಕ್ಕೆ ಸಲಹೆ ನೀಡಿದೆ. ಅಕ್ಟೋಬರ್‌ನಲ್ಲಿ ತನ್ನ ಹಣಕಾಸು ನೀತಿ ವರದಿಯಲ್ಲಿ ಆರ್​ಬಿಐ ಸಣ್ಣ ಉಳಿತಾಯ ಯೋಜನೆಗಳು ಮತ್ತು ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ವ್ಯತ್ಯಾಸವು ಹಿಂದಿನ 2018ರಿಂದ ಬ್ಯಾಂಕ್ ಠೇವಣಿಗಳನ್ನು ಮೀರಿದ ಬೆಳವಣಿಗೆಗೆ ಕಾರಣವಾಗಿದೆ ಎಂದು ಎಚ್ಚರಿಸಿದೆ. ಸಾಲಕ್ಕಾಗಿ ಬೇಡಿಕೆ ಬಂದಾಗಲೆಲ್ಲಾ ವಿತ್ತೀಯ ಪ್ರಸರಣಕ್ಕಾಗಿ ಇದು ಪರಿಣಾಮ ಬೀರುತ್ತದೆ ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?

Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ