ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?

Mutual Funds and Equities and nominee rules: ಮ್ಯೂಚುವಲ್ ಫಂಡ್ ಮತ್ತು ಈಕ್ವಿಟಿ ಆಸ್ತಿಗಳಿಗೆ ನಾಮಿನಿ ಹೆಸರಿಸಬೇಕು, ಅಥವಾ ನಾಮಿನಿ ಬೇಡ ಎಂದಾದರೂ ಆಯ್ಕೆ ಮಾಡಿಕೊಳ್ಳಬೇಕು. ನಾಮಿನಿ ಹೆಸರಿಸದ ಆಸ್ತಿಗಳಿದ್ದರೆ, ವ್ಯಕ್ತಿಯ ವಾರಸುದಾರರು ಅದಕ್ಕೆ ಕ್ಲೇಮ್ ಸಲ್ಲಿಸಬಹುದು. ಆದರೆ, ಕಾನೂನು ಪ್ರಕ್ರಿಯೆ ಹಲವು ತಿಂಗಳುಗಳೇ ಆಗಬಹುದು, ವರ್ಷಕ್ಕಿಂತಲೂ ಹೆಚ್ಚು ಸಮಯ ಹಿಡಿಯಬಹುದು.

ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?
ಮ್ಯೂಚುವಲ್ ಫಂಡ್
Image Credit source: Shutterstock

Updated on: Apr 14, 2026 | 8:02 PM

ಪ್ರತಿಯೊಂದು ಹಣಕಾಸು ಸ್ಕೀಮ್​ಗೂ ನಾಮಿನಿ ಹೆಸರಿಸುವುದು ಕಡ್ಡಾಯ. ಬ್ಯಾಂಕ್ ಅಕೌಂಟ್​ಗೂ ನಾಮಿನಿ ಕೇಳಲಾಗುತ್ತದೆ. ಎಫ್​ಡಿ ಇತ್ಯಾದಿ ಯಾವುದೇ ಪ್ಲಾನ್​ಗಳಿಗೂ ನಾಮಿನಿ ಹೆಸರಿಸಬೇಕು. ಹಾಗೆಯೇ, ಮ್ಯೂಚುವಲ್ ಫಂಡ್ ಹೂಡಿಕೆದಾರರು (Mutual fund investors) ಮತ್ತು ಡೀಮ್ಯಾಟ್ ಖಾತೆದಾರರು ಕೂಡ ನಾಮಿನಿ ಹೆಸರಿಸಬೇಕು. ನಾಮಿನಿ ಬೇಡ ಎನಿಸಿದರೆ ಅದಕ್ಕೂ ಆಯ್ಕೆ ಇರುತ್ತದೆ. ಸೆಬಿ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ನಾಮಿನಿ ಕಾಲಂ ಅನ್ನು ಖಾಲಿ ಬಿಡುವಂತಿಲ್ಲ. ನಾಮಿನಿ ಹೆಸರಿಸಬೇಕು, ಅಥವಾ ನಾಮಿನಿ ಬೇಡವೆಂದು ನಮೂದಿಸಬೇಕು.

ನಾಮಿನಿ ಹೆಸರಿಸಿಲ್ಲವೆಂದರೆ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ಏನಾಗುತ್ತದೆ?

ಒಂದು ವೇಳೆ ಹೂಡಿಕೆದಾರನು ಸಾಯುವ ಮುನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾಮಿನಿ ಹೆಸರಿಸಿಲ್ಲದಿದ್ದರೆ ಮ್ಯೂಚುವಲ್ ಫಂಡ್​ಗಳಿಗೆ ಏನಾಗುತ್ತದೆ ಎನ್ನುವ ಪ್ರಶ್ನೆ ಸಹಜ. ಈ ಆಸ್ತಿ ಹಾಗೆಯೇ ಉಳಿದಿರುತ್ತದೆ. ಹೂಡಿಕೆದಾರನ ವಾರಸುದಾರರಿಗೆ ಅದನ್ನು ವರ್ಗಾಯಿಸುವ ಅವಕಾಶ ಇರುತ್ತದೆ. ಅದರ ಪ್ರಕ್ರಿಯೆ ಸ್ವಲ್ಪ ಸಂಕೀರ್ಣವಾಗಿರುತ್ತದೆ. ಶೀಘ್ರದಲ್ಲಿ ಆಗುವ ಕೆಲಸ ಅಲ್ಲ.

ಇದನ್ನೂ ಓದಿ: ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್

ವಾರಸುದಾರರು ಫಂಡ್ ವರ್ಗಾಯಿಸಿಕೊಳ್ಳಲು ಏನು ಮಾಡಬೇಕು?

ಹೂಡಿಕೆದಾರರು ಮೃತಪಟ್ಟಿದ್ದು, ಅವರ ಆಸ್ತಿಯನ್ನು ವರ್ಗಾಯಿಸಿಕೊಳ್ಳಬೇಕಾದರೆ, ತಾವು ಕಾನೂನು ರೀತ್ಯಾ ವಾರಸುದಾರರೆಂಬುದನ್ನು ನಿರೂಪಿಸಬೇಕು. ಸಕ್ಸಶನ್ ಸರ್ಟಿಫಿಕೇಟ್ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗಬಹುದು. ಈ ಸಕ್ಸಶನ್ ಸರ್ಟಿಫಿಕೇಟ್ ಪಡೆಯಲು ತಿಂಗಳುಗಳೇ ಆಗಬಹುದು. ಅಲ್ಲಿಯವರೆಗೆ ಹೂಡಿಕೆ ಆಸ್ತಿಗಳು ಹಾಗೆಯೇ ಉಳಿದಿರುತ್ತವೆ.

ನಾಮಿನಿ ಇಲ್ಲದಿದ್ದ ಸಂದರ್ಭದಲ್ಲಿ ವಾರಸುದಾರರು ಡೆತ್ ಸರ್ಟಿಫಿಕೇಟ್ ಸಲ್ಲಿಸಬೇಕು. ತಮ್ಮ ಗುರುತಿನ ದಾಖಲೆ, ಹಾಗೂ ಮೃತರಿಗೆ ತಾನು ಯಾವ ಸಂಬಂಧಿ ಎಂಬುದನ್ನು ತೋರಿಸುವ ದಾಖಲೆ ಕೊಡಬೇಕು. ವಿಲ್ ಇದ್ದಾಗ ಅದಕ್ಕೆ ಕೋರ್ಟ್​ನಿಂದ ದೃಢೀಕರಣ ಪಡೆಯಬೇಕು. ವಿಲ್ ಇಲ್ಲದಿದ್ದಾಗ ಕೋರ್ಟ್​ನಿಂದಲೇ ಸಕ್ಸಶನ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.

ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ಸಣ್ಣ ಮೊತ್ತದ ಹೂಡಿಕೆಯಾದರೆ ಕೆಲ ಮ್ಯೂಚುವಲ್ ಫಂಡ್ ಸಂಸ್ಥೆಗಳು ನೋಟರಿ ಮಾಡಿಸಿದ ಇನ್​ಡೆಮ್ನಿಟಿ ಬಾಂಡ್ ಮತ್ತು ಅಫಿಡವಿಟ್ ಸ್ವೀಕರಿಸಿ, ಆಸ್ತಿ ವರ್ಗಾವಣೆ ಮಾಡುವ ಅವಕಾಶ ಇರುತ್ತದೆ. ಆದರೆ, ಹೂಡಿಕೆ ಮೊತ್ತ ದೊಡ್ಡದಿದ್ದಾಗ ಎಲ್ಲಾ ಕಾನೂನು ಕ್ರಮಗಳನ್ನು ಅನುಸರಿಸಲೇಬೇಕಾಗುತ್ತದೆ. ಒಳ್ಳೆಯ ವಕೀಲರ ಮೂಲಕ ಕೋರ್ಟ್​ನಿಂದ ಅನುಮೋದನೆ ಪಡೆಯುವುದು ಅನಿವಾರ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us