AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್

Premature redemption offer for 2019-20 SGB Series-V bonds: ಆರ್​ಬಿಐನಿಂದ ವಿತರಿಸಲಾಗುತ್ತಿದ್ದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಹೂಡಿಕೆದಾರರಿಗೆ ಭರ್ಜರಿ ಲಾಭ ತರುತ್ತಿತ್ತು. 2019ರ ಏಪ್ರಿಲ್ 15ರಂದು ಬಿಡುಗಡೆ ಮಾಡಿದ್ದ ಗೋಲ್ಡ್ ಬಾಂಡ್ 2027ಕ್ಕೆ ಮೆಚ್ಯೂರ್ ಆಗುತ್ತದೆ. ಈಗ ಪ್ರೀಮೆಚ್ಯೂರ್ ಆಗಿ ವಿತ್​ಡ್ರಾ ಮಾಡಿಕೊಳ್ಳಲು ಆಫರ್ ಕೊಡಲಾಗಿದೆ. ಆರೂವರೆ ವರ್ಷದಲ್ಲಿ ಯೂನಿಟ್ ಮೌಲ್ಯ 3,738 ರೂನಿಂದ 15,002 ರೂಗೆ ಹೆಚ್ಚಿದೆ.

ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್
ಸಾವರಿನ್ ಗೋಲ್ಡ್ ಬಾಂಡ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 14, 2026 | 4:40 PM

Share

ನವದೆಹಲಿ, ಏಪ್ರಿಲ್ 14: ಬಹಳ ಜನಪ್ರಿಯವಾಗುತ್ತಿದ್ದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್​ನ 2019-20ರ ಸರಣಿ-5ರ ಗೋಲ್ಡ್ ಬಾಂಡ್​ಗಳನ್ನು (SGB Series-V) ನಾಳೆ (2026ರ ಏಪ್ರಿಲ್ 15) ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಆರ್​ಬಿಐ (RBI) ಈ ಬಾಂಡ್​ಗಳನ್ನು 2019ರ ಏಪ್ರಿಲ್ 15ರಂದು ವಿತರಣೆ ಮಾಡಿತ್ತು. ಎಂಟು ವರ್ಷಕ್ಕೆ, ಅಂದರೆ 2027ರ ಏಪ್ರಿಲ್ 15ಕ್ಕೆ ಇದರ ಮೆಚ್ಯೂರಿಟಿ ಡೇಟ್ ಇರುವುದು. ಈಗ ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಳ್ಳಬೇಕೆನ್ನುವವರಿಗೆ ಆಫರ್ ಕೊಡಲಾಗಿದೆ.

ಎಸ್​ಜಿಬಿ ಬಾಂಡ್ ಮೌಲ್ಯ 3,738 ರೂನಿಂದ 15,009 ರೂಗೆ

2019ರ ಏಪ್ರಿಲ್ 15ರಂದು ವಿತರಣೆ ಮಾಡಲಾದ ಸೀರೀಸ್-5ರ ಎಸ್​ಜಿಬಿ ಬಾಂಡ್​ನ ಮೌಲ್ಯ ಒಂದು ಗ್ರಾಮ್​ಗೆ 3,738 ರೂ ಇತ್ತು. ಈಗ 2026ರ ಏಪ್ರಿಲ್ 15ರಂದಿನ ಪ್ರೀಮೆಚ್ಯೂರ್ ರಿಡೆಂಪ್ಷನ್ ಆಫರ್​ನಲ್ಲಿ ಒಂದು ಗ್ರಾಮ್ ಮೌಲ್ಯ 15,009 ರೂ ಎಂದು ನಿಗದಿ ಮಾಡಲಾಗಿದೆ. ಈ ಆರೂವರೆ ವರ್ಷದಲ್ಲಿ ಬಾಂಡ್ ಮೌಲ್ಯ ಶೇ. 302ರಷ್ಟು ಹೆಚ್ಚಿದೆ.

ಒಂದು ಲಕ್ಷ ರೂ ಹೂಡಿಕೆಗೆ 4 ಲಕ್ಷ ರಿಟರ್ನ್ಸ್

2019ರಿಂದ 2026ರ ನಡುವೆ ಎಸ್​ಜಿಬಿ ಬಾಂಡ್ ಒಂದು ಯುನಿಟ್​ಗೆ 3,738 ರೂನಿಂದ 15,009 ರೂ ಆಗಿದೆ. ಅಂದರೆ ಸುಮಾರು 11,271 ರೂಗಳಷ್ಟು ಏರಿದೆ. ಈ ಸರಣಿಯ ಬಾಂಡ್​ನಲ್ಲಿ ನೀವು 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಪ್ರೀಮೆಚ್ಯೂರ್ ರಿಡೆಂಪ್ಷನ್​ನಲ್ಲಿ ಅದರ ಮೌಲ್ಯ 4.02 ಲಕ್ಷ ರೂ ಆಗಿರುತ್ತಿತ್ತು. ಹತ್ತು ಲಕ್ಷ ರೂ ಹೂಡಿಕೆ ಮಾಡಿದ್ದರೆ 40 ಲಕ್ಷ ರೂ ನಿಮ್ಮದಾಗಿರುತ್ತಿತ್ತು.

ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ಬಡ್ಡಿಯನ್ನೂ ಪರಿಗಣಿಸಿದರೆ ಇನ್ನೂ ಹೆಚ್ಚು ಲಾಭ

ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್​ನ ಇನ್ನೊಂದು ವಿಶೇಷತೆ ಎಂದರೆ, ಅದು ನೀಡುವ ಬಡ್ಡಿ ಆದಾಯ. ಈ ಸ್ಕೀಮ್​ನಲ್ಲಿ ನೀವು ಮಾಡಿದ ಹೂಡಿಕೆಗೆ ಶೇ. 2.5ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ವರ್ಷಕ್ಕೆ 2,500 ರೂ ಹಣವು ಹೆಚ್ಚುವರಿಯಾಗಿ ಸಿಗುತ್ತಿರುತ್ತದೆ. ಇದು ನಿಮ್ಮ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಜಮೆಯಾಗುತ್ತದೆ.

ಏನಿದು ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್?

ಭೌತಿಕ ಚಿನ್ನ ಖರೀದಿಸುವುದು ಬೇಡ, ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಬೇಕೆನ್ನುವವರಿಗೆ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಇತ್ಯಾದಿ ಮಾರ್ಗಗಳಿವೆ. ಇದರಲ್ಲಿ ಎಸ್​ಜಿಬಿ ಅಥವಾ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಬಹಳ ಜನಪ್ರಿಯವಾದುದು. ಎಂಟು ವರ್ಷದ ಈ ಸ್ಕೀಮ್​ನಲ್ಲಿ ಒಬ್ಬ ವ್ಯಕ್ತಿ ಒಂದು ಗ್ರಾಮ್​ನಿಂದ ಹಿಡಿದು 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್​ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ

ಬಾಂಡ್ ಬಿಡುಗಡೆಗೆ ಕೆಲ ದಿನಗಳ ಹಿಂದಿನ ಸರಾಸರಿ ಮಾರುಕಟ್ಟೆ ಬೆಲೆಯಾಧರಿಸಿ ಎಸ್​ಜಿಬಿಯ ಒಂದು ಯೂನಿಟ್ ಚಿನ್ನ ಬೆಲೆ ನಿಗದಿ ಮಾಡಲಾಗುತ್ತದೆ. ಮೆಚ್ಯೂರ್ ಆಗುವಾಗಲೂ ಹೀಗೆ ಸರಾಸರಿಯಾಗಿ ದರ ನಿಗದಿ ಮಾಡಲಾಗುತ್ತದೆ. ಅಷ್ಟೂ ಲಾಭವು ಹೂಡಿಕೆದಾರರ ಜೇಬು ಸೇರುತ್ತದೆ.

ಸದ್ಯ ಈ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಚಾಲ್ತಿಯಲ್ಲಿ ಇಲ್ಲ. ಅಂದರೆ, ಕಳೆದ ಕೆಲ ತಿಂಗಳುಗಳಿಂದ ಆರ್​ಬಿಐ ಯಾವುದೇ ಹೊಸ ಬಾಂಡ್ ಸರಣಿಗಳನ್ನು ಬಿಡುಗಡೆ ಮಾಡಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ