ಚಿನ್ನದ ಮೇಲಿನ ಹೂಡಿಕೆ (Investment in gold) ಈಗ ಲಾಭದಾಯಕ ಮತ್ತು ಸುರಕ್ಷಿತ ಎನಿಸಿದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಭೌತಿಕ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಗೋಲ್ಡ್ ಬಾಂಡ್, ಗೋಲ್ಡ್ ಫಂಡ್ಗಳ ಮೇಲೆ ಹೂಡಿಕೆ ಮಾಡಬಹುದು. ಫಂಡ್ಗಳಲ್ಲಿ ಗೋಲ್ಡ್ ಇಟಿಎಫ್ಗಳ ಜನಪ್ರಿಯತೆ ಹೆಚ್ಚುತ್ತಿದೆ. ವರ್ಷಕ್ಕೆ ಶೇ. 10ರಿಂದ 20ರಷ್ಟು ರಿಟರ್ನ್ ಕೊಡುತ್ತಿವೆ ಈ ಗೋಲ್ಡ್ ಇಟಿಎಫ್ಗಳು. 2024ರ ಏಪ್ರಿಲ್ ತಿಂಗಳಲ್ಲಿ ಗೋಲ್ಡ್ ಇಟಿಎಫ್ಗಳಿಂದ ಹೂಡಿಕೆದಾರರು 396 ಕೋಟಿ ರೂ ಹಣ ಹಿಂಪಡೆದಿದ್ದಾರೆ. ಅಂದರೆ, ಜನರು ತಮ್ಮ ಹೂಡಿಕೆಯನ್ನು ಮಾರಿ ಲಾಭ ಮಾಡಿಕೊಂಡಿದ್ದಾರೆ. 2023ರ ಮಾರ್ಚ್ ತಿಂಗಳ ನಂತರ ಮೊದಲ ಬಾರಿಗೆ ಒಂದು ತಿಂಗಳಲ್ಲಿ ಹೊರಹೋಗಿರುವ ದೊಡ್ಡ ಮೊತ್ತದ ಹೂಡಿಕೆ ಇದಾಗಿದೆ.
ಇಟಿಎಫ್ ಎಂದರೆ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್. ಮ್ಯೂಚುವಲ್ ಫಂಡ್ ರೀತಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆಯಾದರೂ ಈ ಫಂಡ್ ಅನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸಬಹುದು. ಗೋಲ್ಡ್ ಇಟಿಎಫ್ ಎಂಬುದು ಚಿನ್ನದ ಬೆಲೆಯ ಪ್ರಕಾರ ರಿಟರ್ನ್ ಕೊಡುವಂತಹ ಫಂಡ್ ಆಗಿರುತ್ತದೆ.
ಇಲ್ಲಿ ಹೂಡಿಕೆದಾರರ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಇದರಿಂದ ಬಂದ ಲಾಭವು ಹೂಡಿಕೆದಾರರಿಗೆ ವರ್ಗಾವಣೆ ಆಗುತ್ತದೆ. ಹೀಗಾಗಿ, ಚಿನ್ನದ ಬೆಲೆಗೆ ಅನುಗುಣವಾಗಿ ನೀವು ಲಾಭ ಮಾಡುತ್ತೀರಿ.
ಇದನ್ನೂ ಓದಿ: ಭಾರತದ ರಫ್ತು ಮತ್ತು ಆಮದು ಎರಡೂ ಏರಿಕೆ; ಟ್ರೇಡ್ ಡೆಫಿಸಿಟ್ ಹೆಚ್ಚಳಕ್ಕೆ ಕಾರಣವಾದ ಚಿನ್ನ
ಗೋಲ್ಡ್ ಇಟಿಎಫ್ಗಳಲ್ಲಿ ಇರುವ ಒಟ್ಟು ಹೂಡಿಕೆ ಏಪ್ರಿಲ್ ತಿಂಗಳಲ್ಲಿ 32,789 ಕೋಟಿ ರೂನಷ್ಟಿದೆ. ಕಳೆದ ಒಂದು ವರ್ಷದಿಂದ ಚಿನ್ನದ ಬೆಲೆ ಭರ್ಜರಿಯಾಗಿ ಹೆಚ್ಚಿದೆ. ಚಿನ್ನ ಯಾವಾಗ ಮಾರಿ ಲಾಭ ಮಾಡಬಹುದು ಎಂಬುದು ಆ ಫಂಡ್ ಮ್ಯಾನೇಜರ್ಗಳ ಕೌಶಲ್ಯಕ್ಕೆ ಬಿಟ್ಟಿದ್ದು. ಹೀಗಾಗಿ, ಕೆಲ ಗೋಲ್ಡ್ ಇಟಿಎಫ್ಗಳು ಹೆಚ್ಚು ಲಾಭ ತಂದಿವೆ, ಕೆಲ ಇಟಿಎಫ್ಗಳು ಕಡಿಮೆ ಲಾಭ ತಂದಿವೆ.
ಆರ್ಬಿಐನಿಂದ ನಿರ್ವಹಿಸಲಾಗುತ್ತಿರುವ ಸಾವರೀನ್ ಗೋಲ್ಡ್ ಬಾಂಡ್ ಯೋಜನೆ ಬಗ್ಗೆ ಕೇಳಿರಬಹುದು. ಇದೂ ಕೂಡ ಚಿನ್ನದ ಬೆಲೆಯ ಮೇಲೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವ ಸ್ಕೀಮ್. ಆದರೆ, ಇದರ ಲಾಕ್ ಇನ್ ಅವಧಿ ಎಂಟು ವರ್ಷ ಇರುತ್ತದೆ.
ಆದರೆ, ಗೋಲ್ಡ್ ಇಟಿಎಫ್ನಲ್ಲಿ ಈ ರೀತಿ ಲಾಕ್ ಇನ್ ಪೀರಿಯಡ್ ಇರುವುದಿಲ್ಲ. ಯಾವಾಗ ಬೇಕಾದರೂ ಹೂಡಿಕೆ ಹಿಂಪಡೆಯಬಹುದು. ಹೀಗಾಗಿ, ಹೂಡಿಕೆದಾರರಿಗೆ ತನ್ನ ರಿಟರ್ನ್ ಮೇಲೆ ಹೆಚ್ಚಿನ ಮಟ್ಟಿಗೆ ಹಿಡಿತ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ