ಫ್ರಾಂಟಿಯರ್ ಮಾಡಲ್​ಗಳ ಆಳ ಅಗಲ ಗೊತ್ತಿರೋದು 5,000 ಮಂದಿಗೆ ಮಾತ್ರವಾ? ಹೆಚ್ಚಿನ ಮಂದಿಗೆ ನಿಲುಕದ್ದಾಗಿದೆ ಎಐ ಸಾಮರ್ಥ್ಯ

ಎಐ ಸಂಶೋಧಕ ಆಂಡ್ರೆಜ್ ಕರ್ಪಾತಿ ಪ್ರಕಾರ, ಉದ್ಯಮದ ಅತ್ಯಂತ ನುರಿತ ತಜ್ಞರಿಗೆ ವರ್ಷಗಳೇ ಹಿಡಿಯುವ ಕಠಿಣ ಕೆಲಸಗಳನ್ನು ಕೆಲವೇ ವಾರಗಳಲ್ಲಿ ಪೂರೈಸುವ ಅತ್ಯಾಧುನಿಕ ಎಐ ಏಜೆಂಟ್‌ಗಳ ಪ್ರವೇಶ ಜಗತ್ತಿನಲ್ಲಿ ಕೇವಲ 5,000 ಜನರಿಗೆ ಮಾತ್ರ ಲಭ್ಯವಿದೆ. ಎಐ ಬಳಸುತ್ತಿರುವ ಹೆಚ್ಚಿನವರಿಗೆ ಗೊತ್ತಿರೋದು ಫ್ರೀ ವರ್ಷನ್​ನ ಬೇಸಿಕ್ ಎಐ ಮಾಡಲ್​ಗಳು ಮಾತ್ರ ಎಂದು ಹೇಳಲಾಗುತ್ತಿದೆ.

ಫ್ರಾಂಟಿಯರ್ ಮಾಡಲ್​ಗಳ ಆಳ ಅಗಲ ಗೊತ್ತಿರೋದು 5,000 ಮಂದಿಗೆ ಮಾತ್ರವಾ? ಹೆಚ್ಚಿನ ಮಂದಿಗೆ ನಿಲುಕದ್ದಾಗಿದೆ ಎಐ ಸಾಮರ್ಥ್ಯ
ಕೃತಕ ಬುದ್ಧಿಮತ್ತೆ
Image Credit source: Getty Images

Updated on: Oct 12, 2026 | 4:09 PM

ನವದೆಹಲಿ, ಅಕ್ಟೋಬರ್ 12: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅತೀವ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದ್ದು, ಅದನ್ನು ನಿಧಾನಗೊಳಿಸಬೇಕು ಎನ್ನುವಂತಹ ಸಲಹೆಗಳನ್ನು ಪರಿಣಿತರು ಆಗಾಗ್ಗೆ ಕೊಡುತ್ತಿರುವುದುಂಟು. ಆಂಥ್ರೋಪಿಕ್​ನ ಎಐ ಸಂಶೋಧಕರಾದ ಆಂಡ್ರೇ ಕರ್ಪಾತಿ (Andrej Karpathy) ಅವರು ಎಐನ ನೈಜ ಸಾಮರ್ಥ್ಯ ಏನೆಂಬುದನ್ನು ಜಾಹೀರುಗೊಳಿಸಿದ್ದಾರೆ. ಅವರ ಪ್ರಕಾರ, ಹೆಚ್ಚಿನ ಮನುಷ್ಯರಿಗೆ ಅತ್ಯಾಧುನಿಕ ಎಐನ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಲು ಆಗದಂತಾಗಿದೆ. ಅಂದರೆ, ಹೆಚ್ಚಿನವರಿಗೆ ನಿಲುಕಷ್ಟು ವೇಗವಾಗಿ ಎಐ ಬೆಳವಣಿಗೆ ಆಗಿದೆ.

ಹೆಚ್ಚಿನವರಿಗೆ ಎಐ ಎಂದರೆ ಫ್ರೀ ವರ್ಶನ್ ಎಐ… ವಾಸ್ತವದಲ್ಲಿ ಅದಲ್ಲ…

ಕೃತಕ ಬುದ್ಧಿಮತ್ತೆಯ ಮಾದರಿಗಳು ಸಾರ್ವಜನಿಕರಿಗೆ ಲಭ್ಯವಾಗಲು ಆರಂಭಿಸಿ ಮೂರ್ನಾಲ್ಕು ವರ್ಷಗಳಾಗಿವೆ. ಆದರೆ, 600 ಕೋಟಿ ಜನರು ಇನ್ನೂ ಕೂಡ ಎಐ ಮಾಡಲ್​ಗಳನ್ನು ಬಳಸಿಯೇ ಇಲ್ಲ. ಅಂದರೆ, ಶೇ. 75ರಷ್ಟು ಜನರಿಗೆ ಎಲ್​ಎಲ್​ಎಂಗಳೇನು ಎನ್ನುವ ಅರಿವೇ ಇಲ್ಲವಂತೆ.

ಇದನ್ನೂ ಓದಿ: ಎಐ ಮಾಡಲ್​ಗಳು ದಾರಿತಪ್ಪಿ ಹೋಗುವುದನ್ನು ತಡೆಯಲು ಎಮರ್ಜೆನ್ಸಿ ಬ್ರೇಕ್ ಬೇಕು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಸುಮಾರು 100-200 ಕೋಟಿ ಜನರು ಚ್ಯಾಟ್​ಜಿಪಿಟಿ ರೀತಿ ಬೇಸಿಕ್ ಆಗಿರುವ ಉಚಿತ ಎಐ ಮಾಡಲ್​ಗಳನ್ನು ಆಗೊಮ್ಮೆ ಈಗೊಮ್ಮೆ ಬಳಸುವವರಾಗಿದ್ದಾರೆ. ಇವರಿಗೆ ಎಐ ಮಾಡಲ್​ಗಳೆಂದರೆ ಗೂಗಲ್ ಸರ್ಚ್​ಗಿಂತ ಒಂದು ಕೈ ಮೇಲು. ಮಾಹಿತಿ ಹುಡುಕಲು, ಬರವಣಿಗೆ ನೆರವು ಇತ್ಯಾದಿ ಬಳಸುತ್ತಾರೆ ಎಂದು ಆಂಥ್ರೋಪಿಕ್ ಎಐ ರಿಸರ್ಚರ್ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳುತ್ತಾರೆ.

ಎಐನ ನಿಜವಾದ ಶಕ್ತಿಯ ಅರಿವು ಇರುವುದು ಕೆಲವರಿಗೆ ಮಾತ್ರ…

ಆಂಡ್ರೆ ಕರ್ಪಾತಿ ತಮ್ಮ ಪೋಸ್ಟ್​ನಲ್ಲಿ ಬಹಳ ಅಚ್ಚರಿ ಎನಿಸುವ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ ಅದೆಷ್ಟು ಸುಧಾರಣೆ ಕಂಡಿದೆ ಎಂದರೆ, ಅದರ ಆಳ ಅಗಲ ಏನೆಂದು ಬಲ್ಲವರ ಸಂಖ್ಯೆ, ಮತ್ತು ಫ್ರಾಂಟಿಯೆರ್ ಗ್ರೇಡ್ ಎಲ್​ಎಲ್​ಎಂಗಳನ್ನು ಸಮರ್ಥವಾಗಿ ಬಳಸುವವರ ಸಂಖ್ಯೆ ಜಗತ್ತಿನಲ್ಲಿ ಹೆಚ್ಚೆಂದರೆ 5,000 ಇರಬಹುದು.

ಇದನ್ನೂ ಓದಿ: ಲಂಗು ಲಗಾಮು ತಪ್ಪಿದ ಎಐ ಏಜೆಂಟ್​ಗಳು; ಸರ್ಕಾರಿ ವೆಬ್​ಸೈಟ್​ಗಳ ಮೇಲೆಯೇ ದಾಳಿ; ಕಂಗೆಟ್ಟ ಓಪನ್​ಎಐ

ಬಹುತೇಕ ಮನುಷ್ಯರಿಗೆ ಫ್ರಾಂಟಿಯರ್ ಮಾಡಲ್​ಗಳ ಕೆಲಸಗಳ ಸಾಮರ್ಥ್ಯ ಅರ್ಥೈಸಿಕೊಳ್ಳುವಷ್ಟು ಗ್ರಹಿಕೆ ಇಲ್ಲ. ಅವರ ಗ್ರಹಿಕೆಗೆ ನಿಲುಕಷ್ಟು ಮುಂದುವರಿದಿದೆ ಎಐ ಮಾಡಲ್​ಗಳ ಶಕ್ತಿ ಎಂದು ಕರ್ಪಾತಿ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us